| ಪಾ.ಶ್ರೀ.ಅನಂತರಾಮ್ ಕೋಲಾರ
ಸರ್ಕಾರಿ ಶಾಲೆಗಳಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ವಿದ್ದಲ್ಲಿ ಅಂತಹ ಶಾಲೆಗೆ ಮಕ್ಕಳನ್ನು ಸೇರಿಸಲು ಪಾಲಕರು ಮುಗಿಬೀಳುತ್ತಾರೆಂಬುದಕ್ಕೆ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ತ್ಯಾಗರಾಜ ಬಡಾವಣೆಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತಮ ನಿದರ್ಶನ.
ಭಾಷಾ ಅಲ್ಪಸಂಖ್ಯಾತ ಮಕ್ಕಳಿಗಾಗಿ ಇಲ್ಲಿಯ ಶಿಕ್ಷಕರೇ ತೆರೆದಿರುವ ಕನ್ನಡ ಪ್ರಯೋಗಾಲಯ ರಾಜ್ಯದಲ್ಲೇ ವಿನೂತನವಾದುದು ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.
ವಿನೂತನ ಪ್ರಯೋಗಾಲಯ ಕರೊನಾ ಹಿನ್ನೆಲೆಯಲ್ಲಿ ಶಾಲೆ ಆರಂಭಗೊಳ್ಳದಿದ್ದರೂ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗ ಬೇಕೆಂದು ಶಿಕ್ಷಣ ಇಲಾಖೆ ಸೂಚಿಸಿದಾಗ ಜುಲೈ-ಆಗಸ್ಟ್​ನಲ್ಲಿ 15ಕ್ಕೂ ಹೆಚ್ಚು ಶಿಕ್ಷಕರು ಕನ್ನಡ ಪ್ರಯೋಗಾಲಯ ರಚನೆ ಸಂಬಂಧ ರ್ಚಚಿಸಿದರು. ತರಗತಿಯ ಕೊಠಡಿ ಆಯ್ಕೆ ಮಾಡಿಕೊಂಡು ಕೆಂಪು ಮತ್ತು ಹಳದಿ ಬಣ್ಣ ಬಳಿದು, ಇಡೀ ಕೊಠಡಿಯನ್ನು 15 ದಿನಗಳಲ್ಲಿ ಕನ್ನಡ ಅಕ್ಷರಮಾಲೆಯಿಂದ ಸಿಂಗರಿಸಿದರು. ಕನ್ನಡ ವರ್ಣಮಾಲೆಯ ಅಕ್ಷರದ ಆಕೃತಿ ರಚಿಸಿ ಪದಗಳಿಗೆ ಅರ್ಥವನ್ನು ಸುಲಭವಾಗಿ ತಿಳಿಯುವಂತೆ ವಿನ್ಯಾಸಗೊಳಿಸಿದರು.
ಶಿಕ್ಷಕರೇ ಸ್ವತಃ 23,500 ರೂ. ವ್ಯಯಿಸಿ ರಚಿಸಿರುವ ಈ ಕನ್ನಡ ಪ್ರಯೋಗಾಲಯದಲ್ಲಿ 100ಕ್ಕೂ ಹೆಚ್ಚು ಕಲಿಕಾ ಚಾರ್ಟ್​ಗಳನ್ನು ಅಳವಡಿಸಲಾಗಿದೆ. ಕನ್ನಡ ಅಕ್ಷರ ಮಾಲೆಯ ಜತೆಗೆ ನಾಡಿನ ಸಾಹಿತ್ಯ, ಸಂಸ್ಕೃತಿಯನ್ನು ಪರಿಚಯಿಸಲಾಗಿದೆ. ಕನ್ನಡ ಗೊತ್ತಿಲ್ಲದ ಮಕ್ಕಳು ಸುಲಭವಾಗಿ ಭಾಷೆ ಅರ್ಥ ಮಾಡಿಕೊಳ್ಳಲು ಈ ಪ್ರಯೋಗಾಲಯ ಪ್ರೇರಣೆ ನೀಡುತ್ತಿದೆ. ಅದು ಮಕ್ಕಳನ್ನು ಎಷ್ಟು ಆಕರ್ಷಿಸಿದೆಯೆಂದರೆ ವಿದ್ಯಾಗಮ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು, ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ಮಕ್ಕಳು ಈ ಶಾಲೆಯಲ್ಲಿಯೇ ಓದುವುದಾಗಿ ಪಾಲಕರ ಮೇಲೆ ಒತ್ತಡ ತಂದು ಪ್ರವೇಶ ಪಡೆದುಕೊಂಡಿದ್ದಾರೆ. ಪರಿಣಾಮವಾಗಿ ಈ ಶಾಲೆಯಲ್ಲಿ 1ರಿಂದ 8ನೇ ತರಗತಿಯವರೆಗೆ ಈಗ 330 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 182 ಮಕ್ಕಳು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − three =
Remember me
