ಫೆ.21ನ್ನು ಅಂತಾರಾಷ್ಟ್ರೀಯ ವಿಶ್ವ ಮಾತೃಭಾಷಾ ದಿನವಾಗಿ ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಪ್ರಸ್ತುತ ಎಸ್​ಐಎಲ್ ಇಂಟರ್​ನ್ಯಾಷನಲ್ ಎಂದು ಕರೆಯಲಾಗುವ ಅಮೆರಿಕದ ಸಮ್ಮರ್ ಇನ್​ಸ್ಟಿಟ್ಯೂಟ್ ಆಫ್ ಲಿಂಗ್ವಿಸ್ಟಿಕ್ ಸಂಸ್ಥೆ ಜಗತ್ತಿನ 7,111 ಜೀವಂತ ಭಾಷೆಗಳ ಪಟ್ಟಿಯನ್ನು ‘ಎಥ್ನೋಲಾಗ್’ ಹೆಸರಿನಲ್ಲಿ ಪ್ರಕಟಿಸುತ್ತದೆ. ಆಯಾ ಭಾಷೆಗಳನ್ನು ಮಾತನಾಡುವ ಪ್ರದೇಶ, ರಾಷ್ಟ್ರ, ಅವರ ಜನಸಂಖ್ಯೆ ಇನ್ನಿತರ ವಿವರಗಳನ್ನು ನೀಡಲಾಗಿದೆ. ಅದರಂತೆ ಈ ವರ್ಷ ಪ್ರಕಟಿಸಲಾದ ಪಟ್ಟಿ ಇಲ್ಲಿದೆ.
ಬೆಂಗಳೂರು:ಭಾರತದಲ್ಲಿ ಕಂಡುಬರುವಷ್ಟು ಭಾಷಾ ವೈವಿಧ್ಯತೆ ಇನ್ನೆಲ್ಲೂ ಇಲ್ಲ. ದೇಶದಲ್ಲಿರುವ ಎಲ್ಲರೂ ಒಂದೇ ಭಾಷೆಯನ್ನು ಮಾತನಾಡುವುದಾಗಿದ್ದರೆ, ನಮ್ಮ ಭಾಷೆ ಜಗತ್ತಿನಲ್ಲಿಯೇ ಅತಿ ಹೆಚ್ಚು ಜನರಾಡುವ ಭಾಷೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿತ್ತು. ಆದರೆ, ಜಗತ್ತಿನ ಅತಿ ಹೆಚ್ಚು ಜೀವಂತ ಭಾಷೆಗಳಿರುವ ದೇಶ ಎಂಬ ಖ್ಯಾತಿ ನಮ್ಮದು. ಜಗತ್ತಿನಲ್ಲಿರುವ ಎಲ್ಲ ಭಾಷೆಗಳ ಪಟ್ಟಿ ತಯಾರಿಸಿ ಅವರ ಜನಸಂಖ್ಯೆಯನ್ನು ಗುರುತಿಸುವ ಅಮೆರಿಕದ ಎಸ್​ಐಎಲ್ ಸಂಸ್ಥೆ ಪ್ರಕಟಿಸಿರುವ ವರದಿಯಲ್ಲಿ ಭಾರತೀಯ ಭಾಷೆಗಳು ಟಾಪ್ 50ರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದನ್ನು ಗಮನಿಸಬಹುದು.
ಹಿಂದಿಗೆ ಮೂರನೇ ಸ್ಥಾನ:ಎಲ್ಲಕ್ಕಿಂತ ಮುಖ್ಯವಾಗಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಜನರಾಡುವ ಭಾಷೆಗಳಲ್ಲಿ ಹಿಂದಿಗೆ ಮೂರನೇ ಸ್ಥಾನ ದಕ್ಕಿದೆ. ಮೊದಲ ಸ್ಥಾನ ಇಂಗ್ಲಿಷ್​ನದ್ದಾಗಿದ್ದರೆ, ಎರಡನೇ ಸ್ಥಾನ ಚೀನಿಯರ ಮ್ಯಾಂಡರೀನ್​ದಾಗಿದೆ. ಹಿಂದಿಯನ್ನು ಜಗತ್ತಿನಾದ್ಯಂತ 61.5 ಕೋಟಿ ಜನರು ಮಾತನಾಡುತ್ತಾರೆ. ಎಸ್​ಐಎಲ್ ಪ್ರಕಟಿಸುವ ಎಥ್ನೋಲಾಗ್ ವರದಿಯಲ್ಲಿ ನಮೂದಿಸಲಾಗಿದೆ. ಇಂಗ್ಲಿಷ್ ಅನ್ನು 113.2 ಕೋಟಿ ಜನ ಮಾತನಾಡಿದರೆ, ಮ್ಯಾಂಡರಿನ್​ಗೆ 111.6 ಕೋಟಿ ಭಾಷಿಕರಿದ್ದಾರೆ. ಅಚ್ಚರಿಯ ವಿಷಯವೆಂದರೆ ಬೆಂಗಾಲಿ ಮಾತನಾಡುವವರ ಸಂಖ್ಯೆ 26.5 ಕೋಟಿ.
ಮೂಲ ಭಾಷಿಕರಲ್ಲಿ ಚೀನಿಯರೇ ನಂ.1:ಮೂಲ ಭಾಷಿಕರ ವಿಚಾರಕ್ಕೆ ಬಂದರೆ ಚೀನೀಯರೇ ಮೊದಲ ಸ್ಥಾನದಲ್ಲಿದ್ದಾರೆ. ಇವರ ಸಂಖ್ಯೆ 91.8 ಕೋಟಿ. ಸ್ಪ್ಯಾನಿಷ್ ಭಾಷಿಕರು 46 ಕೋಟಿ, ಆಂಗ್ಲರು ಮೂರನೇ ಸ್ಥಾನದಲ್ಲಿದ್ದು, ಇವರ ಪ್ರಮಾಣ 37.9 ಕೋಟಿ. ನಂತರದ ಸ್ಥಾನದಲ್ಲಿ ಹಿಂದಿ ಭಾಷಿಕರು-34 ಕೋಟಿ, ಬೆಂಗಾಳಿಗರು ಕೂಡ ಹೆಚ್ಚಾಗಿದ್ದು, 22.8 ಕೋಟಿ ಜನರಿದ್ದಾರೆ. ಇನ್ನು ಮೂಲ ಮರಾಠಿ ಭಾಷಿಕರ ಸಂಖ್ಯೆ 8.3 ಕೋಟಿಯಾಗಿದ್ದು, ಈ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.
ಕನ್ನಡಕ್ಕೆ 30ನೇ ಸ್ಥಾನ:ಜಾಗತಿಕವಾಗಿ ವಿವಿಧ ಭಾಷೆಗಳಲ್ಲಿ ಸಂಭಾಷಿಸುವವರ ಸಂಖ್ಯೆಯಲ್ಲಿ ಕನ್ನಡಕ್ಕೆ 30ನೇ ಸ್ಥಾನ ನೀಡಲಾಗಿದೆ. ಒಟ್ಟು 5,64,63,310 ಕನ್ನಡ ಭಾಷಿಕರಿದ್ದು, ಇವರಲ್ಲಿ ಮೂಲಭಾಷಿಕರ ಪ್ರಮಾಣ 4,35,63,310 ಎಂದು ಲೆಕ್ಕ ಹಾಕಲಾಗಿದೆ. ಆದರೆ, ದಕ್ಷಿಣ ಭಾರತದ ದ್ರಾವಿಡ ಭಾಷೆಗಳಿಗೆ ಹೋಲಿಸಿದರೆ, ತೆಲುಗು ಭಾಷಿಕರ ಸಂಖ್ಯೆ ಅತಿ ಹೆಚ್ಚಾಗಿದ್ದು, ನಂತರ ಸ್ಥಾನದಲ್ಲಿ ತಮಿಳರಿದ್ದಾರೆ. ಮಲಯಾಳಿಗಳು ಕೊನೆಯ ಸ್ಥಾನದಲ್ಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 20 =
Remember me
