|ಪಂಕಜ ಕೆ.ಎಂ.ಬೆಂಗಳೂರು
ಕನ್ನಡ ಸಾಹಿತ್ಯ ಪರಿಷತ್ತಿನ ‘ಶ್ರೀ ಕೃಷ್ಣರಾಜ ಪರಿಷನ್ಮಂದಿರ’ ಸಭಾಂಗಣದ ನವೀಕರಣ ಕಾರ್ಯ ಆರಂಭವಾಗಿದ್ದು, ಶತಮಾನದ ಇತಿಹಾಸ ಹೊಂದಿರುವ ಪಾರಂಪರಿಕ ಕಟ್ಟಡಕ್ಕೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಈ ಹಿಂದೆ ಎರಡು ಬಾರಿ ನವೀಕರಣ ಕಾರ್ಯ ಕೈಗೊಳ್ಳಲು ಮುಂದಾಗಿದ್ದರೂ ಸಾಧ್ಯವಾಗಿರಲಿಲ್ಲ. ಈಗ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ನಿಗಮದ ವತಿಯಿಂದ 1.50 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿ ಪ್ರಾರಂಭವಾಗಿದೆ. ಶೀಘ್ರದಲ್ಲೇ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅತ್ಯಾಧುನಿಕ ಸೌಲಭ್ಯದೊಂದಿಗೆ ಸುಸಜ್ಜಿತವಾದ ಸಭಾಂಗಣ ಲಭ್ಯವಾಗಲಿದೆ.
ಪರಿಷನ್ಮಂದಿರದಲ್ಲಿ ನಡೆದಿರುವ ಕಾರ್ಯಕ್ರಮಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿ ನಾಡಿನ ಪ್ರಮುಖ ಸಾಹಿತಿಗಳು ಹಾಗೂ ಚಿಂತಕರು, ಕಲಾವಿದರು, ಗಣ್ಯರು ಪಾಲ್ಗೊಂಡಿರುವ ಇತಿಹಾಸವಿದೆ. ಪಾರಂಪರಿಕ ಕಟ್ಟಡವಾಗಿ ರುವುದರಿಂದ ಮೂಲ ಸ್ವರೂಪಕ್ಕೆ ಧಕ್ಕೆ ಆಗದ ರೀತಿಯಲ್ಲಿ ನವೀಕರಣ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಪರಿಷತ್ ವತಿಯಿಂದ 97 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಮಾಹಿತಿ ನೀಡಿದ್ದಾರೆ.
ದಶಕಗಳ ಹಿಂದಿನ ದುರಸ್ತಿ:106 ವರ್ಷಗಳ ಇತಿಹಾಸವುಳ್ಳ ಪರಿಷನ್ಮಂದಿರದ ಹೊರಾಂಗಣ ವಿನ್ಯಾಸವನ್ನು ಹಾಗೆಯೇ ಉಳಿಸಿಕೊಂಡು ಆಗಿಂದಾಗ್ಗೆ ಸಭಾಂಗಣದ ನವೀಕರಣ ಮಾಡಲಾಗಿದೆ. ದಶಕದ ಹಿಂದೆ ಗೋಡೆಗಳಿಗೆ ಪ್ಲೈವುಡ್ ಹಾಗೂ ಒಳಾಂಗಣ ಛಾವಣಿಗೆ ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಅಳವಡಿಸಲಾಗಿತ್ತು. ಕಾಲಾಂತರದಲ್ಲಿ ಛಾವಣಿ ಸೋರಿಕೆಯಿಂದ ಹಾಳಾಗಿತ್ತು. ಕಾರ್ಯಕ್ರಮ ನಡೆಯುತ್ತಿದ್ದಾಗಲೇ ನೀರು ಸೋರುವುದು, ಪ್ಲೈವುಡ್ ಹಾಳಾಗಿರುವುದು ಗಮನಕ್ಕೆ ಬಂದಿತ್ತು.
ಏನೆಲ್ಲ ಸೌಕರ್ಯ?:ಈಗ ಪರಿಷನ್ಮಂದಿರದ ಮೇಲ್ಛಾವಣಿ, ಗೋಡೆ ಹಾಗೂ ಸಭಾಂಗಣಕ್ಕೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ವೇದಿಕೆಗೆ ಡಿಜಿಟಲ್ ಪರದೆ, ಮೈಕ್ ಸೇರಿ ಹೊಸ ಧ್ವನಿವರ್ಧಕಗಳ ಅಳವಡಿಕೆ, ಅತ್ಯಾಧುನಿಕ ಲೈಟಿಂಗ್, ಕಾಯಂ ಆಸನಗಳು, ಎಸಿ ಹಾಗೂ ಸಿಸಿ ಕ್ಯಾಮರಾಗಳನ್ನು ಅವಳಡಿಸಲಾಗುತ್ತಿದೆ. ಕವಿ, ಸಾಹಿತಿಗಳ ಭಾವಚಿತ್ರಗಳಿಗೆ ಕಲಾತ್ಮಕ ಸ್ಪರ್ಶ ಸಿಗಲಿದೆ. ಅಲ್ಲದೆ ಕಸಾಪದ ಆವರಣಕ್ಕೆ ಹೊಸ ತಡೆಗೋಡೆ ನಿರ್ವಿುಸಲಾಗುತ್ತಿದ್ದು, ಈ ಗೋಡೆಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಕವಿ ಸಾಹಿತಿಗಳ ಭಾವಚಿತ್ರಗಳನ್ನು ಆಳವಡಿಸುವ ಚಿಂತನೆಯಿದೆ. ಆವರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ಎಂ. ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಅವರ ಪುತ್ಥಳಿ ಅನಾವರಣ ಹಾಗೂ ಎಲ್​ಇಡಿ ವಿದ್ಯುತ್ ವ್ಯವಸ್ಥೆಯ ಬೃಹತ್ ಸ್ವಾಗತ ಕಮಾನು ನಿರ್ವಿುಸಲಾಗುವುದೆಂದು ಕಸಾಪ ಅಧ್ಯಕ್ಷರು ಹೇಳಿದ್ದಾರೆ.
ಪ್ರಯತ್ನಗಳು ಫಲಿಸಿರಲಿಲ್ಲ:ಸಭಾಂಗಣಗಳ ಸಮಸ್ಯೆಯನ್ನು ಸಿಎಸ್​ಆರ್ ನಿಧಿಯಲ್ಲಿ ಪರಿಹರಿಸಲು ನಿಕಟಪೂರ್ವ ಅಧ್ಯಕ್ಷ ಡಾ. ಮನು ಬಳಿಗಾರ್ ಪ್ರಯತ್ನಿಸಿದ್ದರು. ನಂತರ ಆಡಳಿತಾಧಿ ಕಾರಿಯಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ 1 ಕೋಟಿ ರೂ.ಗಳ ಯೋಜನೆ ರೂಪಿಸಿದ್ದರು. ಆದರೆ, ಆಗ ಸಾಧ್ಯವಾಗಿರಲಿಲ್ಲ.
| ನಾಡೋಜ ಡಾ. ಮಹೇಶ ಜೋಶಿಕಸಾಪ ಅಧ್ಯಕ್ಷ
ಹಣಕಾಸು ಸಮಿತಿ ವೀಕ್ಷಣೆ:ಸಭಾಂಗಣ ದುರಸ್ತಿ ಹಾಗೂ ನವೀಕರಣ ಆಗ ಬೇಕೆಂಬ ಕಾರಣಕ್ಕೆ ಕಸಾಪ ಹಣಕಾಸು ಸಮಿತಿ ಸದಸ್ಯರು ಈ ಹಿಂದೆ ವೀಕ್ಷಣೆ ನಡೆಸಿದ್ದರು. ಹಣಕಾಸು ಸಮಿತಿ ಅಧ್ಯಕ್ಷರಾದ ಕಸಾಪ ಅಧ್ಯಕ್ಷರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರ ಪ್ರತಿನಿಧಿ, ಹಣಕಾಸು ಇಲಾಖೆ ಕಾರ್ಯದರ್ಶಿ ಪ್ರತಿನಿಧಿ ಸೇರಿ ಹಲವು ಸದಸ್ಯರು ಕಟ್ಟಡ ದುರಸ್ತಿಗಾಗಿ ಧನಸಹಾಯ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈಗ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ನವೀಕರಣದ ಜವಾಬ್ದಾರಿ ನೀಡಲಾಗಿದೆ.
ಅಪ್ಪು ಹುಟ್ಟಿದಾಗ್ಲೇ ಸೂಪರ್ ಸ್ಟಾರ್, ನಾವೆಲ್ಲಾ ಆಮೇಲೆ ಸ್ಟಾರ್ ಆದೋರು; ಶಿವಣ್ಣ ಭಾವುಕ ನುಡಿ

ಲಂಡನ್​ನಲ್ಲಿ ಅದ್ಧೂರಿಯಾಗಿ ನಡೆದ ಬಸವೇಶ್ವರ ಜಯಂತಿ- ಅಂಬೇಡ್ಕರ್​ ಪ್ರತಿಮೆಗೆ ಪುಷ್ಪ ನಮನ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:three + three =
Remember me
