ಹಾಸನ: ವಿಶ್ವವನ್ನೇ ತಲ್ಲಣಗೊಳಿಸಿರುವ ಕರೊನಾ ಸೋಂಕಿಗೆ ಲಸಿಕೆ ಸಂಶೋಧಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಘ ರೂಪಿಸಿರುವ ಯೂರೋಪ್ ರಾಷ್ಟ್ರಗಳ 10 ತಂಡಗಳನ್ನು ಒಳಗೊಂಡಿರುವ ಯುರೋಪಿಯನ್ ಟಾಸ್ಕ್​ಫೋರ್ಸ್ ಫಾರ್ ಕರೊನಾ ವೈರಸ್ ಟೀಂನಲ್ಲಿ ಅರಕಲಗೂಡು ಮೂಲದ ಕನ್ನಡಿಗ ಯುವ ವಿಜ್ಞಾನಿ ಸ್ಥಾನ ಪಡೆದಿದ್ದಾರೆ. ಅವರು ತಿಂಗಳಿನಿಂದ ಔಷಧ ಸಂಶೋಧನೆಯಲ್ಲಿ ನಿರತರಾಗಿದ್ದಾರೆ.
ಅರಕಲಗೂಡಿನ ದಿ.ಜವರಪ್ಪ ಮತ್ತು ಎ.ಆರ್.ರತ್ನಮ್ಮ ದಂಪತಿ ಪುತ್ರ ಮಹದೇಶ್ ಪ್ರಸಾದ್ ಜಾಗತಿಕ ಸಮಸ್ಯೆಗೆ ಪರಿಹಾರ ರೂಪಿಸುತ್ತಿರುವ ತಂಡದ ಭಾಗವಾಗಿರುವ ಕನ್ನಡಿಗ.
ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದ ಅವರು, ಅರಕಲಗೂಡು ಪಟ್ಟಣದ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ, ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್​ಸಿ ಪದವಿ ಪೂರೈಸಿದ್ದು, ಮೈಸೂರು ವಿವಿಯಲ್ಲಿ ಬಯೋಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟೊರಲ್ ಸಂಶೋಧನಾರ್ಥಿಯಾಗಿದ್ದರು.
ಸದ್ಯ ಬೆಲ್ಜಿಯಂನ ಲಿವುವೆನ್​ನಲ್ಲಿರುವ ವಿವುವೆನ್ ವಿಶ್ವವಿದ್ಯಾಲಯದ ಆರ್​ಇಜಿಎ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿ ಆಂಡ್ ಕಿಮೋಥೆರಪಿಯಲ್ಲಿ ವಿಜ್ಞಾನಿಯಾಗಿ ದ್ದಾರೆ. ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾದಾಗ ವಿದೇಶಗಳಲ್ಲಿರುವ ವಿಜ್ಞಾನಿಗಳು ದೇಶಕ್ಕೆ ಹಿಂದಿರುಗಿ ಇಲ್ಲಿಯೇ ಸಂಶೋಧನಾ ಕಾರ್ಯ ಆರಂಭಿಸುವಂತೆ ಕರೆ ನೀಡಿದ್ದರು. ಅದಕ್ಕೆ ಓಗೊಟ್ಟು ಭಾರತಕ್ಕೆ ಆಗಮಿಸಿ ಇಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದರು. 2019ರಲ್ಲಿ ಪೋಸ್ಟ್ ಡಾಕ್ಟೊರಲ್ ಸಂಶೋಧನಾ ವಿಜ್ಞಾನಿಯಾಗಿ ಬೆಲ್ಜಿಯಂಗೆ ತೆರಳಿರುವ ಅವರು ಅಲ್ಲಿನ ಲಿಂಕೋಪಿಂಗ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಬೆಲ್ಜಿಯಂ ಲಿಯುವೆನ್ ನಗರದಲ್ಲಿ ಪತ್ನಿ ಹಾಗೂ ಪುತ್ರನೊಂದಿಗೆ ನೆಲೆಸಿದ್ದಾರೆ. ಕರೊನಾ ಸೋಂಕು ಹಬ್ಬುತ್ತಿದ್ದಂತೆ ಜಾಗೃತವಾದ ಯೂರೋಪ್ ರಾಷ್ಟ್ರಗಳು 10 ಸಂಶೋಧನಾ ತಂಡ ರಚಿಸಿದಾಗ, ಮಹದೇಶ್ ಪ್ರಸಾದ್ ಹೆಸರನ್ನು ಲಿಂಕೋಪಿಂಗ್ ವಿವಿಯ ಕುಲಪತಿ ತಂಡಕ್ಕೆ ಶಿಫಾರಸು ಮಾಡಿದ್ದು, ಅವರು ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ತಂಡದ ಭಾಗವಾಗಿ ಕರೊನಾ ಸೋಂಕಿಗೆ ಪರಿಹಾರ ಹುಡುಕುವ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಅವರ ಸಹೋದರ ಕೋಮಲ್ ಪ್ರಸಾದ್ ಕೂಡ ವಿಜ್ಞಾನಿಯಾಗಿದ್ದು, ಕ್ಯಾನ್ಸರ್ ರೋಗಕ್ಕೆ ಔಷಧ ಸಂಶೋಧಿ ಸುವ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಿಖರ ಫಲಿತಾಂಶಕ್ಕೆ 6 ತಿಂಗಳು ಬೇಕು
ಭಾರತ ಅತೀ ಹೆಚ್ಚು ಜನ ಸಾಂದ್ರತೆ ಇರುವ ದೇಶ. ಕರೊನಾ ಅಥವಾ ಅದೇ ಮಾದರಿಯ ಯಾವುದೇ ಸಾಂಕ್ರಾಮಿಕ ಸೋಂಕು ಅಲ್ಲಿಗೆ ಬರಬಾರದು. ಸ್ವಚ್ಛತೆ ಕಾಯ್ದುಕೊಳ್ಳುವುದರ ಜತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ವಯೋವೃದ್ಧರನ್ನು ಕರೊನಾದಂತಹ ಸಾಂಕ್ರಾಮಿಕ ಸೋಂಕು ಬೇಗ ಆಪೋಶನ ತೆಗೆದುಕೊಳ್ಳುತ್ತದೆ ಎಂದು ಜಾಗತಿಕ ವರದಿ ಹೇಳಿದೆ. ಸದ್ಯ ನಮ್ಮ ಸಂಶೋಧನೆ ನಿರ್ಣಾಯಕ ಘಟ್ಟ ತಲುಪಿದೆ. ಮೊದಲ ಹಂತದ ಯಶಸ್ಸು ಗಳಿಸಿದ್ದೇವೆ. ನಿಖರವಾದ ಫಲಿತಾಂಶಕ್ಕೆ 6 ತಿಂಗಳು ಬೇಕಾಗಬಹುದು. ಒಂದೂವರೆ ಎರಡು ವರ್ಷಗಳ ನಂತರ ಹಲವು ಪರೀಕ್ಷೆಗಳಿಗೆ ಒಳಪಟ್ಟು ನಮ್ಮ ಸಂಶೋಧನೆಯ ಫಲಿತಾಂಶ ಜಾಗತಿಕ ಮಾನ್ಯತೆ ಪಡೆಯಲಿದೆ. ಅಲ್ಲಿಯವರೆಗೂ ಕರೊನಾ ನಾಶಪಡಿಸುವ ಯಾವುದೇ ಔಷಧಗಳ ಬಗ್ಗೆ ಜಾಲತಾಣಗಳಲ್ಲಿ ಹರಡುತ್ತಿರುವ ಹುಸಿ ಮಾಹಿತಿ ನಂಬಬೇಡಿ ಎನ್ನುತ್ತಾರೆ ಮಹದೇಶ್ ಪ್ರಸಾದ್.
ಮಹದೇಶ್ ಪ್ರಸಾದ್ ಪಿಯು ವ್ಯಾಸಂಗ ಮಾಡುತ್ತಿದ್ದಾಗ ನಾನು ಅವರಿಗೆ ಉಪನ್ಯಾಸಕನಾಗಿದ್ದೆ. ಆವತ್ತಿಗೆ ಕುಟುಂಬದ ಎಲ್ಲ ಸಂಕಟಗಳ ನಡುವೆ ಅಂದುಕೊಂಡಿದ್ದನ್ನು ಸಾಧಿಸಿದ ಸಾಧಕ. ಮಾನಸಗಂಗೋತ್ರಿಯಿಂದ 2 ಸ್ನಾತಕ ಪದವಿ ಮತ್ತು ಪಿಎಚ್​ಡಿ ಗಳಿಸಿದ್ದಾರೆ. ಈಗ ಯೂರೋಪಿಯನ್ ವಿಜ್ಞಾನಿಗಳ ತಂಡದ ಸದಸ್ಯರಾಗಿ ಕರೊನಾಗೆ ಲಸಿಕೆ ಕಂಡು ಹಿಡಿಯುವ ಸಂಶೋಧನೆಯಲ್ಲಿ ತೊಡಗಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.
| ಅರಕಲಗೂಡು ಜಯಕುಮಾರ್ ಲೇಖಕ
ಕೆಲವೇ ದಿನಗಳಲ್ಲಿ ಮದುವೆ ಆಗಲಿರುವ ವಧುವಿನ ಫೇಸ್​ಬುಕ್​ ಪೋಸ್ಟ್​ ನೋಡಿ ರೊಚ್ಚಿಗೆದ್ದ ನೆಟ್ಟಿಗರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 5 =
Remember me
