ಭೂಕಂಪ-ಸುನಾಮಿಯಿಂದಾಗಿಜಪಾನ್ ಮೇಲೆ ಈಗ ವಿಶ್ವದ ಕಣ್ಣುನೆಟ್ಟಿದೆ. ಅಲ್ಲಿ ಯಾವುದೇ ಅನಾಹುತ ಆಗದಿರಲಿ ಎಂಬ ಹಾರೈಕೆಗಳೂ ಕೇಳಿಬರುತ್ತಿವೆ. ಇಂಥ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿ ಬಗ್ಗೆ ಜಪಾನ್​ನಲ್ಲಿ ನೆಲೆಸಿರುವ ಕನ್ನಡಿಗ, ಟೊಯೊಟಾ ಕಂಪನಿಯ ಉದ್ಯೋಗಿ ಮಲ್ಲಿ ಯಾದವ್ ವಿಜಯವಾಣಿ ಜತೆ ಅನುಭವ ಹಂಚಿಕೊಂಡಿದ್ದಾರೆ.
ಇಡೀ ದೇಶದಲ್ಲಿ ಪ್ರಸ್ತುತ ಗೋಲ್ಡನ್ ಹಾಲಿಡೇಸ್ ನಡೆಯುತ್ತಿದ್ದು, ನಾವು ಶಾಪಿಂಗ್ ಮಾಲ್​ವೊಂದರ ನಾಲ್ಕನೇ ಮಹಡಿಯಲ್ಲಿದ್ದಾಗ ಎಲ್ಲರ ಮೊಬೈಲ್​ಫೋನ್ ಸ್ಕ್ರೀನ್ ಹಳದಿ ಬಣ್ಣಕ್ಕೆ ತಿರುಗಿ ಸೈರನ್ ಥರ ಸದ್ದು ಬಂತು. ಯಾರೋ ಹ್ಯಾಕ್ ಮಾಡಿರಬಹುದು ಎಂದá-ಕೊಳ್ಳುವಾಗಲೇ ಇಡೀ ಮಾಲ್ ಅಲ್ಲಾಡಲು ಶುರುವಾಯಿತು. ಎಲ್ಲ ಕಡೆ ಕೂಗಾಟ ಜೋರಾಯ್ತು. ಮಕ್ಕಳನ್ನು ಪೋಷಕರು ಟೇಬಲ್ ಕೆಳಗೆ ದೂಡುತ್ತಿದ್ದರು, ಕೆಲವರು ಹೊರಗಡೆ ಓಡತೊಡಗಿದರು. ಅಲ್ಲಿನ ಸಿಬ್ಬಂದಿ ಅಷ್ಟೇನೂ ಗಾಬರಿ ಆದಂತೆ ಕಾಣಲಿಲ್ಲ. ನಮಗೆ ಟೇಬಲ್ ಕೆಳಗೆ ಕೂರುವಂತೆ ಸೂಚಿಸಿದರು. ನನಗೆ ಇದು ಹೊಸ ಅನುಭವವಾದ್ದರಿಂದ ನೋಡುತ್ತಿದ್ದೆ, 2 ನಿಮಿಷದ ನಂತರ ಪರಿಸ್ಥಿತಿ ಶಾಂತವಾಯಿತು. ಆ ಮಾಲ್​ನಲ್ಲಿ ಜಪಾನಿಯರು ಇಂಥ ಪರಿಸ್ಥಿತಿಗೆ ಎಷ್ಟು ಹೊಂದಿಕೊಂಡಿದ್ದಾರೆಂದರೆ, ಭೂಕಂಪನದ ನಂತರ ಏನೂ ಆಗೇ ಇಲ್ಲವೆಂಬಂತೆ ತಮ್ಮ ಪಾಡಿಗೆ ಕೆಲಸದಲ್ಲಿ ಮಗ್ನರಾದರು. ಅದರ ಬಗ್ಗೆ ಚರ್ಚೆ ಕೂಡ ಮಾಡಲಿಲ್ಲ. ನಾನೇ ಕೆದಕಿ ‘ಮತ್ತೆ ಆಗುತ್ತ?’ ಎಂದು ಕೇಳಿದ್ದಕ್ಕೆ ‘ಮೇ ಬಿ’ ಎಂದಷ್ಟೇ ಉತ್ತರ ಕೊಟ್ಟು ಅದರ ಬಗ್ಗೆ ಮಾತಾಡಲು ನಿರಾಸಕ್ತಿ ತೋರಿದರು. ನಮ್ಮಲ್ಲಾಗಿದ್ದರೆ ವಾರಗಟ್ಟಲೆ ಅದೇ ಚರ್ಚೆ ಮಾಡುತ್ತಿದ್ದೆವು.
ಈ ದೇಶಕ್ಕೆ ಬಂದಾಗ ನಮ್ಮ ಕಂಪನಿಯವರು ಟ್ರಾಫಿಕ್ ನಿಯಮ, ಸುರಕ್ಷತೆ, ಕಸ ವಿಲೇವಾರಿ ಜತೆಗೆ ಭೂಕಂಪ ವೇಳೆ ಹೇಗೆ ಮುಂಜಾಗ್ರತೆ ತೆಗೆದುಕೊಳ್ಳಬೇಕೆಂಬ ತರಬೇತಿ ನೀಡಿದ್ದರು. ಹಾಗಾಗಿ ಅಷ್ಟು ಭಯ ಆಗಲಿಲ್ಲ. ವಿದೇಶಿಗರ ಸುರಕ್ಷತೆ ಬಗ್ಗೆ ಇಲ್ಲಿನವರು ಆದ್ಯತೆ ಕೊಡುತ್ತಾರೆ, ಭೂಕಂಪದ ನಂತರ ಅಪಾರ್ಟ್ಮೆಂಟ್ ಸಿಬ್ಬಂದಿ ವಿಚಾರಿಸಿ, ಯಾರಿಗೂ ಏನೂ ಆಗಿಲ್ವಲ್ಲ ಎಂದು ಖಚಿತಪಡಿಸಿಕೊಂಡರು.
ಜಪಾನ್ ಭೂಕಂಪಕ್ಕೆ 55 ಬಲಿಟೋಕಿಯೋ: ಜಪಾನ್​ನಲ್ಲಿ ಹೊಸ ವರ್ಷದ ದಿನದಂದೇ ಅಪ್ಪಳಿಸಿದ ಭೀಕರ ಭೂಕಂಪ ಮತ್ತು ಪಶ್ಚಾತ್ ಕಂಪನಗಳಿಗೆ ಕನಿಷ್ಠ 55 ಜನರು ಮೃತಪಟ್ಟಿದ್ದು ನೂರಾರು ಜನರು ಗಾಯಗೊಂಡಿದ್ದಾರೆ. ಸರಣಿ ಭೂಕಂಪದಿಂದಾಗಿ ಸುನಾಮಿಯ ಅಪಾಯವೂ ಎದುರಾಗಿದೆ. ಮುಖ್ಯ ಭೂಕಂಪ, ಪಶ್ಚಾತ್ ಕಂಪನಗಳಿಂದ ಆಗಿರುವ ಅಪಾರ ಅನಾಹುತದ ನಡುವೆ ಸಿಲುಕಿರುವ ಜನರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರು ಹರಸಾಹಸ ಪಡುತ್ತಿದ್ದಾರೆ. ಮುಖ್ಯ ಕಂಪನದ ನಂತರ ಸುಮಾರು 155 ಪಶ್ಚಾತ್ ಕಂಪನಗಳು ದೇಶವನ್ನು ನಡುಗಿಸಿವೆ. ಹೊನ್ಶು ದ್ವೀಪದ ಇಷಿಕಾವಾ ಪ್ರದೇಶದಲ್ಲಿ 7.5 ತೀವ್ರತೆಯ ಕಂಪನದಿಂದಾಗಿ ಸುನಾಮಿ ಉಂಟಾಗಿ 1 ಮೀಟರ್​ಗೂ ಹೆಚ್ಚು ಎತ್ತರದ ಅಲೆಗಳು ಸೃಷ್ಟಿಯಾದವು. ಭೂಕಂಪದ ಭೀಕರತೆಯಿಂದ ಅನೇಕ ಕಟ್ಟಡಗಳು ನೆಲಕ್ಕುರುಳಿದವು, ಅನೇಕ ಕಡೆ ಬೆಂಕಿ ಉಂಟಾಗಿದ್ದು, ರಸ್ತೆ-ಹೆದ್ದಾರಿಗಳು ಬಿರುಕು ಬಿಟ್ಟವು. ನೋಟೋ ಪರ್ಯåಯ ದ್ವೀಪದಲ್ಲಿ ಬೆಂಕಿ ಹಾಗೂ ಮನೆ ನಾಶದ ಅನಾಹುತ ಸಂಭವಿಸಿದ್ದಲ್ಲದೆ ನೂರಾರು ಮೀನುಗಾರಿಕಾ ದೋಣಿಗಳು ನೀರುಪಾಲಾದವು ಅಥವಾ ಕಡಲ ಕಿನಾರೆಗೆ ಬಂದು ಬಿದ್ದವು.
ಸಾವು ಹೆಚ್ಚುವ ಭೀತಿ:ಭೂಕಂಪದಿಂದ 55 ಮಂದಿ ಮೖತಪಟ್ಟಿದ್ದಾರೆಂದು ಪ್ರಾಥಮಿಕ ವರದಿಗಳಲ್ಲಿ ಅಧಿಕಾರಿಗಳು ಅಂದಾಜಿಸಿದ್ದಾರೆ. ಆದರೆ, ಉಧ್ವಸ್ತಗೊಂಡ ಕಟ್ಟಡಗಳಡಿ ಸಿಲುಕಿರಬಹುದಾದ ದೇಹಗಳನ್ನು ಹೊರ ತೆಗೆಯುವ ಕಾರ್ಯ ಮುಂದುವರಿದಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಅನೇಕ ಸ್ಥಳಗಳಲ್ಲಿ ಇನ್ನೂ ನೀರು, ವಿದ್ಯುತ್, ಸೆಲ್​ಫೋನ್ ಸೇವೆಗಳು ಅಸ್ತವ್ಯಸ್ತಗೊಂಡಿವೆ.
ಅಣು ಸ್ಥಾವರಗಳು:ಭೂಕಂಪ ಸಂಭವಿಸಿದ ವಲಯದಲ್ಲಿರುವ ಹಲವು ಅಣು ಇಂಧನ ಸ್ಥಾವರಗಳು ಯಾವುದೇ ತೊಂದರೆ ಇಲ್ಲದೆ ಕೆಲಸ ನಿರ್ವಹಿಸುತ್ತಿವೆ. ಜಪಾನ್ ಭೂಕಂಪದ ತೀವ್ರತೆ 7.5 ಆಗಿತ್ತು ಎಂದು ಅಮೆರಿಕದ ಭೂಗರ್ಭ ಸರ್ವೆಕ್ಷಣಾಲಯ ಹೇಳಿದೆ. ಆದರೆ ಅದು 7.6 ಆಗಿತ್ತು ಎಂದು ಜಪಾನ್​ನ ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿದೆ.
ನೆರವಿಗೆ 1,000 ಯೋಧರುರಕ್ಷಣಾ ಕಾರ್ಯದಲ್ಲಿ ನೆರವಾಗಲು ಸುಮಾರು 1,000 ಮಿಲಿಟರಿ ಸಿಬ್ಬಂದಿಯನ್ನು ಕಳಿಸಲಾಗಿದೆ ಎಂದು ಪ್ರಧಾನಿ ಫುಮಿಯೋ ಕಿಷಿದಾ ಮಂಗಳವಾರ ತಿಳಿಸಿದ್ದಾರೆ. ‘ಜನರ ಪ್ರಾಣಗಳನ್ನು ಉಳಿಸುವುದು ನಮ್ಮ ಆದ್ಯತೆ, ನಾವು ಸಮಯದ ವಿರುದ್ಧ ಹೋರಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ. ಪ್ರಧಾನಿ ಮಾತನಾಡುತ್ತಿರುವಾಗಲೇ ಇಷಿಕಾವಾದಲ್ಲಿ 5.6 ತೀವ್ರತೆಯ ಕಂಪನ ಸಂಭವಿಸಿತು. ಬೆಂಕಿಯ ಕೆನ್ನಾಲಗೆ ಮತ್ತು ಹೊಗೆಯಿಂದ ಆಗಸ ಕೆಂಬಣ್ಣಕ್ಕೆ ತಿರುಗಿದ ವಾಜಿಮಾ ನಗರದಲ್ಲಿ ಬೆಂಕಿ ನಿಯಂತ್ರಿಸಲು ಅಗ್ನಿಶಾಮಕ ಪಡೆಗಳನ್ನು ನಿಯೋಜಿಸಲಾಗಿತ್ತು.
ರನ್​ವೇನಲ್ಲಿ ವಿಮಾನ ಡಿಕ್ಕಿಟೋಕಿಯೋದ ಹನೇಡಾ ವಿಮಾನನಿಲ್ದಾಣದಲ್ಲಿಳಿದ ವಿಮಾನ ರನ್​ವೇಯಲ್ಲಿ ಇನ್ನೊಂದಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ವಿಮಾನದಲ್ಲಿ ಸುಮಾರು 400 ಜನರಿದ್ದು ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ. ಕೋಸ್ಟ್ ಗಾರ್ಡ್ ವಿಮಾನದ ಐವರು ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.
ರಷ್ಯಾ, ಕೊರಿಯಾದಲ್ಲಿ ಸುನಾಮಿ ಎಚ್ಚರಿಕೆಜಪಾನ್​ನ ಪ್ರಬಲ ಭೂಕಂಪದ ಪರಿಣಾಮವಾಗಿ ಉತ್ತರ ಕೊರಿಯಾ, ದಕ್ಷಿಣ ಕೊರಿಯಾ, ಮತ್ತು ರಷ್ಯಾದ ಕೆಲವು ಕಡೆ ಸುನಾಮಿ ಸಂಭವಿಸಬಹುದಾಗಿದ್ದು ಎಚ್ಚರಿಕೆಯಿಂದ ಇರುವಂತೆ ಜನರಿಗೆ ಸೂಚಿಸಲಾಗಿದೆ. ಈ ನಡುವೆ, ಮಂಗಳವಾರ ಯಾವುದೇ ದೊಡ್ಡ ಸುನಾಮಿ ಅಲೆಗಳು ಏಳದ ಕಾರಣ ಜಪಾನ್​ನಲ್ಲಿ ಸುನಾಮಿ ಮುನ್ಸೂಚನೆ ವಾಪಸ್ ಪಡೆಯಲಾಗಿದೆ.
ನಾವು ಆತ್ಮಹತ್ಯೆ ಮಾಡಿಕೊಳ್ಳಹುದು: ಅಸ್ತಿಪಂಜರದ ಮನೆಯಲ್ಲಿ ಸಿಕ್ಕ ಹಾಳೆ ಇಂಜಿನಿಯರ್ ಪುತ್ರಿಯ ಕೈ ಬರಹ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
