|ಶ್ರೀ ವಿಶ್ವನಾಥ ಚಕ್ರವರ್ತಿ(ಶ್ರೀ ಕ್ಷೇತ್ರ ಆನಂದವನ ಅಗಡಿ)
ಒಂದು ದಿನ ಬೀಚಿಯವರು ಮಧ್ಯಾಹ್ನ ಮನೆಯಲ್ಲಿ ಊಟಕ್ಕೆ ಕುಳಿತಾಗ ಗಳಗನಾಥರು, ‘ತಾಯಿ ಕನ್ನಡ ಪುಸ್ತಕ ಬೇಕೆ?’ ಎಂದು ಕೇಳಿದರು. ಆಗ ಬೀಚಿಯವರ ಹೆಂಡತಿ, ‘ನನ್ನ ಗಂಡ ಬರೆದಿರುವ ಪುಸ್ತಕವನ್ನೇ ಓದಲು ಆಗುವುದಿಲ್ಲ ಪುಣ್ಯಾತ್ಮ’ ಎಂದು ಹೇಳಿಕಳಿಸಿದರು. ಈ ಸುದ್ದಿ ತಿಳಿದ ತಕ್ಷಣ ಬೀಚಿಯವರು ರಸ್ತೆಗೆ ಬಂದು ಗಳಗನಾಥರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಎಲ್ಲ ಪುಸ್ತಕಗಳನ್ನು ತಾವೇ ಕೊಂಡುಕೊಂಡರು.
ಗಳಗನಾಥರೆಂದರೆ ಕನ್ನಡ ಸಾಹಿತ್ಯಲೋಕದ ಅಮೂಲ್ಯ ರತ್ನ, ಕನ್ನಡದ ಉಳಿವಿಗಾಗಿ ತಮ್ಮ ಜೀವನವನ್ನೇ ಶ್ರೀಗಂಧದ ಕೊರಡಿನಂತೆ ತೇಯ್ದ ಮಹಾಯೋಗಿ.
‘ಕನ್ನಡದ ಕಾದಂಬರಿ ಪಿತಾಮಹ’ ಗಳಗನಾಥರು ಹುಟ್ಟಿದ್ದು 1869ರ ಜನವರಿ 5ರಂದು. ವೆಂಕಟೇಶ ತಿರಕೋ ಕುಲ್ಕರ್ಣಿ ‘ಗಳಗನಾಥ’ ಎಂಬ ಊರಿನಲ್ಲಿ ಬಾಲ್ಯದ ಶಿಕ್ಷಣ ಪಡೆದು ಧಾರವಾಡದ ಟ್ರೇನಿಂಗ್ ಕಾಲೇಜಿನಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದರು.
ಅಲ್ಲಿನ ಅನೇಕ ಶಿಕ್ಷಕರು, ಸಾಹಿತಿಗಳು ಮತ್ತು ಲೇಖಕರ ಪ್ರಭಾವ ಇವರ ಮೇಲಾಯಿತು. ಲೋಕಮಾನ್ಯ ತಿಲಕರ ‘ಕೇಸರಿ’, ಹರಿ ನಾರಾಯಣ ಆಪ್ಟೆಯವರ ‘ಕರಮನೂಕ್’ ಪತ್ರಿಕೆಗಳು ಇವರ ಮೇಲೆ ಅಗಾಧ ಪ್ರಭಾವ ಬೀರಿದವು, ಅವರ ಲೇಖನಗಳನ್ನು ಕನ್ನಡಿಗರಿಗೆ ಉಣಬಡಿಸಲು ಇವರ ಮನಸ್ಸು ಹಾತೊರೆಯಿತು. ಬಹುಬೇಗನೆ ಗಳಗನಾಥರ ಲೇಖನಗಳು ಕನ್ನಡಿಗರ ಮನ ಗೆದ್ದವು. ಗಳಗನಾಥರನ್ನು ನೋಡದಿದ್ದರೂ ಇವರ ಲೇಖನ ಓದಿ ಜಾಗೃತರಾದವರು ಇವರನ್ನು ಕಾಣಲು ಹಂಬಲಿಸಿದರು.
ಹರಿದು ಹಂಚಿ ಹೋಗಿದ್ದ, ಓದಲು ದೊರೆಯದ ಕನ್ನಡವನ್ನು ಮನೆಮನೆಗೆ ತಲುಪಿಸಿದ, ಕನ್ನಡ ಪುಸ್ತಕವನ್ನು ತಲೆಯ ಮೇಲೆ ಹೊತ್ತು ಊರೂರಿಗೆ ಹೋಗಿ ಮಾರಿದ ಕನ್ನಡದ ಸಂತ ಗಳಗನಾಥರು.
ಅಗಡಿ ಶ್ರೀ ಶೇಷಾಚಲ ಸದ್ಗುರು ಮಹಾರಾಜರ ಅಪಾರ ಪ್ರಭಾವಕ್ಕೊಳಗಾದ ಗಳಗನಾಥರು ಅವರ ಪರಮ ಶಿಷ್ಯರಾದರು. ಸದ್ಗುರುಗಳ ಅಂತಃಕರಣದ ಕೃಪೆಯಾಯಿತು. ಸರಸ್ವತಿ ಮಾತೆಯು ಗಳಗನಾಥರನ್ನು ಮಗನಂತೆ ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಕನ್ನಡಿಗರ ಮನತಣಿಸಿದಳು.
ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧಗಳು ಹಾಗೂ ಸದ್ಭೋಧ ಚಂದ್ರಿಕೆ ಎಂಬ ಕನ್ನಡ ಮೊದಲ ಮಾಸಪತ್ರಿಕೆಯನ್ನು ಕನ್ನಡಿಗರ ಮಡಿಲಿಗಿಟ್ಟರು.
ಪ್ರಬುದ್ಧ ಪದ್ಮನಯನೆ, ಕಮಲಕುಮಾರಿ, ರಾಣಿ ಮೃಣಾಲಿನಿ, ವೈಭವ, ಕುಮುದಿನಿ, ಈಶ್ವರಿ ಸೂತ್ರ, ಕ್ಷಾತ್ರ ತೇಜ, ಧರ್ಮರಹಸ್ಯ, ಸತ್ವಸಾರ, ತಿಲೋತ್ತಮೆ, ಕನ್ನಡಿಗರ ಕರ್ಮಕಥೆ, ಕುರುಕ್ಷೇತ್ರ, ಮರಾಠರ ಅಭ್ಯುದಯ, ಛತ್ರಪತಿ, ಗೃಹಕಲಹ, ರಾಣಾ ರಾಜಸಿಂಹ, ಧಾರ್ವಿುಕ ತೇಜ, ಸಂಸಾರ ಸುಖ, ಸ್ವರಾಜ್ಯ ಸುಗಂಧ, ದುರ್ಗದ ಬಿಚ್ಚುಗತ್ತಿ, ಭಗವತಿ ಕಾತ್ಯಾಯಿನಿ ಮುಂತಾದ ಕಾದಂಬರಿಗಳನ್ನು ರಚಿಸಿದರು.
ಗಳಗಾಥರು ವೈಯಕ್ತಿಕ ಜೀವನದಲ್ಲಿ ಅಪಾರ ನೋವುಂಡರೂ ಕನ್ನಡಿಗರಿಗೆ ಸಾಹಿತ್ಯ ಎಂಬ ಮೃಷ್ಟಾನ್ನ ಉಣಬಡಿಸಿದರು. ಬರವಣಿಗೆ ಎಂದರೆ ಗಳಗನಾಥರಿಗೆ ಸುಲಿದ ಬಾಳೆಯ ಹಣ್ಣಿನಂತೆ. 1942ರ ಏಪ್ರಿಲ್ 22ರಂದು 74ನೇ ವಯಸ್ಸಿನಲ್ಲಿ ಚಿರನಿದ್ರೆಗೆ ಜಾರಿದ ಗಳಗನಾಥರು ಸಾಹಿತ್ಯ ಲೋಕದಲ್ಲಿ ಸದಾ ಜೀವಂತ.
‘ನೀವೇ ನಿಜವಾದ ಸಚಿನ್ ಅಂತ ಏನು ಗ್ಯಾರಂಟಿ?’ ಎಂದಿದ್ದಕ್ಕೆ ತೆಂಡುಲ್ಕರ್ ಕೊಟ್ಟ ವೆರಿಫಿಕೇಷನ್ ಇದು!
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:thirteen − 13 =
Remember me
