ಥಾಯ್ಲೆಂಡ್:ಕನ್ನಡ ರಾಜ್ಯೋತ್ಸವದಂದು ಕರ್ನಾಟಕದಾದ್ಯಂತ ಕನ್ನಡದ ಕಲರವ ಕೇಳಿಬರುವುದು ಸರ್ವೇಸಾಮಾನ್ಯ. ಆದರೆ ರಾಜ್ಯೋತ್ಸವ ದಿನವಾದ ಇಂದು ಕರ್ನಾಟಕದಾಚೆಗೂ ಕನ್ನಡದ ಕಹಳೆ ಮೊಳಗಿದೆ. ಆ ಮೂಲಕ ಈ ಕನ್ನಡಿಗರು ‘ಎಲ್ಲಾದರು ಇರು, ಎಂತಾದರು ಇರು; ಎಂದೆಂದಿಗು ನೀ ಕನ್ನಡವಾಗಿರು..’ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಹೀಗೆ ರಾಜ್ಯವಲ್ಲ, ದೇಶದಾಚೆಗೆ ಕನ್ನಡದ ಕಹಳೆ ಮೊಳಗಿದ್ದೆಲ್ಲಿ ಎಂದರೆ ದೂರದ ಥಾಯ್ಲೆಂಡ್​ನಲ್ಲಿ. ಥಾಯ್ಲೆಂಡ್​ನ ರಾಜಧಾನಿ ಬ್ಯಾಂಕಾಕ್​ನಲ್ಲಿ ಕನ್ನಡಿಗರಾದ ಡಾ.ಲೇಖನಾ, ಕಲಾ, ಲತಾ, ಶಿಲ್ಪಾ, ಚಂದ್ರಶೇಖರ್‌, ಅಮೋಘವರ್ಷ, ಸಂಭ್ರಮ, ಮೌನಿಶಾ ಮತ್ತು ಭಾವನಾ ಅವರು “ಹಚ್ಚೇವು ಕನ್ನಡದ ದೀಪ” ಎಂಬ ಗೀತೆಯ ಗಾಯನದ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದರು. ಆ ಮೂಲಕ ಥಾಯ್ಲೆಂಡ್​ನಲ್ಲಿದ್ದರೂ ತಾಯ್ನಾಡ ಮರೆಯಲಾರೆವು ಎಂಬುದಕ್ಕೆ ಸಾಕ್ಷಿಯಾದರು.

ಅಂದು ಅಪ್ಪಾಜಿಗೆ, ಇಂದು ‘ಅಪ್ಪು’ಗೆ; ರಾಜ್​ ಕುಟುಂಬಕ್ಕೆ 3 ದಶಕಗಳಲ್ಲಿ 2 ಕರ್ನಾಟಕ ರತ್ನ
ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಮುಂದಿನ ವರ್ಷ ಮಹತ್ವದ ಬದಲಾವಣೆ; ಸಿಎಂ ಘೋಷಣೆ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:one × two =
Remember me
