ಕೇಶವಮೂರ್ತಿ ವಿ.ಬಿ.ಹಾವೇರಿ:ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿ ಶುರುವಾಗುವುದು ಕಡಿಮೆ, ಬೆಳಗಿನ ಗೋಷ್ಠಿ ಮಧ್ಯಾಹ್ನ, ಮಧ್ಯಾಹ್ನದ್ದು ಸಂಜೆ ನಡೆಯುತ್ತದೆ… ಎಂಬ ಟೀಕೆಗಳು ಕೇಳಿಬರುವುದಿದೆ. ಆದರೆ, ಹಾವೇರಿಯಲ್ಲಿ ನಡೆಯಲಿರುವ 86ನೇ ಅಭಾಕಸಾ ಸಮ್ಮೇಳನ ಇಂಥ ಟೀಕೆಗಳಿಗೆ ಅತೀತವಾಗಿರಲಿದೆ!
ಸಮ್ಮೇಳನದಲ್ಲಿ ‘ಸಮಯ’ಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಅತಿಥಿಗಳ ಭಾಷಣದ ಸಮಯ ಮುಗಿಯುತ್ತಿದ್ದಂತೆ ಧ್ವನಿವರ್ಧಕ ಸ್ವಯಂಚಾಲಿತವಾಗಿ ಬಂದ್ ಆಗಲಿದೆ. ಈ ಮೂಲಕ ಸಮಯ ಪಾಲನೆಯಲ್ಲಿ ಹಾವೇರಿ ಸಮ್ಮೇಳನ ಮೇಲ್ಪಂಕ್ತಿ ಹಾಕಿಕೊಡಲಿದೆ.
ಸಮಯ ಪಾಲನೆ ಸರಿಯಾಗಿ ನಡೆದರೆ ಅನೇಕ ಅಪಸವ್ಯಗಳನ್ನು ತಪ್ಪಿಸಬಹುದು. ಆದ್ದರಿಂದ ಕಸಾಪ ವ್ಯವಸ್ಥಿತ ‘ಸಮಯ ಸಾರಿಣಿ’ ಸಿದ್ಧತೆ ಮಾಡಿಕೊಂಡಿದೆ. ಪ್ರತಿ ನಿಮಿಷ, ಸೆಕೆಂಡ್​ಗೂ ಮಹತ್ವ ನೀಡಲಾಗಿದೆ.
ಕೆಲವರಿಗೆ ಮೈಕ್ ಸಿಕ್ಕರೆ ಸಾಕು, ಉದ್ದುದ್ದ ಭಾಷಣವನ್ನೇ ಮಾಡುತ್ತಾರೆ. ಇಂಥವರಿಗೆ ನೆನಪು ಮಾಡಿಕೊಡಲೆಂದೇ ಕಸಾಪ ಈ ಬಾರಿ ಮಾಸ್ಟರ್ ಪ್ಲಾನ್ ರೂಪಿಸಿದೆ. ಸಮಯ ಪಾಲನೆ ಕುರಿತು ಆಗಿಂದಾಗ್ಗೆ ಮನವರಿಕೆ ಮಾಡಿಕೊಡಲು ಕೆಲವರಿಗೆ ಜವಾಬ್ದಾರಿ ಹಂಚಲಾಗಿದೆ.
ಕೆಂಪು ದೀಪ ಅಳವಡಿಕೆ: ಎಲ್ಲ ವೇದಿಕೆಗಳ ಪೋಡಿಯಂ ಬಳಿ ಭಾಷಣಕಾರರಿಗೆ ಕಾಣಿಸುವಂತೆ ಕೆಂಪು ದೀಪವುಳ್ಳ ಬರ್ಜರ್ ಅಳವಡಿಸಲಾಗುತ್ತಿದೆ. ನಿಗದಿತ ಸಮಯ ಮುಗಿಯುವುದಕ್ಕಿಂತ ತುಸು ಮೊದಲೇ ಈ ದೀಪ ಒಮ್ಮೆ ಹೊತ್ತಿ ಬಂದ್ ಆಗಲಿದೆ. ಒಂದು ನಿಮಿಷದ ನಂತರ ಮತ್ತೊಮ್ಮೆ ಹೊತ್ತಿಕೊಂಡು ಭಾಷಣ ಮುಗಿಸುವಂತೆ ಮುನ್ಸೂಚನೆ ನೀಡಲಿದೆ. ಸಮಯ ಮುಗಿಯುತ್ತಿದ್ದಂತೆ ಮೈಕ್ ಸ್ವಯಂಚಾಲಿತವಾಗಿ ಬಂದ್ ಆಗಲಿದೆ. ಈ ರೀತಿಯ ನಿರ್ದಾಕ್ಷಿಣ್ಯ ವ್ಯವಸ್ಥೆ ಕೆಲವರ ಮುನಿಸಿಗೂ ಕಾರಣವಾಗಬಹುದು. ಆದರೆ, ಇದರಿಂದ ಸಮ್ಮೇಳನದ ಗರಿಮೆ ಹೆಚ್ಚಲಿದೆ. ಅಲ್ಲದೇ ಪ್ರೇಕ್ಷಕರ ತಾಳ್ಮೆ ಪರೀಕ್ಷೆಯ ಸಾಧ್ಯತೆ ಕಡಿಮೆಯಾಗಲಿದೆ ಎನ್ನುತ್ತಾರೆ ಡಾ.ಮಹೇಶ ಜೋಶಿ.
ಸಮ್ಮೇಳನದ ಎಲ್ಲ ಅತಿಥಿಗಳಿಗೂ ಈಗಾಗಲೆ ಪತ್ರದ ಮೂಲಕ ಸಮಯ ಪಾಲನೆ ಬಗ್ಗೆ ಸೂಚನೆ ನೀಡಲಾಗಿದೆ. ಆಹ್ವಾನ ಪತ್ರಿಕೆಯಲ್ಲೂ ಇದೇ ಮೊದಲ ಬಾರಿಗೆ ಪ್ರತಿಯೊಬ್ಬರಿಗೂ ಸಮಯವನ್ನು ನಿಗದಿಪಡಿಸಲಾಗಿದೆ. ಈ ಸಮ್ಮೇಳನ ಮುಂದಿನ ಸಮ್ಮೇಳನಗಳಿಗೆ ಸಮಯ ಪಾಲನೆಯಲ್ಲಿ ದಿಕ್ಸೂಚಿ ಆಗಲಿದೆ.
| ಡಾ.ಮಹೇಶ ಜೋಶಿ ಅಧ್ಯಕ್ಷ, ಕಸಾಪ
ಹಾವೇರಿ ಸಮ್ಮೇಳನದಲ್ಲಿ ಜ. 6ರಂದು ಬೆಳಗ್ಗೆ 7 ಗಂಟೆಗೆ ಸಮ್ಮೇಳನ ಆವರಣದಲ್ಲಿ ಧ್ವಜಾರೋಹಣ ನೆರವೇರಲಿದೆ. ಹಾವೇರಿಯ ಪುರಸಿದ್ಧೇಶ್ವರ ದೇಗುಲದಿಂದ 7.30ಕ್ಕೆ ಮೆರವಣಿಗೆ ಆರಂಭವಾಗಿ, 10.30ಕ್ಕೆ ಮುಕ್ತಾಯವಾಗಲಿದೆ. 11 ಗಂಟೆಯಿಂದ 1.30ರವರೆಗೆ ಉದ್ಘಾಟನೆ ಕಾರ್ಯಕ್ರಮ, ಸಂಜೆ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ. ಎಲ್ಲವೂ ಪೂರ್ವನಿಗದಿತ ಸಮಯಕ್ಕೆ ಸರಿಯಾಗಿ ಆಗುವಂತೆ ಲಕ್ಷ್ಯ ವಹಿಸುತ್ತಿದ್ದೇವೆ.
| ಲಿಂಗಯ್ಯ ಹಿರೇಮಠ ಜಿಲ್ಲಾಧ್ಯಕ್ಷ, ಕಸಾಪ, ಹಾವೇರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − one =
Remember me
