ಹಾವೇರಿ:ಎಂಬತ್ತಾರನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೇವಲ ಒಂದು ತಿಂಗಳು ಏಳು ದಿನಗಳು ಬಾಕಿ ಉಳಿದಿದ್ದು, ಘೋಷಿತ ದಿನದಂದು ನಡೆಸುವುದು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ಹೇಳಿದ್ದಾರೆ. ನ.11, 12, 13ಕ್ಕೆ ನಿಗದಿಯಾಗಿರುವ ಸಮ್ಮೇಳನಕ್ಕೆ ಸರ್ಕಾರ ಈವರೆಗೆ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಪೂರ್ವಭಾವಿ ಸಭೆಯನ್ನೂ ನಡೆಸಿಲ್ಲ. ಸಿಎಂ ಮತ್ತು ನನಗೂ ಸ್ವಂತ ಜಿಲ್ಲೆಯಾಗಿರುವ ಹಾವೇರಿ ಸಮ್ಮೇಳನಕ್ಕೆ ಇಂತಹ ಸ್ಥಿತಿ ಬಂದದ್ದು ದೌರ್ಭಾಗ್ಯ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಷ್ಟೊತ್ತಿಗಾಗಲೇ ಲಾಂಛನ ಬಿಡುಗಡೆಯಾಗಬೇಕಿತ್ತು. ಸ್ವಾಗತ ಸಮಿತಿ, ಹಣಕಾಸು, ವೇದಿಕೆ ನಿರ್ವಣ, ವಸತಿ, ಪ್ರಚಾರ ಸೇರಿದಂತೆ 20 ಸಮಿತಿಗಳು ಕಾರ್ಯಾರಂಭಿಸಬೇಕಿತ್ತು.
ತಿಂಗಳ ಮುಂಚೆಯೇ ನೋಂದಣಿ ನಡೆಯಬೇಕಿತ್ತು. ನಮ್ಮ ತಯಾರಿ ಆರಂಭಿಸಿದ್ದರೂ ಸರ್ಕಾರದ ಮಟ್ಟದಲ್ಲಿ ಕೆಲಸಗಳು ನಡೆಯುತ್ತಿಲ್ಲ. ಹೀಗಾಗಿ, ಘೊಷಿತ ದಿನಾಂಕದಂದು ಸಮ್ಮೇಳನ ಅಸಾಧ್ಯ. ದಿನಾಂಕ ಮುಂದೂಡುವ ಧಾಟಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡುತ್ತಾರೆ. ಘೊಷಿತ ದಿನಾಂಕದಂದು ಸಮ್ಮೇಳನ ಮಾಡುವುದು ಖಾತ್ರಿ ಎಂದು ಸಿಎಂ ಹೇಳುತ್ತಾರೆ. ಹೀಗಾಗಿ ನಮ್ಮದು ತ್ರಿಶಂಕು ಸ್ಥಿತಿಯಾಗಿದೆ ಎಂದು ಜೋಶಿ ಹೇಳಿದ್ದಾರೆ.
ಹಾವೇರಿ ಜಿಲ್ಲೆಯವನಾಗಿ ಉತ್ಸಾಹದಿಂದ ಸಮ್ಮೇಳನ ಮಾಡಲು ನಿರ್ಧರಿಸಿದ್ದೆ. ಸೂಕ್ತ ಸ್ಪಂದನೆ ಸಿಗದೆ ಬಹಳ ದುಃಖ ಆಗಿದೆ, ಉತ್ಸಾಹ ಕುಂದಿಹೋಗುತ್ತಿದೆ. ಸಮ್ಮೇಳನದ ಬಗ್ಗೆ ನನಗೇ ಸ್ಪಷ್ಟತೆ ಇಲ್ಲ. ಸರ್ಕಾರ ಇದನ್ನೆಲ್ಲ ಸರಿಪಡಿಸಬೇಕು.
|ಡಾ.ಮಹೇಶ ಜೋಶಿಕಸಾಪ ಅಧ್ಯಕ್ಷ
ಪೂರ್ವಸಿದ್ಧತೆ ಬಗ್ಗೆ ಹಲವು ಬಾರಿ ಸಿಎಂ ಬಸವರಾಜ ಬೊಮ್ಮಾಯಿ ಗಮನ ಸೆಳೆದಿದ್ದೇವೆ. ನಾಲ್ಕು ಬಾರಿ ಸಭೆ ನಿಗದಿ ಮಾಡಿ ರದ್ದುಪಡಿಸಿದರು. ಕನಿಷ್ಠ ಒಬ್ಬ ಸಚಿವರು ಅಥವಾ ಅಧಿಕಾರಿಗೆ ಸೂಚಿಸಿದರೆ, ನಾವು ಸಮನ್ವಯದಿಂದ ಪೂರ್ವಸಿದ್ಧತೆ ಮಾಡಿಕೊಳ್ಳುತ್ತೇವೆ. ಇನ್ನಾದರೂ ಸರ್ಕಾರ ಸ್ಪಂದಿಸಬೇಕು. ಈ ಸಮಸ್ಯೆ ಆದಷ್ಟು ಬೇಗ ಪರಿಹಾರವಾಗುತ್ತದೆ ಎಂಬ ವಿಶ್ವಾಸದಲ್ಲಿ ಇದ್ದೇನೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಗೌರವ ಕಾರ್ಯದರ್ಶಿಗಳಾದ ಬಿ.ಪಿ. ಶಿಡೇನೂರು, ಎಸ್.ಎಸ್. ಬೇವಿನಮರದ, ಹಾವೇರಿ ತಾಲೂಕು ಅಧ್ಯಕ್ಷ ವೈ.ಬಿ. ಆಲದಕಟ್ಟಿ, ಜಿಲ್ಲಾ ಕೋಶಾಧ್ಯಕ್ಷ ಎಸ್.ಎನ್. ದೊಡ್ಡಗೌಡ್ರ, ಬ್ಯಾಡಗಿ ತಾಲೂಕು ಅಧ್ಯಕ್ಷ ಕೆ. ಜಗಾಪೂರ ಇತರರು ಇದ್ದರು.
ಸಿಎಂ ಮನೆ ಕಾಯುವ ಅಧ್ಯಕ್ಷನಾಗಲ್ಲ:ಮೈಸೂರು ರಾಜವಂಶಸ್ಥರು ಈಗಲೂ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಗೌರವ ಕೊಡುತ್ತಾರೆ. ಆದರೆ, ದಸರಾದಲ್ಲಿ ಸರ್ಕಾರ ನನ್ನನ್ನು ಪಕ್ಕಕ್ಕೆ ತಳ್ಳಿತು. ಸರ್ಕಾರ ಈ ಸ್ಥಾನಕ್ಕೆ ಸೂಕ್ತ ಗೌರವ ಕೊಡುತ್ತಿಲ್ಲ. ಪ್ರತಿವರ್ಷ ರಾಜ್ಯೋತ್ಸವ ಆಯ್ಕೆ ಸಮಿತಿಗೆ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿತ್ತು. ಈ ಬಾರಿ ಸಮಿತಿಯಲ್ಲಿ ಸೇರಿಸಿಲ್ಲ. ಅತ್ತು ಕರೆದು ಔತಣ ಮಾಡಿಸಿಕೊಳ್ಳುವ ಸ್ಥಿತಿ ಕಸಾಪ ಅಧ್ಯಕ್ಷರಿಗೆ ಬರಬಾರದು. ನಾನು ವೈಯಕ್ತಿಕವಾಗಿ ಏನನ್ನೂ ಕೇಳುತ್ತಿಲ್ಲ. ಈ ಸ್ಥಾನಕ್ಕೆ ಕೊಡಬೇಕಾದ ಗೌರವ ಕೊಡಬೇಕಲ್ಲವೆ? ಮುಖ್ಯಮಂತ್ರಿಯವರ ಮನೆ ಕಾಯುವಂಥ ಅಧ್ಯಕ್ಷನಾಗಲ್ಲ ಎಂದು ಜೋಶಿ ಹೇಳಿದರು.
ಭಾಷಾ ವಿಧೇಯಕದಲ್ಲೂ ಕಡೆಗಣನೆ:ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ನೇತೃತ್ವದ ಕಾನೂನು ಆಯೋಗ ನೀಡಿರುವ ವರದಿ ಆಧರಿಸಿ ಸರ್ಕಾರ ವಿಧಾನಮಂಡಲ ಅಧಿವೇಶನದಲ್ಲಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ- 2022’ ಮಂಡಿಸಿತು. ಆದರೆ, ಇದರಲ್ಲಿ ಕಸಾಪವನ್ನೇ ಕಡೆಗಣಿಸಲಾಗಿದೆ ಎಂದು ಜೋಶಿ ಹೇಳಿದರು.
ಕಾಂತಾರ: ಒಂದಕ್ಕೂ ನಾಲ್ಕಕ್ಕೂ ನಡುವೆ ಎಷ್ಟು ಅಂತರ!?; ಬದಲಾಯ್ತು ರಿಷಬ್ ‘ಸ್ಟೇಟಸ್​’
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
