ಬೆಳಗಾವಿ:ಕರ್ನಾಟಕದಲ್ಲಿ ವಾಸಿಸುತ್ತಿರುವ ಬಡ ಮರಾಠಾ ಜನಾಂಗದ ಅಭಿವೃದ್ಧಿಗಾಗಿ ಸರ್ಕಾರವು ರಚಿಸಿದ ನಿಗಮದ ಕಾರಣವಾಗಿ ಕೆಲ ಕನ್ನಡ ಸಂಘಟನೆಗಳು ಬಂದ್ ಕರೆ ನೀಡಿರುವ ಹೊತ್ತಿನಲ್ಲಿಯೇ ಕನ್ನಡಿಗರೂ, ಮರಾಠಾ ಜನರೂ ಸಂತೋಷ ಪಡುವ ಆಹ್ಲಾದಕರ ಸುದ್ದಿಯೊಂದು ಬಂದಿದೆ.
ಕಳೆದ ಮೂವತ್ತು ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಶಿವ ಚರಿತ್ರ ವೈಭವವೆಂಬ light , sound and music ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮ ಐದು ಗಂಟೆಗಳ ಕಾರ್ಯಕ್ರಮ. ಶಿವಾಜಿ ಮಹಾರಾಜರ ಹುಟ್ಟಿನಿಂದ ಆರಂಭವಾಗುವ ಈ ಕಾರ್ಯಕ್ರಮವು ಅವರ ಸಿಂಹಾಸನಾರೋಹಣ ಘಟನೆಯೊಂದಿಗೆ ಮುಕ್ತಾಯವಾಗುತ್ತದೆ. ಈ ಕಾರ್ಯಕ್ರಮವು ಸಂಗೀತ, ಬೆಳಕು, ಹಾಡು, ಘಟನೆಗಳ ವಿವರಗಳಿಂದ ತುಂಬ ಲವಲವಿಕೆಯಿಂದ ಕೂಡಿರುತ್ತದೆ. ಐದು ನೂರಕ್ಕೂ ಹೆಚ್ಚು ಕಲಾವಿದರು, ಜೀವಂತ ಆನೆ, ಕುದುರೆಗಳೂ ಕಾರ್ಯಕ್ರಮದ ಆಕರ್ಷಣೆ. ಕಾರ್ಯಕ್ರಮದ ಆರಂಭದಲ್ಲಿ ದೇವರನ್ನು ಸ್ತುತಿಸುವ ನಾಂದಿ ಹಾಡೊಂದಿದೆ. ಈ ಹಾಡನ್ನು ಪ್ರತಿ ಪ್ರಯೋಗದ ಆರಂಭದಲ್ಲಿ ಹಾಡುತ್ತಾರೆ. ತಮ್ಮ ಈ ಪ್ರಯೋಗಕ್ಕೆ ದೇವಾನುದೇವತೆಗಳು ಬಂದು ಆಶೀರ್ವದಿಸಬೇಕೆಂಬ ಆಶಯ ಈ ನಾಂದಿ ಹಾಡಿನಲ್ಲಿದೆ.
“ತುಂಬ ಆಶ್ಚರ್ಯವಾಗಿದ್ದು ಈ ನಾಂದಿ ಪದ್ಯದಲ್ಲಿ ‘ಕನ್ನಡ ಲಕ್ಷ್ಮೀ’ಯನ್ನು ಆಹ್ವಾನಿಸಿ ಅವಳ ಆಶೀರ್ವಾದವನ್ನು ಕೇಳಿದ್ದು. ಕನ್ನಡ ಲಕ್ಷ್ಮೀ ಜತೆಗೆ ತೆಲಂಗಾಣ ಲಕ್ಷ್ಮೀ, ಅಂಬಾಭವಾನಿ, ಅಷ್ಟಭುಜಾದೇವಿ ಹಾಗೂ ಇತರ ದೇವದೇವತೆಯರನ್ನೂ ಆಹ್ವಾನಿಸುವ ಸಾಲುಗಳು ಈ ನಾಂದಿ ಪದ್ಯದಲ್ಲಿವೆ. ಇದರಲ್ಲಿರುವ ಕನ್ನಡ ಲಕ್ಷ್ಮೀ ಎಲ್ಲರ ಆಸಕ್ತಿಯನ್ನು ಕೆರಳಿಸುತ್ತಿದೆ. ಈ ನಾಂದಿ ಪದ್ಯ ಯಾರು ರಚಿಸಿದ್ದಾರೆಂಬುದು ಈ ಕಾರ್ಯಕ್ರಮದ script ಬರೆದ ಸುಪ್ರಸಿದ್ಧ ಲೇಖಕ ಬಾಬಾಸಾಹೇಬ ಪುರಂದರೆಯವರಿಗೂ ಗೊತ್ತಿಲ್ಲವಂತೆ! ಯಾವುದೋ ಹಳೆಯ ಭಕ್ತಿಗೀತೆಯನ್ನು ಅವರು ಎತ್ತಿ ತಮ್ಮ ಈ ಕಾರ್ಯಕ್ರಮದ ನಾಂದಿ ಗೀತೆಯನ್ನಾಗಿಸಿದ್ದಾರಂತೆ. ಅವರ ಈ ಕಾರ್ಯಕ್ರಮವು ಮಹಾರಾಷ್ಟ್ರದಾದ್ಯಂತ ಸಾವಿರಾರು ಪ್ರಯೋಗಗಳನ್ನು ಕಂಡಿದೆ” ಎಂದು ಹಿರಿಯ ಸಾಹಿತಿ, ಪತ್ರಕರ್ತ ಡಾ. ಸರಜೂ ಕಾಟ್ಕರ್ ತಿಳಿಸಿದ್ದಾರೆ.
ಈ ನಾಟ್ಯ ಕಾರ್ಯಕ್ರಮದ ಮೂಲ ಪದ್ಯವನ್ನೂ ಅದರ ಕನ್ನಡ ಅನುವಾದವನ್ನೂ ಹಂಚಿಕೊಂಡಿದ್ದಾರೆ.ತುಳಜಾಪೂರದ ಭವಾನಿದೇವಿ ಉತ್ಸವಕ್ಕೆ ಬಾಮಾಹುರಗಡದ ಲಕ್ಷ್ಮೀ ದೇವಿ ಉತ್ಸವಕ್ಕೆ ಬಾಕೊಲ್ಹಾಪುರದ ಅಂಬಾಭವಾನಿ ಉತ್ಸವಕ್ಕೆ ಬಾಕನ್ನಡ ಲಕ್ಷ್ಮೀ ಉತ್ಸವಕ್ಕೆ ಬಾತೆಲಂಗಣ ಲಕ್ಷ್ಮೀ ಉತ್ಸವಕ್ಕೆ ಬಾಅಷ್ಟಭುಜಾದೇವಿ ಉತ್ಸವಕ್ಕೆ ಬಾಚಂದ್ರ ಸೂರ್ಯರೇ ಬನ್ನಿ, ಸಪ್ತ ಸಾಗರಗಳೇ ಬನ್ನಿ, ಗ್ರಹ ನಕ್ಷತ್ರಗಳೇ ಬನ್ನಿ,ದೇವ ದೇವತೆಗಳೇ, ಸಂತ ಸಜ್ಜನರೇ ಉತ್ಸವಕ್ಕೆ ಬನ್ನಿಸ್ವರಾಜ್ಯದ ಸಂಕಲ್ಪವನು ರಚಿಸಿದ್ದೇವೆ, ಉತ್ಸವಕ್ಕೆ ಬನ್ನಿ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × five =
Remember me
