ಬೆಂಗಳೂರು/ಹುಬ್ಬಳ್ಳಿ:ಕರೊನಾ ಕಾರಣದಿಂದ ಮುಂದೂಡಿಕೆಯಾಗಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2022ರ ಮೇನಲ್ಲಿ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು ಸಿದ್ಧತೆ ಆರಂಭಿಸಿದೆ. 2021ರಲ್ಲಿ ಫೆ.25ರಿಂದ 27ರವರೆಗೆ ಹಾವೇರಿಯಲ್ಲಿ ಸಮ್ಮೇಳನ ಆಯೋಜಿಸಲು ನಿರ್ಧಾರವಾಗಿತ್ತಾದರೂ, ಕರೊನಾ ಸೋಂಕು ಹೆಚ್ಚಾದ ಕಾರಣಕ್ಕೆ ಕೇವಲ 20 ದಿನ ಬಾಕಿ ಉಳಿದಿದ್ದಾಗ ಸಮ್ಮೇಳನ ಮುಂದೂಡುವ ನಿರ್ಧಾರ ಮಾಡಲಾಯಿತು. ಇದೀಗ ದೇಶದೆಲ್ಲೆಡೆ ಸೋಂಕು ಕಡಿಮೆಯಾಗಿದ್ದು, ಭವಿಷ್ಯದಲ್ಲೂ ಸ್ಥಿತಿ ಉತ್ತಮಗೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ಸಿದ್ಧತೆಗಳಿಗೆ ಚಾಲನೆ ನೀಡಲಾಗಿದೆ.
ಇಬ್ಬರ ತವರು ಜಿಲ್ಲೆ:ಈ ಬಾರಿ ಸಮ್ಮೇಳನ ನಡೆಯುವ ಹಾವೇರಿ ಜಿಲ್ಲೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಅವರಿಬ್ಬರಿಗೂ ತವರು ಜಿಲ್ಲೆ. ಕಳೆದ ವರ್ಷ ಬಜೆಟ್​ನಲ್ಲೂ ಸಮ್ಮೇಳನವನ್ನು ಪ್ರಸ್ತಾಪಿಸಿದ್ದ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಪೂರ್ಣ ಸಹಕಾರ ನಿಡುವುದಾಗಿ ಹೇಳಿದ್ದರು. ಇದೀಗ ಕೆಲವೇ ದಿನಗಳ ಹಿಂದೆ ಬಜೆಟ್ ಮಂಡಿಸಿದ ಬಸವರಾಜ ಬೊಮ್ಮಾಯಿ ಅವರೂ, ಸಮ್ಮೇಳನಕ್ಕೆ 20 ಕೋಟಿ ರೂ. ಮೀಸಲಿಡುವುದಾಗಿ ಪ್ರಸ್ತಾಪಿಸಿದ್ದಾರೆ. ತವರು ಜಿಲ್ಲೆ ಹಾಗೂ 2023ರ ವಿಧಾನಸಭೆ ಚುನಾವಣೆಗಳು ಹತ್ತಿರದಲ್ಲಿರುವ ಕಾರಣ ಈ ಬಾರಿಯ ಸಮ್ಮೇಳನ ಅದ್ಧೂರಿಯಾಗಿ ನಡೆಯುವ ಮುನ್ಸೂಚನೆಗಳು ಲಭಿಸಿವೆ.
ಅಧ್ಯಕ್ಷರ ಬದಲಾವಣೆಯಿಲ್ಲ:ಹಾವೇರಿ ಸಮ್ಮೇಳನಕ್ಕೆ ಪ್ರೊ. ದೊಡ್ಡರಂಗೇಗೌಡ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಅಂದಿನ ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ನೇತೃತ್ವದಲ್ಲಿ ಆಯ್ಕೆ ಮಾಡಲಾಗಿತ್ತು. ನಂತರದಲ್ಲಿ ಕಸಾಪ ಚುನಾವಣೆಗಳು ನಡೆದು ಕೇಂದ್ರ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸ್ವತಃ ರಾಜ್ಯದ ಮುಖ್ಯಮಂತ್ರಿಯೂ ಬದಲಾವಣೆ ಆಗಿದ್ದಾರೆ. ಆದರೆ ಸಮ್ಮೇಳನಾಧ್ಯಕ್ಷರ ಬದಲಾವಣೆ ಆಗುವುದಿಲ್ಲ, ದೊಡ್ಡರಂಗೇಗೌಡರೇ ಅಧ್ಯಕ್ಷರಾಗಿರುತ್ತಾರೆ ಎಂದು ಕಸಾಪ ಮೂಲಗಳು ತಿಳಿಸಿವೆ.
ಸಾರ್ವಜನಿಕರಿಗೆ ಅವಕಾಶ:ಸಮ್ಮೇಳನದ ಲಾಂಛನ ಹಾಗೂ ಧ್ಯೇಯವಾಕ್ಯವನ್ನು ರಚಿಸಲು ಸಾರ್ವಜನಿಕರಿಗೆ ಕಸಾಪ ಆಹ್ವಾನ ನೀಡಿದೆ. ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ಜನಪದ ಮತ್ತು ಕನ್ನಡ-ಕನ್ನಡಿಗ-ಕರ್ನಾಟಕವನ್ನು ಬಿಂಬಿಸುವ ಭಾವನಾತ್ಮ ಹಾಗೂ ಹಾವೇರಿ ಜಿಲ್ಲೆಯ ಪ್ರಾಮುಖ್ಯತೆಯನ್ನು ಬಿಂಬಿಸುವ ಅರ್ಥಗರ್ಭಿತ ಲಾಂಛನ ರಚಿಸಲು ಹಾಗೂ ಸಮ್ಮೇಳನಕ್ಕಾಗಿ ಧ್ಯೇಯವಾಕ್ಯ ಸಿದ್ಧಪಡಿಸಲು ಸಾರ್ವಜನಿಕರಿಗೆ,ಕಲಾವಿದರಿಗೆ ಅವಕಾಶ ನೀಡಲಾಗಿದೆ. 2022ರ ಮಾ.31ರೊಳಗೆ ಲಾಂಛನ ಮತ್ತು ಧ್ಯೇಯವಾಕ್ಯಗಳನ್ನು ರಚಿಸಿ ಕಸಾಪ ಕೇಂದ್ರ ಕಚೇರಿಗೆ ಅಥವಾ ಇಮೇಲ್ ವಿಳಾಸಕ್ಕೆ (kಚ್ಞ್ಞಛಚಟಚ್ಟಜಿಠಜಚಠಿಠ್ಠಿಃಜಞಚಜ್ಝಿ.ಟಞ) ಕಳಿಸಿಕೊಡಬೇಕು. ಆಯ್ಕೆಯಾದ ಲಾಂಛನ ಹಾಗೂ ಧ್ಯೇಯವಾಕ್ಯಗಳಿಗೆ ಸೂಕ್ತ ಗೌರವ ನೀಡಲಾಗುವುದು ಎಂದು ಕಸಾಪ ಗೌರವ ಕಾರ್ಯದರ್ಶಿ ನೇ. ಭ. ರಾಮಲಿಂಗಶೆಟ್ಟಿ ತಿಳಿಸಿದ್ದಾರೆ.
ಮೇನಲ್ಲಿ ಸಮ್ಮೇಳನ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದ ಇವುಗಳ ಜೊತೆಗೆ ಕನ್ನಡ- ಕನ್ನಡಿಗ-ಕನಾಟಕದ ರಕ್ಷಣೆ ಮತ್ತು ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ಹೆಮ್ಮೆಯ ಕನ್ನಡಿಗರೆಲ್ಲರೂ ಸಮ್ಮೇಳನದಲ್ಲಿ ಸಹಭಾಗಿತ್ವ ಹೊಂದಬೇಕೆಂದು ಕೋರುತ್ತೇನೆ.
|ಡಾ. ಮಹೇಶ ಜೋಶಿಕಸಾಪ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fifteen =
Remember me
