|ಮರಿದೇವ ಹೂಗಾರಹುಬ್ಬಳ್ಳಿ
ನವೆಂಬರ್ ತಿಂಗಳು ಬಂತೆಂದರೆ ಕನ್ನಡ ಜಾಗೃತಿ ಎಲ್ಲರಲ್ಲೂ ಪುಟಿದೇಳುತ್ತದೆ. ಆಡಳಿತದಲ್ಲಿ ಕನ್ನಡ ಜಾರಿಗೆ ಒತ್ತು ನೀಡಲಾಗಿದೆ ಎಂಬ ರಾಜ್ಯ ಸರ್ಕಾರದ ಪ್ರತಿಧ್ವನಿ ಕೇಳಿ ಬರುತ್ತದೆ. ಆದರೆ, ಆಡಳಿತ ನಡೆಸಲು ಐಎಎಸ್ ಮಾದರಿಯ ಕೆಎಎಸ್​ನಲ್ಲೂ ಕನ್ನಡ ಮಾಧ್ಯಮ ಓದಿದವರು ಪಾಸೋಗೋದು ಕಡಿಮೆ!
ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಗೆಜೆಟೆಡ್ ಪ್ರೊಬೇಷನರ್ ನೇಮಕಾತಿಯಲ್ಲಿ ಕನ್ನಡ ಮಾಧ್ಯಮದವರಿಗಿಂತ ಆಂಗ್ಲ ಮಾಧ್ಯಮದಲ್ಲಿ ಓದಿದವರೇ ಹೆಚ್ಚಾಗಿ ಪಾಸಾಗಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಇದಕ್ಕೆ ಪೂರಕವಾದ ಅಂಕಿ-ಅಂಶಗಳು ಬಹಿರಂಗಗೊಳಿಸಿವೆ. 2015ನೇ ಸಾಲಿನಲ್ಲಿ 428 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ ತೆಗೆದುಕೊಂಡವರು 4600 ಅಭ್ಯರ್ಥಿಗಳು, ಅಂತಿಮ ಪಟ್ಟಿಯಲ್ಲಿ 115 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 2017-18ನೇ ಸಾಲಿನ 106 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆದಿತ್ತು. 650 ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆದಿದ್ದು, 43 ಅಭ್ಯರ್ಥಿಗಳು ಸಂದರ್ಶನಕ್ಕೆ ಆಯ್ಕೆಯಾಗಿದ್ದರು. 10 ಜನ ಮಾತ್ರ ಅಂತಿಮ ಪಟ್ಟಿಯಲ್ಲಿ ಆಯ್ಕೆಯಾಗಿ ಅಧಿಕಾರಿಗಳಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದು ಅಧಿಕಾರಿಗಳಾಗಿ ಆಯ್ಕೆಯಾಗುತ್ತಿರುವುದು ಕಣ್ಣಿಗೆ ಗೋಚರಿಸುತ್ತಿದ್ದು, ಕನ್ನಡ ಮಾಧ್ಯಮ ಓದಿದ ಅಭ್ಯರ್ಥಿಗಳಲ್ಲಿ ನಿರಾಸೆ ಮೂಡಿಸಿದೆ.
ಕೆಪಿಎಸ್​ಸಿ ಗೆಜೆಟೆಡ್ ಹುದ್ದೆಗಳ ಪ್ರಶ್ನೆಪತ್ರಿಕೆ ಮೌಲ್ಯಮಾಪನವನ್ನು ಆಂಗ್ಲ ಭಾಷೆ ಪರಿಣತರೇ ಮಾಡುತ್ತಿದ್ದಾರೆ. ಕನ್ನಡ ಭಾಷೆ ಬಲ್ಲವರನ್ನು ಮೌಲ್ಯಮಾಪನಕ್ಕೆ ನೇಮಕ ಮಾಡಿಕೊಳ್ಳಬೇಕು. ಕನ್ನಡ ಪರಿಣಾಮಕಾರಿ ಆಡಳಿತ ಭಾಷೆಯಾಗಲು ಕನ್ನಡ ಮಾಧ್ಯಮದವರು ಆಯ್ಕೆಯಾಗಬೇಕೆಂದು ಕೆಪಿಎಸ್​ಗೆ ಪತ್ರ ಬರೆದಿದ್ದೇನೆ.
|ಡಾ.ಟಿ.ಎಸ್. ನಾಗಾಭರಣಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ಗಮಿತ ಅಧ್ಯಕ್ಷ
ಖಾಲಿ ಹುದ್ದೆಗಳ ಭರ್ತಿಗೆ ಪ್ರತಿ ವರ್ಷ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಬೇಕೆಂದು ಪಿ.ಸಿ. ಹೋಟಾ ಸಮಿತಿ ಹೇಳಿದೆ. ಆದರೂ ಕಾಲಕಾಲಕ್ಕೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಆದರೆ, ಕನ್ನಡ ಮಾಧ್ಯಮದಲ್ಲಿ ಓದಿದವರು ಕೆಪಿಎಸ್​ಸಿಯಲ್ಲಿ ಪಾಸಾಗುವುದು ಕೂಡ ಕಡಿಮೆ ಎಂಬುದು ದಾಖಲೆಗಳೇ ಹೇಳುತ್ತಿವೆ.
ಪ್ರಶ್ನೆಗೆ ಸಿಕ್ಕಿಲ್ಲ ಉತ್ತರ:ಕನ್ನಡ ಮಾಧ್ಯಮದವರು ಕೆಪಿಎಸ್​ಸಿಯಲ್ಲಿ ಹೆಚ್ಚಾಗಿ ಏಕೆ ತೇರ್ಗಡೆಯಾಗುತ್ತಿಲ್ಲ. ತೇರ್ಗಡೆಯಾಗಲು ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕೆಪಿಎಸ್​ಸಿಗೆ ಪತ್ರ ಬರೆದಿದೆ. ಇದಕ್ಕೆ ಮೌಖಿಕ ಉತ್ತರ ಲಭಿಸಿದ್ದು ಬಿಟ್ಟರೆ ಮತ್ಯಾವುದೇ ಕ್ರಮಗಳಾಗಿಲ್ಲ ಎಂಬ ಆರೋಪವಿದೆ.
ಟ್ವಿಟರ್​ಗೆ ಎಲಾನ್ ಮಸ್ಕ್ ಮಾಲೀಕತ್ವ; ಮರಳಿ ಸಿಗುತ್ತಾ ನಟಿ ಕಂಗನಾಗೆ ಟ್ವಿಟರ್ ಅಕೌಂಟ್?
ಪತಿ ಮೂರು ದಿನಗಳಿಂದ ನಾಪತ್ತೆ; ಮನೆಯಲ್ಲಿ ಪತ್ನಿಯ ಶವ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 8 =
Remember me
