ಡಾ. ಸಿದ್ಧಲಿಂಗಯ್ಯನವರು ದಲಿತ & ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಕವಿ & ಹೋರಾಟಗಾರ. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾಗಿ ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ ಸಿದ್ಧಲಿಂಗಯ್ಯ ಸಮಕಾಲೀನ ಸಾಹಿತ್ಯ ಕ್ಷೇತ್ರದ ಪ್ರಮುಖ ಬರಹಗಾರರಲ್ಲಿ ಒಬ್ಬರಾಗಿದ್ದರು. ಕಾವ್ಯ ಮತ್ತು ಹೋರಾಟದ ಮೂಲಕ ದಮನಿತರ ಪರ ದನಿ ಎತ್ತಿದವರು, ದಲಿತರಿಗೆ ಧ್ವನಿಯಾದವರು.
ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಕನ್ನಡ ಸಾಹಿತ್ಯ ಹೊಸ ಚಿಂತನೆಗೆ ಹೊರಳುವ ಕಾಲದಲ್ಲಿ ದಲಿತ ಜನಾಂಗದ ದನಿಯಾಗಿ ಕವನಗಳನ್ನು ರಚಿಸಿದವರು ಡಾ. ಸಿದ್ಧಲಿಂಗಯ್ಯ. ಅವರ ವೈಯಕ್ತಿಕ ಅನುಭವಗಳೇ ಆ ಕವನಗಳ ಹೂರಣ. ತುಳಿತಕ್ಕೆ ಒಳಗಾದ ತಮ್ಮ ಜನರ ಆಕ್ರೋಶ, ಅಸಹಾಯಕತೆಯನ್ನು ಕವಿತೆಯ ಮೂಲಕ ಹೊರಹಾಕಿ ಪ್ರತಿಭಟಿಸಿದರು. ಒಂದೇ ಧರ್ಮದ ಜಾತಿಗಳ ನಡುವಿನ ಅಸಮಾನತೆಯನ್ನು ತೆರೆದಿಟ್ಟರು. ವಿದ್ಯಾರ್ಥಿ ದೆಸೆಯಿಂದಲೇ ಸಮಾಜದಲ್ಲಿನ ಅಸಮಾನತೆಗಳ ಬಗ್ಗೆ ತಮ್ಮೊಳಗೆ ಮೊಳೆಯುತ್ತಿದ್ದ ಸಿಟ್ಟು, ಆಕ್ರೋಶಗಳನ್ನು ಕಾವ್ಯಮಾಧ್ಯಮದ ಮೂಲಕ ವ್ಯಕ್ತಪಡಿಸಿದರು. ಸಿದ್ಧಲಿಂಗಯ್ಯನವರ ಕಾವ್ಯಗಳಲ್ಲಿ ಶತಮಾನಗಳ ನೋವು, ಅವಮಾನ, ಹಸಿವುಗಳ ಒಳಸಂಕಟ ಪ್ರತಿಕ್ರಿಯಾತ್ಮಕವಾಗಿ ದನಿಯೆತ್ತಿದ್ದವು. ಅದುವರೆಗೆ ಜಡ್ಡುಗಟ್ಟಿದಂತಿದ್ದ ಕನ್ನಡ ಕಾವ್ಯಕ್ಕೆ ಸಿದ್ಧಲಿಂಗಯ್ಯನವರ ಈ ಬಗೆಯ ರಚನೆಗಳು ಹೊಸ ಚುರುಕನ್ನು, ಭಾಷಾ ಪ್ರಯೋಗದ ಹೊಸತನವನ್ನು ಪರಿಚಯಿಸಿದವು. ಅವರ ನಾಟಕಗಳೂ ಅಷ್ಟೇ. ಧಾರ್ಮಿಕ ಹಾಗೂ ರಾಜಕೀಯ ಸಂರ್ಷ ಸ್ಮೂಗಳನ್ನು ಒಳಗೊಂಡಿದ್ದವು. ದಲಿತ ಸಂವೇದನೆಯ ಒಳನೋಟಗಳನ್ನು ತುಂಬಿಕೊಂಡಂತೆ ಪುರಾಣ, ಇತಿಹಾಸ ಮತ್ತು ವರ್ತಮಾನವನ್ನೂ ಮುಖಾಮುಖಿಯಾಗಿಸಿದವು. ಸಿದ್ಧಲಿಂಗಯ್ಯ ನಿರಂತರವಾಗಿ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತ ಬಂದಿದ್ದರು. ಜಾನಪದ ಸಾಹಿತ್ಯ ಸಂಪಾದಕ ಮಂಡಳಿ, ಅಂಬೇಡ್ಕರ್​ ಕೃತಿಗಳ ಕನ್ನಡ ಭಾಷಾಂತರ ಮತ್ತು ಸಂಪಾದನಾ ಸಮಿತಿ, ರಾಮಮನೋಹರ ಲೋಹಿಯಾ ಅವರ ಕೃತಿಗಳ ಭಾಷಾಂತರ ಮತ್ತು ಸಂಪಾದನಾ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿ ಮುಂತಾದವುಗಳಲ್ಲಿ ಸದಸ್ಯರಾಗಿದ್ದರು.
ಹೋರಾಟದ ಹೆಜ್ಜೆಗಳುಸಿದ್ಧಲಿಂಗಯ್ಯ ಕವಿ, ಸಾಹಿತಿ ಮಾತ್ರವಲ್ಲ ಹಲವು, ಚಳವಳಿ ಗಳನ್ನು ರೂಪಿಸಿದ, ಮುನ್ನಡೆಸಿದ ಶಕ್ತಿಯೂ ಆಗಿದ್ದರು. ಬಂಡಾಯ, ರೈತ ಚಳವಳಿ, ಬೂಸಾ ಚಳವಳಿ ಇವೆಲ್ಲವುಗಳಲ್ಲಿ ಅವರ ಕ್ರಿಯಾಶೀಲ ಭಾಗವಹಿಸುವಿಕೆ ಕೆಲಸ ಮಾಡಿತ್ತು. ಬೂಸಾ ಸಾಹಿತ್ಯ ಚಳವಳಿಯ ಮಂಚೂಣಿಯಲ್ಲಿದ್ದ ಸಿದ್ಧಲಿಂಗಯ್ಯ ದಲಿತ ಸಂರ್ಷ ಸಮಿತಿ ಮತ್ತು ಬಂಡಾಯ ಸಾಹಿತ್ಯ ಸಂಟನೆಗಳ ಸ್ಥಾಪಕ ಸದಸ್ಯರು. ಅವುಗಳ ಹೋರಾಟಕ್ಕೆ ಕೆಚ್ಚು ತುಂಬಿದವರು.
ಬಡತನದ ಬಾಲ್ಯ1954ರ ಫೆಬ್ರವರಿ 3ರಂದು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ಜನನ. ತಂದೆ ದೇವಯ್ಯ, ತಾಯಿ ವೆಂಕಟಮ್ಮ. ಬಾಲ್ಯದುದ್ದಕ್ಕೂ ಬಡತನ. ಮಾಗಡಿಯ ಹೊಸಹಳ್ಳಿಯ ಬಿಸಿಲಮ್ಮನ ಗುಡಿಯಲ್ಲಿ ಅರಾಭ್ಯಾಸ ಪ್ರಾರಂಭ. ಬಳಿಕ ಮಲ್ಲೆಶ್ವರದ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರ. ಚಿಕ್ಕಂದಿನಿಂದಲೇ ಕವಿತೆ ಬರೆಯುವ ಅಭ್ಯಾಸ. ಭಾಷಣ ಮಾಡುವ ಹವ್ಯಾಸ. ಅಂಬೇಡ್ಕರ್​, ಪೆರಿಯಾರ್​, ವಸುದೇವ ಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳ ಆಕರ್ಷಣೆ. 1974ರಲ್ಲಿ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಕನ್ನಡ ಬಿ.ಎ. ಆನರ್ಸ್​. 1976ರಲ್ಲಿ ಬೆಂಗಳೂರು ವಿವಿಯಲ್ಲಿ ಸ್ವರ್ಣ ಪದಕದೊಂದಿಗೆ ಸ್ನಾತಕೋತ್ತರ ಪದವಿ. 1989ರಲ್ಲಿ ಬೆಂಗಳೂರು ವಿವಿಯಲ್ಲಿ “ಗ್ರಾಮ ದೇವತೆಗಳು’ ಪ್ರೌಢಪ್ರಬಂಧ ಮಂಡಿಸಿ ಪಿಎಚ್​ಡಿ ಪಡೆದರು. ಅದಕ್ಕೆ ರಾಷ್ಟ್ರಕವಿ ಡಾ. ಜಿ.ಎಸ್​. ಶಿವರುದ್ರಪ್ಪನವರ ಮಾರ್ಗದರ್ಶನ. ನಂತರ ಬೆಂಗಳೂರು ವಿವಿಯಲ್ಲಿ ಅಧ್ಯಾಪಕ ವೃತ್ತಿ. ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಹುದ್ದೆ ನಿರ್ವಹಣೆ. 11 ಮಂದಿಗೆ ಎಂ. ಫಿಲ್​, 8 ಮಂದಿಗೆ ಪಿಎಚ್​ಡಿ ಮಾರ್ಗದರ್ಶನ.
ಕನ್ನಡ ಚಿತ್ರರಂಗದಲ್ಲಿ ಛಾಪು…ಕನ್ನಡ ಚಿತ್ರರಂಗದಲ್ಲೂ ಸಿದ್ಧಲಿಂಗಯ್ಯನವರ ಸಾಹಿತ್ಯ ಸೃಜನೆ ಜನಮನ್ನಣೆ ಗಳಿಸಿತ್ತು. ಅವರ ಹಲವು ಕವನಗಳು ಚಿತ್ರಗಿತೆಗಳಾಗಿಯೂ ಜನಪ್ರಿಯವಾಗಿವೆ. ಪುಟ್ಟಣ್ಣ ಕಣಗಾಲ್​ ನಿರ್ದೇಶನದ “ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದ ಗೀತೆಗಾಗಿ ಸಿದ್ಧಲಿಂಗಯ್ಯ ಅವರಿಗೆ 1983&84ರ ರಾಜ್ಯಪ್ರಶಸ್ತಿ ದೊರಕಿತ್ತು. “ಆ ಬೆಟ್ಟದಲ್ಲಿ, ಬೆಳದಿಂಗಳಲ್ಲಿ, ಸುಳಿದಾಡಬೇಡ ಗೆಳತಿ’ ಎಂಬ ಅವರ ಜನಪ್ರಿಯ ಕವಿತೆ “ಬಾ ನಲ್ಲೆ ಮಧುಚಂದ್ರಕೆ’ ಚಲನಚಿತ್ರದಲ್ಲಿನ ಜನಪ್ರಿಯ ಚಿತ್ರಗಿತೆಯಾಗಿ ಮೂಡಿಬಂತು.

| ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿ

| ಸಿದ್ದರಾಮಯ್ಯ ವಿಧಾನಸಭೆ ವಿರೋಧ ಪದ ನಾಯಕ
ಪ್ರಧಾನಿ ಮೋದಿ ಸಂತಾಪಕವಿ ಸಿದ್ಧಲಿಂಗಯ್ಯ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಶೋಕ ವ್ಯಕ್ತಪಡಿಸಿದ್ದಾರೆ. ಡಾ. ಸಿದ್ಧಲಿಂಗಯ್ಯ ಬರಹ, ಕವನ, ಸಾಮಾಜಿಕ ನ್ಯಾಯಕ್ಕಾಗಿ ಮಾಡಿದ ಹೋರಾಟದಿಂದ ಜನಮಾನಸದಲ್ಲಿ ಯಾವತ್ತೂ ಇರುತ್ತಾರೆ. ಅವರ ಕುಟುಂಬದವರು ಮತ್ತು ಅಭಿಮಾನಿಗಳ ದು@ಖದಲ್ಲಿ ನಾನೂ ಭಾಗಿ. ಓಂ ಶಾಂತಿ ಎಂದು ಟ್ವೀಟ್​ ಮಾಡಿದ್ದಾರೆ.
ಸಂಕೇಶ್ವರರ ಕಂಬನಿಕವಿ, ಹೋರಾಟಗಾರ ಸಿದ್ಧಲಿಂಗಯ್ಯ ಅವರ ನಿಧನಕ್ಕೆ ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ.ವಿಜಯ ಸಂಕೇಶ್ವರ ಮತ್ತು ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

| ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
ಶೋಷಿತ ಸಮುದಾಯದ ದನಿಯಾದ ಸಾಹಿತ್ಯಕಾವ್ಯಾಭಿವ್ಯಕ್ತಿಯ ಮಾಧ್ಯಮದಿಂದ ಶೋಷಿತ ಜನವರ್ಗಕ್ಕೆ ಸ್ವಾಭಿಮಾನದ ಕಿಚ್ಚು ಹಚ್ಚಿದವರು ಸಿದ್ಧಲಿಂಗಯ್ಯ. ಅವರೆಲ್ಲರ ಶತಮಾನಗಳ ಸಿಟ್ಟು&ಸೆಡವುಗಳನ್ನು ಅರರೂಪಕ್ಕಿಳಿಸಿ, ಜನಾಭಿಪ್ರಾಯ ರೂಪಿಸಿದವರು. 1975ರಲ್ಲಿ ಪ್ರಕಟಿಸಿದ “ಹೊಲೆಮಾದಿಗರ ಹಾಡು’ ಕವನಸಂಕಲನ ಇದಕ್ಕೆಲ್ಲ ಮುನ್ನುಡಿ ಬರೆಯಿತು. “ಇಕ್ರಲಾ ವದೀರ್ಲಾ, ಈ ನನ್ನ ಮಕ್ಕಳ ಚರ್ಮ ಎಬ್ರಲಾ, ದೇವ್ರು ಒಬ್ರೇ ಅಂತಾರೆ, ಓಣೆಗೊಂದ್​ ತರ ಗುಡಿ ಕಟ್ಸವ್ರೆ…’ ಎಂದೆನ್ನುತ್ತ, ಒಂದಿಡೀ ಸಮುದಾಯದ ನೋವು&ಅಸಹನೆಗಳಿಗೆ ದನಿಯಾಗಿ ನಿಂತರು. “ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ$್ಯ’ ಗೀತೆಯ ಮೂಲಕ ಆಕ್ರೋಶ ಹೊರಹಾಕಿದ್ದರು. ಬೆಂಗಳೂರು ವಿವಿಗಾಗಿ ಸಮಕಾಲೀನ ಕನ್ನಡ ಕವಿತೆಗಳು 3 ಮತ್ತು 4ನೇ ಸಂಪುಟ ಸಂಪಾದಿಸಿಕೊಟ್ಟಿದ್ದರು. ಸಮಕಾಲೀನ ಸಮಾಜದ ಒಟ್ಟಂದದ ಚಿತ್ರಣ ನೀಡುವ ಅವರ ಆತ್ಮಚರಿತ್ರೆ “ಊರುಕೇರಿ’ ತಮಿಳು ಹಾಗೂ ಇಂಗ್ಲಿಷ್​ಗೂ ಅನುವಾದಗೊಂಡಿದೆ. ಅವರ ಹಲವಾರು ಕವಿತೆಗಳು ಇಂಗ್ಲಿಷ್​, ಹಿಂದಿ, ತಮಿಳು, ಬಂಗಾಳಿ, ಮಲಯಾಳಂ ಮತ್ತು ತೆಲುಗು ಭಾಷೆಗಳಿಗೆ ತರ್ಜುಮೆಯಾಗಿವೆ.ಘಿ
ಶಕ್ತಿಕೇಂದ್ರದಲ್ಲೂ ಮೊಳಗಿದ ಧ್ವನಿಸಿದ್ಧಲಿಂಗಯ್ಯ ವಿಧಾನ ಪರಿಷತ್ತಿಗೆ 1988&94, 1995& 2001ರವರೆಗೆ ಎರಡು ಬಾರಿ ನಾಮಕರಣ ಸದಸ್ಯ ರಾಗಿದ್ದರು. ಸದನದಲ್ಲಿ ಅವರು ಸಮಕಾಲೀನ ಸಮಸ್ಯೆಗಳನ್ನು ತಮ್ಮದೇ ಆದ ಹಾಸ್ಯಧಾಟಿಯಲ್ಲಿ ಪ್ರಸ್ತಾಪಿಸಿ, ಎಲ್ಲರನ್ನೂ ನಗಿಸುತ್ತಲೇ ಸರ್ಕಾರಕ್ಕೆ ಚಾಟಿ ಬೀಸುತ್ತಿದ್ದರು. ಕರಾವಳಿ ಭಾಗದಲ್ಲಿ ಜಾರಿಯಲ್ಲಿದ್ದ ಅಜಿಲ ಎಂಬ ಕೆಟ್ಟ ಆಚರಣೆ ವಿರುದ್ಧ ಹೋರಾಡಿ ಅದನ್ನು ನಿಲ್ಲಿಸುವಲ್ಲಿ ಸಫಲರಾದರು. ಮೇಲ್ಮನೆಯಲ್ಲಿ ಅವರು ಪ್ರಸ್ತಾಪಿಸಿದ ವಿಷಯಗಳು “ಸದನದಲ್ಲಿ ಸಿದ್ಧಲಿಂಗಯ್ಯ’ ಎಂಬ ಶೀರ್ಷಿಕೆಯಲ್ಲಿ 2 ಭಾಗಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. 2006&08 ಅವಧಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯರಾಗಿಯೂಸೇವೆ ಸಲ್ಲಿಸಿದ್ದರು.

| ಸ್ವಸ್ತಿಶ್ರೀ ಚಾರುಕೀರ್ತಿ ಸ್ವಾಮೀಜಿ ಶ್ರವಣಬೆಳಗೊಳ


ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen − 9 =
Remember me
