ರಮೇಶ್ ಮೈಸೂರುಬೆಂಗಳೂರು:ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ಪಾರದರ್ಶಕ ನೇಮಕಾತಿ ವಿಧಾನ ಹಾಗೂ ತ್ವರಿತ ಪ್ರಕ್ರಿಯೆಗೆ ಹೆಸರು ಗಳಿಸಿದೆ. ಆದರೆ, ಪ್ರಾದೇಶಿಕ ಭಾಷೆಗಳ ವಿಚಾರಕ್ಕೆ ಬಂದಾಗ ದಶಕಗಳ ಕೂಗಿಗೆ ಇನ್ನೂ ಬೆಲೆ ಸಿಕ್ಕಿಲ್ಲ. ಇದೀಗ ಪ್ರಸಕ್ತ ಸಾಲಿನ ನಾಗರಿಕ ಸೇವಾ ಹುದ್ದೆಗಳ ಪರೀಕ್ಷೆಗೆ ಯುಪಿಎಸ್​ಸಿ ಅಧಿಸೂಚನೆ ಹೊರಡಿಸಿದೆ. ಪೂರ್ವಭಾವಿ ಪರೀಕ್ಷೆಯ ಈ ಅಧಿಸೂಚನೆಯಲ್ಲಿ ಎಂದಿನಂತೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಬಹುದೆಂದು ಉಲ್ಲೇಖಿಸಲಾಗಿದೆ. ಆದರೆ, ಬ್ಯಾಂಕಿಂಗ್ ಹುದ್ದೆಗಳ ಪರೀಕ್ಷೆ ನಡೆಸುವ ಐಬಿಪಿಎಸ್ ಹಾಗೂ ಕೇಂದ್ರದ ಸಿಬ್ಬಂದಿ ಆಯ್ಕೆ ಆಯೋಗ (ಎಸ್​ಎಸ್​ಸಿ) ಕೂಡ ಕನ್ನಡದಲ್ಲಿ ಪರೀಕ್ಷೆ ನಡೆಸಲು ಸಮ್ಮತಿಸಿರುವುದರಿಂದ ಇಲ್ಲಿಯೂ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂಬ ಒತ್ತಾಯ ಈ ಸಲವೂ ಮತ್ತಷ್ಟು ಗಟ್ಟಿಯಾಗಿ ಕೇಳಿ ಬಂದಿದೆ. ಇದರಿಂದ ಎಲ್ಲ ಭಾಷಾ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ. ಪೂರ್ವಭಾವಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಇಲ್ಲ. ಮುಖ್ಯ ಪರೀಕ್ಷೆಯನ್ನು ಮಾತ್ರ ಕನ್ನಡದಲ್ಲಿ ಬರೆಯಬಹುದು.
ಆದರೆ ಅದರಿಂದಾಗುವ ಪ್ರಯೋಜನವೇನು ಎಂಬುದು ಆಕಾಂಕ್ಷಿಗಳ ಪ್ರಶ್ನೆ. ಪೂರ್ವಭಾವಿ ಪರೀಕ್ಷೆಯಲ್ಲಿ ನೀಡಲಾಗುವ ಕಾಂಪ್ರೆಹೆನ್ಷನ್- ಗದ್ಯಭಾಗ ಓದಿ ಪ್ರಶ್ನೆಗಳಿಗೆ ಉತ್ತರಿಸುವ ಪ್ರಶ್ನೆಗಳಿರುತ್ತವೆ. ಎಲ್ಲ ಪ್ರಶ್ನೆಗಳು ಹಿಂದಿಯಲ್ಲಿ ಅನುವಾದಿಸಿ ನೀಡುವುದರಿಂದ ಹಿಂದಿ ಭಾಷಿಕರು ಸುಲಭವಾಗಿ ಉತ್ತರಿಸಲು ಸಾಧ್ಯವಾಗುತ್ತದೆ. ಆದರೆ, ಈ ಸೌಲಭ್ಯ ಕನ್ನಡ ಸೇರಿ ಪ್ರಾದೇಶಿಕ ಭಾಷೆಯ ಅಭ್ಯರ್ಥಿಗಳಿಗೆ ಇಲ್ಲವಾಗಿದೆ. ಇಡೀ ನೇಮಕಾತಿ ಪ್ರಕ್ರಿಯೆಯನ್ನು ಹಿಂದಿ ಭಾಷೆಯಲ್ಲಿ ಪೂರ್ಣಗೊಳಿಸುವ ಅವಕಾಶ ಅವರಿಗೆ ನೀಡಿರುವಾಗ ಪ್ರಾದೇಶಿಕ ಭಾಷಾ ಅಭ್ಯರ್ಥಿಗಳನ್ನು ಎಲ್ಲಿಯವರೆಗೆ ಈ ಅನುಕೂಲದಿಂದ ವಂಚಿಸುತ್ತೀರಿ ಎಂಬ ಆಕ್ರೋಶಕ್ಕೆ ಯುಪಿಎಸ್​ಸಿ ಸ್ಪಂದಿಸುತ್ತಿಲ್ಲ.
ಆನ್​ಲೈನ್ ಪರೀಕ್ಷೆ ನಡೆಸಲಿ:ಸಂವಿಧಾನದ ಪರಿಚ್ಛೇದದಡಿಯಲ್ಲಿ ಮಾನ್ಯತೆ ಪಡೆದಿರುವ ಎಲ್ಲ ಭಾಷೆಗಳಲ್ಲೂ ಪರೀಕ್ಷೆ ನಡೆಸುವುದು, ಪ್ರಶ್ನೆಪತ್ರಿಕೆಗಳ ರಚನೆಗೆ ಪೂರ್ವಭಾವಿ ಪರೀಕ್ಷೆಯನ್ನು ಆನ್​ಲೈನ್​ನಲ್ಲಿ ನಡೆಸುವುದು ಸೂಕ್ತ ಎನ್ನುವುದು ತಜ್ಞರ ಅಭಿಪ್ರಾಯ. ಇದರಿಂದ ಮೌಲ್ಯಮಾಪನವು ತ್ವರಿತವಾಗುವುದಲ್ಲದೆ, ಪರೀಕ್ಷಾ ಪ್ರಕ್ರಿಯೆ ತ್ವರಿತವಾಗಲಿದೆ. ಪ್ರಸ್ತುತ ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷೆಗಳು ಆನ್​ಲೈನ್ ಮೋಡ್ ಅಳವಡಿಸಿಕೊಂಡಿವೆ.
ರೈಲ್ವೆಗೆ ಐಆರ್​ಎಂಎಸ್
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಯ ಮೂಲಕವೇ ಭಾರತೀಯ ರೈಲ್ವೆ ನಿರ್ವಹಣಾ ಸೇವೆಗೆ (ಐಆರ್​ಎಂಎಸ್) ಅಧಿಕಾರಿಗಳನ್ನು ನೇಮಿಸಿಕೊಳ್ಳಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ. ಪ್ರತ್ಯೇಕ ಐಆರ್​ಎಂಎಸ್ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳುವುದಾಗಿ ಈ ಹಿಂದೆ ಇಲಾಖೆ ಹೇಳಿಕೊಂಡಿತ್ತು. ರೈಲ್ವೆ ಸಚಿವಾಲಯವು ಯುಪಿಎಸ್​ಸಿ ಮತ್ತು ಡಿಒಪಿಟಿಯೊಂದಿಗೆ ಸಮಾಲೋಚಿಸಿ, ಭಾರತೀಯ ರೈಲ್ವೆ ನಿರ್ವಹಣಾ ಸೇವೆಗೆ ನೇಮಕಾತಿಯನ್ನು 2023ನೇ ವರ್ಷಕ್ಕೆ ಯುಪಿಎಸ್​ಸಿ ಮೂಲಕವೇ ನಡೆಸಲು ನಿರ್ಧರಿಸಿದೆ. ಈ ನಿರ್ಧಾರದ ಹಿಂದಿನ ಕಾರಣಗಳ ಬಗ್ಗೆ ಸಚಿವಾಲಯ ಯಾವುದೇ ಮಾಹಿತಿ ನೀಡಿಲ್ಲ. ಇಂಜಿನಿಯರಿಂಗ್ ಹೊರತಾದ ವಿಭಾಗದ ಅಧಿಕಾರಿಗಳಿಂದ ಒತ್ತಡ ಇದಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ.
1255 ಸಿಎಸ್ ಹುದ್ದೆಗಳು
2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆ ಹಾಗೂ ಭಾರತೀಯ ಅರಣ್ಯ ಸೇವಾ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಯುಪಿಎಸ್​ಸಿ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಫೆ.21ರವರೆಗೆ ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಮಾನ್ಯತೆ ಪಡೆದ, ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಪದವಿ ಅಂತಿಮ ವರ್ಷದಲ್ಲಿರುವವರು ಪೂರ್ವಭಾವಿ ಪರೀಕ್ಷೆಗೆ ಹಾಜರಾಗಬಹುದಾದರೂ ಮುಖ್ಯಪರೀಕ್ಷೆ ವೇಳೆಗೆ ಪದವಿ ಗಳಿಸಿರಬೇಕು. 2023ರ ಆಗಸ್ಟ್ 1ಕ್ಕೆ ಅನ್ವಯಿಸುವಂತೆ ಕನಿಷ್ಠ 21 ಹಾಗೂ ಗರಿಷ್ಠ 32 ವರ್ಷದೊಳಗಿನವರಾಗಿರಬೇಕು. ಭಾರತೀಯ ಅರಣ್ಯ ಸೇವೆ ಹುದ್ದೆಗಳಿಗೆ ಉಳಿದೆಲ್ಲ ನಿಯಮಗಳೇ ಅನ್ವಯವಾದರೂ, ವಿದ್ಯಾರ್ಹತೆ ಭಿನ್ನತೆಯಿದೆ. ಅಭ್ಯರ್ಥಿಗಳು ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಭೂಗರ್ಭಶಾಸ್ತ್ರ, ಗಣಿತ, ಭೌತಶಾಸ್ತ್ರ, ಲೆಕ್ಕಶಾಸ್ತ್ರ ಹಾಗೂ ಜೀವಿಶಾಸ್ತ್ರದಲ್ಲಿ ಪದವಿ ಪಡೆದಿರಬೇಕು. ನಾಗರಿಕ ಸೇವಾ ಹುದ್ದೆಗಳಿಗೆ ಮುಖ್ಯ ಪರೀಕ್ಷೆಯಲ್ಲಿ ಒಂಬತ್ತು ಪತ್ರಿಕೆಗಳಿದ್ದರೆ, ಅರಣ್ಯ ಸೇವೆಯಲ್ಲಿ ಆರು ಪತ್ರಿಕೆಗಳಿಗೆ ಉತ್ತರ ಬರೆಯಬೇಕಾಗುತ್ತದೆ.
ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರಿಗೂ ಈ ಪರೀಕ್ಷೆಗಳು ಅತ್ಯಂತ ಕಠಿಣ. ಹಿಂದಿ ಭಾಷಾ ಅಭ್ಯರ್ಥಿ ಗಳಂತೆ ಇತರ ಪ್ರಾದೇಶಿಕ ಭಾಷೆಗಳಿಗೂ ಯುಪಿಎಸ್​ಸಿ ಮನ್ನಣೆ ನೀಡಬೇಕಿದೆ.
| ವಿನಯ್ ಕುಮಾರ್ ಜಿ.ಬಿ.ಇನ್​ಸೈಟ್ ಐಎಎಸ್ ಅಕಾಡೆಮಿ ಮುಖ್ಯಸ್ಥ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
