ಮೆಲ್ಬೋರ್ನ್​:ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕನ್ನಡ ಸಂಘದ ವತಿಯಿಂದ ನವೆಂಬರ್​ 11ರಂದು ಸ್ಪ್ರಿಂಗ್ವೇಲ್ ಉಪನಗರದ ಟೌನ್​ಹಾಲ್​ನಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ನೆರವೇರಿತು.

ಗೋಲ್ಡನ್​ ಸ್ಟಾರ್​ ಗಣೇಶ್​ ಅವರು ತಮ್ಮ ಕುಟುಂಬ ಸಮೇತರಾಗಿ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಅವರನ್ನು ಕನ್ನಡ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ನಿರೂಪಕಿ ಅನುಶ್ರೀ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಗಣೇಶ್​ ಜತೆಯಲ್ಲಿ ಸಂವಾದ ಸಹ ನಡೆಸಿದರು. ವಿಶೇಷವಾಗಿ ಸಂಗೀತ ಕಾರ್ಯಕ್ರಮ ರಾಜ್ಯೋತ್ಸವ ಸಮಾರಂಭಕ್ಕೆ ಹೊಸ ಮೆರಗು ತಂದುಕೊಟ್ಟಿತು. ನಟ ಗಣೇಶ್​ ಸಹ ಹಾಡಿ ಮನರಂಜಿಸಿದರು.

ಮೆಲ್ಬೋರ್ನ್​ನಲ್ಲಿ ನೆಲೆಸಿರುವ ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಸಾಕಷ್ಟು ಗಣ್ಯರು ಮತ್ತು ಸ್ಥಳೀಯ ನಾಯಕರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 1986ರಿಂದಲೂ ಮೆಲ್ಬೋರ್ನ್​ ಕನ್ನಡ ಸಂಘ ಅಸ್ತಿತ್ವದಲ್ಲಿದ್ದು, ಸಾಗರದಾಚೆ ಕನ್ನಡದ ಕೀರ್ತಿ ಪತಾಕೆ ಹಾರಿಸುತ್ತಿದೆ.





BBKS10: ‘ಯಾರಿಂದನೂ ನಾನೇನು ಕಲಿಬೇಕಾಗಿಲ್ಲ’…; ಧ್ವನಿ ಏರಿಸಿದ ತುಕಾಲಿ ಸಂತೋಷ್​

ವಿರಾಟ್​ ಕೊಹ್ಲಿಯನ್ನು ಸ್ವಾರ್ಥಿ ಎಂದವರು ಇಂದು ಪಾಕ್​ ಕ್ರಿಕೆಟ್​ ತಂಡದ ಮುಖ್ಯ ಕೋಚ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
