ಬೆಂಗಳೂರು:ಡಾ. ಬ್ರೋ ಎನ್ನುವ ಹೆಸರಿನಲ್ಲಿ ಯೂಟ್ಯೂಬ್​ ಖಾತೆ ತೆರೆದು ತಮ್ಮ ವೀಕ್ಷಕರ ಅಭಿರುಚಿಗೆ ತಕ್ಕಂತೆ ದೇಶ-ವಿದೇಶ ಪ್ರವಾಸ ಮಾಡುತ್ತಾ ತನ್ನ ಪ್ರವಾಸ ವಿಡಿಯೋವನ್ನು ಹಂಚಿಕೊಳುತ್ತಿದ್ದ ಯೂಟ್ಯೂಬರ್​ ಡಾ. ಬ್ರೋ ಖ್ಯಾತಿಯ ಗಗನ್​​ ಶ್ರೀನಿವಾಸ್​ ಅವರು ಕಳೆದ ಒಂದು ತಿಂಗಳಿನಿಂದ ಯಾವುದೇ ವಿಡಿಯೋವನ್ನು ಹಂಚಿಕೊಂಡಿಲ್ಲ. ಈ ಕುರಿತಾಗಿ ಅವರ ಅಭಿಮಾನಿಗಳು ಯಾಕೆ ಬ್ರೋ ಏನಾಯ್ತು ಎಂದು ಕಾಮೆಂಟ್​ ಮಾಡುತ್ತಾ ಗಗನ್​​ ಅವರಿಗಾಗಿ ನೆಟ್ಟಿಗರು ಸೋಶಿಯಲ್​​ ಮೀಡಿಯಾದಲ್ಲಿ ಹುಟುಕಾಡ ಪ್ರಾರಂಭಿಸಿದ್ದಾರೆ.
ನಮಸ್ಕಾರ ದೇವು ಎನ್ನುತ್ತಾ ತಿಂಗಳಿಗೆ ಎರಡು ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡುತ್ತಾ ಸುದ್ದಿ ಮಾಡುತ್ತಿದ್ದರು.ಕಳೆದ ಒಂದು ತಿಂಗಳಿಂದ ಯಾವುದೇ ಸೋಶಿಯಲ್ ಮೀಡಿಯಾದಲ್ಲಿಯೂ ಸಕ್ರಿಯರಾಗಿಲ್ಲ ಇದನ್ನು ಗಮನಿಸಿದಂತಹ ಸಾಕಷ್ಟು ಅಭಿಮಾನಿಗಳು ಹಾಗೂ ನೆಟ್ಟಿಗರು ಡಾ. ಬೋ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ.
ಡಾ.ಬ್ರೋ ಕಳೆದ ನವೆಂಬರ್‌ 29 ರಂದು ವಿಡಿಯೋ ಹಂಚಿಕೊಂಡಿದ್ದೇ ಕೊನೆ ಅಲ್ಲಿಂದ ಇಲ್ಲಿವರೆಗೆ ಒಂದೇ ಒಂದು ಅಪ್ಡೇಟ್‌ ಅವರ ಸಾಮಾಜಿಕ ಜಾಲತಾಣದ ಅಕೌಂಟ್‌ನಿಂದ ಹೊರಬಂದಿಲ್ಲ.
ಅಷ್ಟಕ್ಕೂ ಇದರ ಅಸಲಿಯತ್ತೇನು? ಡಾ. ಬ್ರೂ ಎಲ್ಲಿದ್ದಾರೆ? ಹೇಗಿದ್ದಾರೆ? ಎಂದು ನೆಟ್ಟಿಗರು ಹಾಗೂ ಡಾ. ಬ್ರೋ ಯೂಟ್ಯೂಬ್​ ಚಾನೆಲ್​ ವೀಕ್ಷಕರು ಕೇಳುತ್ತಿದ್ದಾರೆ. ಈ ಎಲ್ಲಾ ಪ್ರಶ್ನೆಗಳಿಗೆ ಇಂದು ಮತ್ತೊಬ್ಬ ಪ್ರಸಿದ್ಧ ಯೂಟ್ಯೂಬರ್‌ ಗ್ಲೋಬಲ್‌ ಕನ್ನಡಿಗ (ನಟ ಮಹಾಬಲ ರಾಮ್) ನಿಮಗೆ ಉತ್ತರ ನೀಡಿದ್ದಾರೆ.
ಅಸಲಿಗೆ ಡಾ.ಬ್ರೋ ಸ್ಟಾರ್ ಅವರು ವಿಶ್ವಕಪ್‌ ಸಮಯದಲ್ಲಿ 2 ತಿಂಗಳ ಕಾಲ ಸ್ಪೋರ್ಟ್ ಕನ್ನಡದಲ್ಲಿ ಕಾಣಿಸಿಕೊಂಡಿದ್ದರು. ಸ್ಪೋರ್ಟ್ ಕನ್ನಡದ ಕೆಲಸ ಮುಗಿಸಿಕೊಂಡು ಆರಾಮವಾಗಿ ರೆಸ್ಟ್ ಮಾಡುತ್ತಿದ್ದಾರೆ. ವಲ್ಡ್‌ ಕ್ಲಾಸ್‌ ಚಾನೆಲ್‌ ಸ್ಟಾರ್‌ಸ್ಟೋರ್ಟ್ ಕನ್ನಡದಲ್ಲಿ ವಿಶ್ವಕಪ್‌ ಗೆ ಸಂಬಂಧಿಸಿದ ವಿಡಿಯೋ ಮಾಡುತ್ತಿದ್ದರು. ಮುಂದಿನ ಸೀರಿಸ್‌ ಬಗ್ಗೆ ಪ್ಲಾನ್‌ ಮಾಡುತ್ತಿದ್ದಾರೆ. ಅವರು ಆರಾಮವಾಗಿ ಖುಷಿಯಾಗಿದ್ದಾರೆ ಎಂದು ಗ್ಲೂಬಲ್‌ ಕನ್ನಡಿಗ ರಾಮ್‌ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಅಬ್ಬಾ ನಮಸ್ಕಾರ ದೇವ್ರು ಆರಮ್​ ಇದ್ದರೆ ಸಾಕು ನೀವು.. ನಾವು ನಿಮ್ಮ ಮುಂದಿನ ವಿಡಿಯೋಗೆ ಕಾಯುತ್ತಿದ್ದೇವೆ…ಬ್ರೋ ಆದಷ್ಟು ಬೇಗ ದರ್ಶನ ಕೊಡಿ ಎಂದು ಕಾಮೆಂಟ್​​ ಮಾಡಿದ್ದಾರೆ.
ನನಗೆ ಸಹಾಯ ಮಾಡಿ ಎಂದು ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರಿಟ್ಟ ಖ್ಯಾತ ನಟಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − fifteen =
Remember me
