ಬೆಂಗಳೂರು: ಕನ್ನಡ ಮಾತನಾಡಿದರೆ ದಂಡ ವಿಧಿಸುತ್ತಾರೆ, ನಾವೇನು ಮಾಡಬೇಕು? ಕನ್ನಡ ಬೋಧನೆಗೆ ಹೆಚ್ಚಿನ ಸಮಯ ನೀಡಿಲ್ಲ.. ಇದಕ್ಕೆ ಯಾರನ್ನು ದೂಷಿಸಬೇಕು? ಕೇಂದ್ರ ಪಠ್ಯಕ್ರಮವಿರುವ ಶಾಲೆಯಲ್ಲಿ ಕನ್ನಡ ಬೋಧನೆಗೆ ಅವಕಾಶವಿಲ್ಲ.. ಇದಕ್ಕೆ ಏನು ಪರಿಹಾರ?
-ಈ ರೀತಿಯ ಹತ್ತು ಹಲವು ಪ್ರಶ್ನೆಗಳನ್ನು ಖಾಸಗಿ ಶಾಲೆಗಳಲ್ಲಿ ಕನ್ನಡ ಬೋಧನೆ ಮಾಡುತ್ತಿರುವ ಶಿಕ್ಷಕರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
ಸುರೇಶ್​ಕುಮಾರ್​ಗೆ ನೇರವಾಗಿ ಕೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ವಸಂತನಗರ ಮೌಂಟ್ ಕಾರ್ವೆಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ಬೋಧನಾ ಅನುಷ್ಠಾನ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಶಿಕ್ಷಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಪರೀಕ್ಷೆ ನಡೆಸಿ:ಸರ್ಕಾರಿ ನೌಕರರ ನೇಮಕಾತಿಯಲ್ಲಿ ಕನ್ನಡ ಮಾಧ್ಯಮದಲ್ಲೂ ಪರೀಕ್ಷೆ ನಡೆಯಬೇಕು, ರಾಜ್ಯದ ಖಾಸಗಿ ಶಾಲೆಗಳಲ್ಲಿ ಕನ್ನಡ ಹೊರತುಪಡಿಸಿ ಉಳಿದ ವಿಷಯಗಳನ್ನು ಬೋಧಿಸುವ ಶಿಕ್ಷಕರಿಗೆ ಕನ್ನಡ ಪರೀಕ್ಷೆಗಳನ್ನು ನಡೆಸುವಂತೆ ಖಾಸಗಿ ಶಾಲೆಗಳ ಕನ್ನಡ ಶಿಕ್ಷಕರು ಮನವಿ ಮಾಡಿದರು.
ಈ ಸಲಹೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸುರೇಶ್​ಕುಮಾರ್, ಇದೊಂದು ಉತ್ತಮ ಸಲಹೆಯಾಗಿದೆ. ಇಲಾಖೆ ವತಿಯಿಂದ ನಿರ್ಣಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಐಸಿಎಸ್​ಇ ಹಾಗೂ ಸಿಬಿಎಸ್​ಇ ಶಾಲೆಗಳಲ್ಲಿ ಕನ್ನಡ ಶಿಕ್ಷಕರನ್ನು ಕೀಳಾಗಿ ನೋಡುತ್ತಾರೆ. ಆಡಳಿತ ಮಂಡಳಿಗಳು ವೇತನ ತಾರತಮ್ಯ ಮಾಡುತ್ತಿವೆ. ಈ ಎಲ್ಲ ವಿಚಾರಗಳಿಂದ ಕನ್ನಡ ಬೋಧನೆ ಮಾಡುವ ಆಸೆ ಇದ್ದರೂ ಸುಮ್ಮನಾಗಬೇಕಾದ ಪರಿಸ್ಥಿತಿ ನಿರ್ವಣವಾಗಿದೆ ಎಂದರು.
ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ. ಮುರಳೀಧರ, ಬೆಂಗಳೂರು ದಕ್ಷಿಣ ಡಿಡಿಪಿಐ ರಾಜೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಸಲೀಂ ಪಾಷಾ ಮತ್ತಿತರರು ಉಪಸ್ಥಿತರಿದ್ದರು.
ಉದಾಸೀನ ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ:ಕನ್ನಡ ಬೋಧನೆಯಲ್ಲಿ ಉದಾಸೀನ ಮನೋಭಾವ ತೋರಿಸಿದರೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದು ನಮಗೆ ಚೆನ್ನಾಗಿ ತಿಳಿಸಿದೆ ಎಂದು ಸುರೇಶ್​ಕುಮಾರ್ ಎಚ್ಚರಿಕೆ ನೀಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ 2015ರಲ್ಲಿ ನಿಯಮಗಳನ್ನು ಜಾರಿಗೊಳಿಸಿದ್ದು, 2017-18ನೇ ಸಾಲಿನಿಂದ ರಾಜ್ಯದ ಶಾಲೆಗಳಲ್ಲಿ ನಿಯಮವನ್ನು ಅನುಷ್ಠಾನ ಮಾಡಲಾಗಿದೆ. ಐಸಿಎಸ್​ಇ, ಸಿಬಿಎಸ್​ಇ ಹಾಗೂ ಕೇಂದ್ರೀಯ ವಿದ್ಯಾಲಯಗಳಲ್ಲಿ 1ನೇ ತರಗತಿಯಿಂದಲೇ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು ಎಂದರು.
ಸಚಿವರಿಗೆ ಸಲಹೆಗಳು:
ನೆಲದ ಭಾಷೆ ಕಲಿಸಲು ಪೊಲೀಸ್ ರೀತಿ ಕೆಲಸ ಮಾಡಬೇಕಾಗಿರುವುದು ದುರಂತ. ಕನ್ನಡದ ಕೆಲಸಗಳನ್ನು ಸರ್ಕಾರಗಳು ಸರಿಯಾಗಿಯೇ ಮಾಡುತ್ತಿವೆ. ಆದರೆ, ಅವು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಶಾಲೆಗಳಿಗೆ ಕನ್ನಡ ಕಲಿಸಲು ಸಮಸ್ಯೆ ಏನು?
| ಟಿ.ಎಸ್. ನಾಗಾಭರಣಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 4 =
Remember me
