|ಬೆಂಕಿ ಬಸಣ್ಣನ್ಯೂಯಾರ್ಕ್​ನ್ಯೂಯಾರ್ಕ್ ರಾಜಧಾನಿ ಆಲ್ಬನಿ ನಗರದಲ್ಲಿ ಅನಿವಾಸಿ ಕನ್ನಡಿಗರು ಅದ್ದೂರಿಯಾಗಿ ‘ಕರ್ನಾಟಕ ರಾಜ್ಯೋತ್ಸವ’ ಆಚರಿಸಿದರು. ಕನ್ನಡ ಹಾಡುಗಳ ಗಾಯನ, ನೃತ್ಯ, ರಾಮಾಯಣ ಕಥೆ ಆಧಾರಿದ ನಾಟಕ, ಹಾಸ್ಯ ಸೇರಿದಂತೆ ಹಲವರು ಮನರಂಜನಾ ಕಾರ್ಯಕ್ರಮಗಳು ಕನ್ನಡ ಹಬ್ಬಕ್ಕೆ ಮೆರುಗು ನೀಡಿದವು.
ನ.6ರಂದು ಮಧ್ಯಾಹ್ನ 3ರಿಂದ ರಾತ್ರಿ 10ರ ವರೆಗೆ ಕರ್ನಾಟಕ ರಾಜ್ಯೋತ್ಸವದಲ್ಲಿ ಪುಟ್ಟಮಕ್ಕಳು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದವರೂ ಪಾಲ್ಗೊಂಡು ಸಂಭ್ರಮ ಹೆಚ್ಚಿಸಿದರು. ಆಲ್ಬನಿಯಲ್ಲಿರುವ ಹಿಂದೂ ದೇವಸ್ಥಾನದ ಅರ್ಚಕರೂ ಆದ ಕನ್ನಡಿಗ ಪಂಡಿತ ಶ್ರೀಧರ ಜಯತೀರ್ಥಾಚಾರ್ಯ ಅವರು ದೀಪ ಬೆಳಗುವ ಮೂಲಕ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆಲ್ಬನಿ ಕನ್ನಡ ಸಂಘದ ಅಧ್ಯಕ್ಷೆ ಸುಪ್ರಿಯಾ ವಾಳ್ವೇಕರ್, ಕಾರ್ಯದರ್ಶಿ ದೀಪಾ ಅಭಿಷೇಕ್ ಮತ್ತು ಖಜಾಂಚಿ ಸುನಿತಾ ವಿಜಯ್ ಅವರು ಕಾರ್ಯಕ್ರಮ ಯಶಸ್ವಿಗೆ ಕಾರಣಕರ್ತರಾದರು.

ಕನ್ನಡಾಭಿಮಾನ ಮೆರೆದರು:ಆಲ್ಬನಿ ನಗರದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ಅನಿವಾಸಿ ಕನ್ನಡಿಗರು ಕನ್ನಡ ಕಹಳೆ ಮೊಳಗಿಸಿದರು. ಅಮೆರಿಕದಲ್ಲಿದ್ದರೂ ನಾವು ಕನ್ನಡಿಗರು ಎಂಬ ಸಂದೇಶ ಸಾರಿದರು. 3 ವರ್ಷದ ಮಕ್ಕಳಿಂದ 77 ವರ್ಷದ ಹಿರಿಯರೂ ತಮ್ಮಲ್ಲಿರುವ ವಿಭಿನ್ನ ಪ್ರತಿಭೆ ಪ್ರದರ್ಶಿಸುತ್ತಾ ಕನ್ನಡಾಭಿಮಾನ ಮೆರೆದರು.

ಅಮೆರಿಕದ “ಜೂನಿಯರ್ ಶ್ರೇಯಾ ಘೋಷಾಲ್” ಖ್ಯಾತಿಯ ಮನೋಮೂರ್ತಿ ಅವರ ಶಿಷ್ಯೆ ನಾರ್ತ್ ಕ್ಯಾರೋಲಿನಾದ ವಾಣಿ ಸತೀಶ್ ಮತ್ತು ರಿಚ್ಮಂಡ್ ನಗರದ ಯುವ ಪ್ರತಿಭೆ ಧನುಷ್ ಜಗದೀಶ್ ಅವರು ಗಾನಸುಧೆ ಹರಿಸಿದರು. ಸ್ಥಳೀಯ ಗಾಯಕರಾದ ಉಮಾ ಶ್ರೀನಿವಾಸ್, ನವೀನ್ ಶ್ರೀವತ್ಸವ, ಪುಟಾಣಿ ನಚಿಕೇತ ಮಹಾಜನ್, ಪ್ರಣವ ಶ್ರೀನಿವಾಸ್, ಕಾವ್ಯ ಕುಮಾರ್, ಪರೀಕ್ಷಿತ್ ವೂಡಿ, ಅದಿತಿ ಅಗ್ನಿ, ಮಾನ್ವಿತಾ ಮುನಿಕೃಷ್ಣಯ್ಯ ಅವರುಗಳ ಗಾಯನವೂ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

ಮಹಿಳೆಯರು ಫ್ಯಾಷನ್ ಶೋನಲ್ಲಿ ಹೆಜ್ಜೆ ಹಾಕಿದರೆ ಅತ್ತ ಪುರುಷರು ವಿಭಿನ್ನ ರೀತಿಯ ಲೇಜಿ ಡಾನ್ಸ್ ಮಾಡಿ ರಂಜಿಸಿದರು. ಬೆಂಕಿ ಬಸಣ್ಣನವರ ತಂದೆ 77 ವರ್ಷದ ನಾರಾಯಣ್ ರಾವ್ ಬೆಂಕಿ ಅವರೂ ನೃತ್ಯ ಮಾಡಿ ಗಮನಸೆಳೆದರು. ಪುಟಾಣಿಗಳಾದ ಅನ್ವಿ, ಅವಯುಕ್ತ ಮತ್ತು ವಿಹಾನ್ ಅವರು ಕನ್ನಡದ ಕಣ್ಮಣಿಗಳಾಗಿ ನೃತ್ಯ ಮಾಡಿದ್ದು ವಿಶೇಷವಾಗಿತ್ತು.

NNN ಡಾನ್ಸ್ ಗ್ರೂಪ್​ನ ತನಿಷಾ ಮುರಳಿ ಮನೋಹರ್, ಜೀವಿಕಾ ಬೆಂಕಿ, ರಿಷಾ ಮಾತುರ್ ಮತ್ತು ಹಸಿನಿ ರ‍್ಯಾಲಿ ಅವರುಗಳು ನಡೆಸಿಕೊಟ್ಟ ಡಾನ್ಸ್​ ಕಾರ್ಯಕ್ರಮ ಮನಸೂರೆಗೊಂಡಿತು. ಪ್ರದೀಪ್ ಅರಸಪ್ಪ, ಶ್ರೀಕುಮಾರ್ ಮತ್ತು ಶ್ರೀನಿವಾಸ್ ಕುಮಾರಸ್ವಾಮಿ ಅಭಿನಯದ “ತೃಪ್ತಿ @ 30 ರುಪೀಸ್” ಹಾಸ್ಯಮಯ ನಾಟಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.

ಆಲ್ಬನಿಯ ‘ಕನ್ನಡ-ಕಲಿ ಶಾಲೆ’ ಶಿಕ್ಷಕಿ ಲತಾ ಕಾಲಿಯತ್ ಅವರ ನಿರ್ದೇಶನದಲ್ಲಿ ಮಕ್ಕಳು ‘ರಾಮಾಯಣ’ದ ಸೀತಾಪಹರಣದ ದೃಶ್ಯವನ್ನು ಅಮೋಘವಾಗಿ ಅಭಿನಯಿಸಿದರು. ಕನ್ನಡ ಕಲಿ ಶಾಲೆಯಲ್ಲಿ ಕಲಿತು ಉತ್ತೀರ್ಣರಾಗಿ ಮುಂದಿನ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಾದ ಜೀವಿಕಾ ಬೆಂಕಿ, ಶ್ಲೋಕ್ ಪ್ರಭು ಶೆಟ್ಟರ್, ವಚನ್ ಪ್ರಭು ಶೆಟ್ಟರ್, ಶ್ರೇಯಾ ಶ್ರೀವತ್ಸವ, ವಿಹಾನ್ ವೆಂಕಟಾದ್ರಿ, ವೇದಾಂತ ಮತ್ತು ರಿಶಿತ್ ಉಮೇಶ್ ಅವರಿಗೆ ಇದೇ ವೇಳೆ ಪ್ರಮಾಣ ಪತ್ರ ವಿತರಿಸಿ ಶುಭ ಕೋರಲಾಯಿತು. ಈ ಕನ್ನಡ ಸಂಘದ ಮಾಜಿ ಅಧ್ಯಕ್ಷ ಆನಂದ್ ಅರುಣಕುಮಾರ್ ಅವರು ಬಿಡಿಸಿದ್ದ ಪೇಂಟಿಂಗ್ಸ್​ ಅನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿಯನ್ನು ಕೀರ್ತಿ ಶಾಸ್ತ್ರಿ, ಸುನೀತಾ ವಿಜಯ, ಶ್ರೀಯಾ ಶ್ರೀವತ್ಸವ, ಇಶೆ ಪ್ರದೀಪ್ ನಾಗ್ ನಿರ್ವಹಿಸಿದರು. ಎಲ್ಲರಿಗೂ ಕನ್ನಡ ಹಬ್ಬದ ಹಿನ್ನೆಲೆ ಮಂಗಾ ಶ್ರೀನಿವಾಸ್ ಅವರು ವಿಶೇಷ ಭೋಜನ ತಯಾರಿಸಿದ್ದರು.
ಚಿನ್ನದ ವ್ಯಾಮೋಹಕ್ಕೆ ಭೂಮಿ ಹೋಯ್ತು! 20 ಲಕ್ಷ ರೂಪಾಯಿಗೆ 8 ಕೆಜಿ ಚಿನ್ನದ ಆಮಿಷ… ಸಂಕಷ್ಟದಲ್ಲಿ ದಂಪತಿ…

ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದ ವೃದ್ಧನ ಮನೆ ಬಾಗಿಲಿಗೇ ತೆರಳಿ ದೂರು ಸ್ವೀಕರಿಸಿದ ನ್ಯಾಯಾಧೀಶರು! ತುಮಕೂರಲ್ಲಿ ಅಪರೂಪದ ಪ್ರಕರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − three =
Remember me
