| ಜಗನ್ನಾಥ್ ಕಾಳೇನಹಳ್ಳಿತುಮಕೂರುಜಿಲ್ಲಾಮಟ್ಟದ ಯುವಜನೋತ್ಸವದಲ್ಲೇ ಕನ್ನಡ ಕಡೆಗಣಿಸಿರುವುದು ಬೆಳಕಿಗೆ ಬಂದಿದೆ. ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಿ.29ರಂದು ಆಯೋಜಿಸಿರುವ ಯುವಜನೋತ್ಸವದಲ್ಲಿ ಏಕಾಂಕ ನಾಟಕ, ಆಶುಭಾಷಣ ಸ್ಪರ್ಧೆಯನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಆಯೋಜಿಸಿರುವುದು ಕನ್ನಡ ಭಾಷೆಗೆ ಮಾಡಿರುವ ಅವಮಾನ ಎಂಬ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮ ಎಂಬ ನೆಪ ಹೇಳಿ ಸ್ಥಳೀಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಈ ಬಾರಿ ಯುವಜನೋತ್ಸವವನ್ನು ಸರಳವಾಗಿ ಆಚರಿಸುತ್ತಿದೆ. ಜನಪದ ನೃತ್ಯ, ಜನಪದ ಗೀತೆ, ಶಾಸ್ತ್ರೀಯಗಾಯನ (ಕರ್ನಾಟಕ, ಹಿಂದುಸ್ತಾನಿ), ಶಾಸ್ತ್ರೀಯವಾದ್ಯ, ಶಾಸ್ತ್ರೀಯನೃತ್ಯ ಸ್ಪರ್ಧೆ ಜತೆಗೆ ಏಕಾಂಕ (ಇಂಗ್ಲಿಷ್/ಹಿಂದಿ) ಹಾಗೂ ಆಶುಭಾಷಣ (ಇಂಗ್ಲೀಷ್/ಹಿಂದಿ) ಸ್ಪರ್ಧೆ ಏರ್ಪಡಿಸಿದೆ. ಜಿಲ್ಲೆಯ 16 ರಿಂದ 29 ವರ್ಷದೊಳಗಿನ ಯುವಜನತೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇದ್ದು ಸ್ಥಳೀಯ ಕಲೆಗಳಿಗೆ ಮನ್ನಣೆ ನೀಡಲಾಗಿಲ್ಲ. ಜತೆಗೆ ಕನ್ನಡಕ್ಕೂ ಆದ್ಯತೆ ಕೊಡದೇ ಇರುವುದು ಹಿಂದಿ ಹೇರಿಕೆಯ ಹುನ್ನಾರವೇ ಎಂಬುದು ಕನ್ನಡ ಕಲಾವಿದರ ಪ್ರಶ್ನೆಯಾಗಿದೆ.
ಕಸಾಪ ಆಕ್ಷೇಪ:ಸಂಗೀತ, ನೃತ್ಯಕ್ಕೆ ಭಾಷೆಯ ಮಿತಿ ಇರುವುದಿಲ್ಲ. ಆದರೆ, ಸಾಹಿತ್ಯಕ್ಕೆ ಪೂರಕವಾದ ಆಶುಭಾಷಣ, ಏಕಾಂಕ ನಾಟಕಗಳಲ್ಲಿ ಕನ್ನಡ ಭಾಷೆ ಕಡೆಗಣಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕನ್ನಡ ಸಾಹಿತ್ಯ ಪರಿಷತ್ ಸಂಬಂಧಪಟ್ಟ ಅಧಿಕಾರಿಗಳ ಗಮನಸೆಳೆದಿದೆ. ಆದರೆ, ಅಧಿಕಾರಿಗಳು ನೆಪ ಹೇಳಿ ಜಾರಿಕೊಂಡಿದ್ದಾರೆ. ಇನ್ನು ಜಿಲ್ಲಾಡಳಿತ ಯುವಜನೋತ್ಸವ ಮುಗಿದರೆ ಸಾಕು, ಭಾಷೆಗೆ ಅನ್ಯಾಯವಾದರೆ ತನಗೇನು ಎಂಬ ಧೋರಣೆ ಹೊಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − three =
Remember me
