ಮಂಗಳೂರು/ಉಡುಪಿ:ಉದ್ಯೋಗಕ್ಕಾಗಿ ಇಸ್ರೇಲ್​ನಲ್ಲಿರುವ ದ.ಕ, ಉಡುಪಿ ಜಿಲ್ಲೆಯವರು ಯುದ್ಧದ ನಡುವೆಯೂ ಸುರಕ್ಷಿತವಾಗಿದ್ದಾರೆ. ಅಲ್ಲಿ ನೆನೆಸಿರುವ ಕನ್ನಡಿಗರ ಸಂಖ್ಯೆ ಎಷ್ಟು ಎಂಬುದನ್ನು ಜಿಲ್ಲಾಡಳಿತಗಳು ಸ್ಪಷ್ಟಪಡಿಸಿಲ್ಲವಾದರೂ, ಅಲ್ಲಿರುವವರು ಸಾಮಾಜಿಕ ಜಾಲತಾಣಗಳ ಮೂಲಕ ಮನೆಮಂದಿಯನ್ನು ಸಂರ್ಪಸಿ, ಸುರಕ್ಷಿತವಾಗಿರುವುದನ್ನು ಖಚಿತಪಡಿಸಿದ್ದಾರೆ.
ಇಸ್ರೇಲ್​ನಲ್ಲಿರುವ ಮಂಗಳೂರು ವಾಮಂಜೂರು ನಿವಾಸಿ ಲೆನಾರ್ಡ್ ಫರ್ನಾಂಡಿಸ್ ‘ವಿಜಯವಾಣಿ’ ಜತೆ ಮಾತನಾಡಿ, ಯುದ್ಧ ಸ್ಥಳದಿಂದ 160 ಕಿ.ಮೀ.ದೂರದಲ್ಲಿದ್ದೇವೆ. 14 ವರ್ಷಗಳಿಂದ ಇಲ್ಲಿದ್ದೇನೆ. ಇಲ್ಲಿನವರಿಗೆ ಯುದ್ಧ ಹೊಸತಲ್ಲ. ಆದರೆ ಈ ಬಾರಿಯಷ್ಟು ಸಾವು-ನೋವುಗಳನ್ನು ತಾನು ಈ ತನಕ ಕಂಡಿಲ್ಲ ಎಂದು ಹೇಳಿದ್ದಾರೆ.
ಇಸ್ರೇಲ್​ನ ರೆಹೋವೊತ್ ಪ್ರದೇಶದಲ್ಲಿರುವ ಪುತ್ತೂರಿನ ಕೊೖಲದ ಪ್ರದೀಪ್, ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ. ಈ ಭಾಗದಲ್ಲಿ ದಾಳಿ ನಡೆಯುತ್ತಿಲ್ಲ. ಇನ್ನಷ್ಟು ಕನ್ನಡಿಗರು ಟೆಲ್ ಅವೀವ್ ಪ್ರದೇಶದಲ್ಲಿದ್ದು, ವಾರಾಂತ್ಯದಲ್ಲಿ ಆ ಸ್ಥಳಕ್ಕೆ ಗೆಳೆಯರ ಭೇಟಿಗಾಗಿ ಹೋಗುತ್ತಿರುತ್ತೇನೆ. ಮೊನ್ನೆ ಹೋಗಿದ್ದಾಗ ಸೈರನ್ ಹಾಗೂ ರಾಕೆಟ್ ದಾಳಿಗಳ ಸದ್ದು ಕೇಳುತ್ತಿತ್ತು. ಹೆಚ್ಚಿನ ಎಲ್ಲ ಭಾಗದಲ್ಲಿ ಸ್ಟ್ರಾಂಗ್ ರೂಮ್ಳಿವೆ, ಹಾಗಾಗಿ ಭಯವಿಲ್ಲ. ಹೆಚ್ಚು ಜನ ಸೇರುವ, ಐಟಿ ಕೇಂದ್ರಗಳು, ಮಾಲ್​ಗಳನ್ನು ದಾಳಿಗೆ ಟಾರ್ಗೆಟ್ ಮಾಡಲಾಗುತ್ತಿದೆ. ರೆಹೋವೊತ್ ಪ್ರದೇಶದಲ್ಲಿ ನಾವಿರುವ ಪ್ರದೇಶದ 6 ಕಿ.ಮೀ. ದೂರದಲ್ಲಿ ಏರ್​ಪೋರ್ಸ್ ಬೇಸ್ ಕ್ಯಾಂಪ್ ಇದ್ದು, ಸೇನಾ ವಿಮಾನಗಳು ಗಾಜಾದ ಮೇಲೆ ದಾಳಿ ಮಾಡಲು ಹಾರಾಟ ನಡೆಸುತ್ತಿರುತ್ತವೆ ಎಂದವರು ತಿಳಿಸಿದ್ದಾರೆ.
ಕಿಟಕಿಯ ಗಾಜಿಗೆ ಬಡಿದ ಬುಲೆಟ್!:ಜೆರುಸಲೆಮ್ ಹಾಗೂ ರಮತ್ ಗಾನ್ ಎಂಬಲ್ಲಿ ಪುತ್ತೂರು ಪಟ್ಟೆ ನಿವಾಸಿಗಳಾದ ಉಮೇಶ್ ಪಲ್ಲಡ್ಕ ಹಾಗೂ ದಿನೇಶ್ ಪಲ್ಲಡ್ಕ ಅವರು ಕೆಲಸ ನಿರ್ವಹಿಸುತ್ತಿದ್ದು, ಯಾವುದೇ ತೊಂದರೆ ಇಲ್ಲದೆ ಸುರಕ್ಷಿತವಾಗಿದ್ದಾರೆ. ಶನಿವಾರ ರಾತ್ರಿ ನಡೆದ ರಾಕೆಟ್ ದಾಳಿಯನ್ನು ನಿಯಂತ್ರಿಸುವ ಸಂದರ್ಭ ಅದರಿಂದ ಹಾರಿದ ತುಣುಕು ದಕ್ಷಿಣ ಕನ್ನಡ ಮೂಲದ ವ್ಯಕ್ತಿ ವಾಸವಾಗಿದ್ದ ಮನೆಯ ಕಿಟಕಿಗೆ ತಾಗಿ ತುಂಡಾಗಿದ್ದು ಬಿಟ್ಟರೆ ದಕ್ಷಿಣ ಕನ್ನಡದಿಂದ ಹೋದ ಎಲ್ಲರೂ ಸುರಕ್ಷಿತವಾಗಿದ್ದಾರೆ.
ಉಡುಪಿ ಜಿಲ್ಲೆಯ ಕನ್ನಡಿಗರು ಯುದ್ಧಪೀಡಿತ ಇಸ್ರೇಲ್​ನಲ್ಲಿರುವ ಮಾಹಿತಿ ಇಲ್ಲ. ಸರ್ಕಾರದಿಂದಲೂ ಸೂಚನೆ ಬಂದಿಲ್ಲ. ಜಿಲ್ಲೆಯವರು ಇಸ್ರೇಲ್​ನಲ್ಲಿದ್ದರೆ ಮಾಹಿತಿ ನೀಡುವಂತೆ ಪತ್ರಿಕೆಗಳ ಮೂಲಕ ಸಾರ್ವಜನಿಕ ಪ್ರಕಟಣೆ ನೀಡುತ್ತೇವೆ.
| ಡಾ. ಕೆ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ, ಉಡುಪಿ
ಯುದ್ಧ ಕೊನೆಗೊಳ್ಳುವ ತನಕ ಪೂರ್ಣವಾಗಿ ಸುರಕ್ಷಿವಾಗಿದ್ದೇವೆ ಎನ್ನುವಂತಿಲ್ಲ. ಇಸ್ರೇಲ್​ನಲ್ಲಿ ನನ್ನ ಸಂಪರ್ಕದಲ್ಲಿರುವ ಕನ್ನಡಿಗರು ಸಾಕಷ್ಟಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದಾರೆ.
| ಲೆನಾರ್ಡ್ ಫರ್ನಾಂಡಿಸ್, ಇಸ್ರೇಲ್​ನಲ್ಲಿರುವ ಮಂಗಳೂರು ನಿವಾಸಿ
ಇಸ್ರೇಲ್​ನಲ್ಲಿ 2 ಸಾವಿರ ಕನ್ನಡಿಗರು ಸಿಲುಕಿದ್ದಾರೆ ಎಂಬ ಮಾಹಿತಿ ಇದೆ. ಕೂಡಲೇ ಅವರನ್ನು ಸುರಕ್ಷಿತವಾಗಿ ತಾಯಿನಾಡಿಗೆ ಕರೆತರುವ ಕೆಲಸ ಮಾಡಬೇಕು.
| ಎಚ್.ಡಿ.ರೇವಣ್ಣ, ಮಾಜಿ ಸಚಿವ
ಮಂಗಳೂರು: ಇಸ್ರೇಲ್​ನಲ್ಲಿ ಕರಾವಳಿಗರು ಕ್ಷೇಮದಿಂದ ಇದ್ದಾರೆ. ಈ ಕುರಿತು ಜೆರುಸಲೇಂನಲ್ಲಿರುವ ಫಾದರ್ ಜತೆ ಸಂಪರ್ಕದಲ್ಲಿ ಇರುವುದಾಗಿ ಮಂಗಳೂರು ಧರ್ಮಪ್ರಾಂತ್ರ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಹೇಳಿದ್ದಾರೆ.ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಸ್ರೇಲ್​ನಲ್ಲಿ ಕರ್ನಾಟಕ ಕರಾವಳಿಯ ಅನೇಕ ಮಂದಿ ಕೆಲಸ ಮಾಡುತ್ತಿದ್ದಾರೆ. ದ್ವೇಷದಿಂದ ಶಾಂತಿ ತರಲು ಸಾಧ್ಯವಿಲ್ಲ ಇದಕ್ಕೆ ವಿಶ್ವದ ಪ್ರಮುಖರು ಸಹಕರಿಸಬೇಕು ಎಂದರು.
ಇಸ್ರೇಲ್​ನಲ್ಲಿ ಉದ್ಯೋಗದಲ್ಲಿರುವ ಕರಾವಳಿಯ ಶೇ.95 ಮಂದಿಯೂ ಹೋಂ ನರ್ಸ್ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಹಿರಿಯರು, ಅನಾರೋಗ್ಯ ಪೀಡಿತರನ್ನು ಉಪಚರಿಸುವುದು ಅವರ ಕೆಲಸ. ಜತೆಗೆ ಮನೆ ಕೆಲಸ ಮಾಡುವವರೂ ಇದ್ದಾರೆ. ತಿಂಗಳಿಗೆ ಒಂದೂವರೆ ಲಕ್ಷ ರೂ.ನಿಂದ ಮೂರು ಲಕ್ಷ ರೂ.ನಷ್ಟು ಸಂಪಾದಿಸುತ್ತಾರೆ. ಈ ವೇತನಕ್ಕಾಗಿಯೇ ಸಾಕಷ್ಟು ಮಂದಿ ಇಸ್ರೇಲ್​ಗೆ ತೆರಳಿದ್ದಾರೆ. ಕರಾವಳಿ ಭಾಗದ ಜನರಲ್ಲಿ ಶೇ.50 ಮಹಿಳೆಯರಿದ್ದಾರೆ. ಹೆಚ್ಚಿನವರು ಕ್ರಿಶ್ಚಿಯನ್ನರು. ಹಿಂದುಗಳಿದ್ದರೂ ಸಂಖ್ಯೆ ಕಡಿಮೆ. ದ.ಕ.ಜಿಲ್ಲೆಯ ಎಂಟು ಸಾವಿರಕ್ಕೂ ಅಧಿಕ ಮಂದಿ ಇರಬಹುದು ಎಂದು ಅಂದಾಜಿಸಲಾಗಿದೆ.
ಶ್ರವಣಬೆಳಗೊಳ: ಯುದ್ಧಪೀಡಿತ ಇಸ್ರೇಲ್​ನಲ್ಲಿ ಶ್ರವಣಬೆಳಗೊಳ ಹೋಬಳಿಯ ಡಿಂಕ ಗ್ರಾಮದ ಕೃಷ್ಣೇಗೌಡ ಎಂಬುವವರು ಸಿಲುಕಿಕೊಂಡಿದ್ದು, ತಾವು ಸುರಕ್ಷಿತವಾಗಿದ್ದೇವೆ ಎಂಬ ಸಂದೇಶವನ್ನು ತಮ್ಮ ಕುಟುಂಬಸ್ಥರಿಗೆ ರವಾನಿಸಿದ್ದಾರೆ. ಡಿಂಕ ಗ್ರಾಮದ ಕೃಷ್ಣೇಗೌಡ 20 ವರ್ಷಗಳಿಂದ ಇಸ್ರೇಲ್​ನಲ್ಲಿ ನೆಲೆಸಿದ್ದು, ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಇಸ್ರೇಲ್​ನಲ್ಲಿ ಹಾಸನ ಜಿಲ್ಲೆಯ 20ಕ್ಕೂ ಹೆಚ್ಚು ಜನರು ಸಿಲುಕಿದ್ದಾರೆ. ವಿದ್ಯಾಭ್ಯಾಸ ಹಾಗೂ ಉದ್ಯೋಗ ನಿಮಿತ್ತ ಅವರೆಲ್ಲ ಇಸ್ರೇಲ್​ನಲ್ಲಿ ನೆಲೆಸಿದ್ದರು.
ಇಸ್ರೇಲ್​ನಲ್ಲಿ ನರ್ಸ್ ಆಗಿರುವ ಉಡುಪಿ ಜಿಲ್ಲೆಯ ಮಣಿಪಾಲ ಮೂಲದ ಪ್ರಮೀಳಾ ಪ್ರಭು ‘ವಿಜಯವಾಣಿ’ಗೆ ತಮ್ಮ ಸ್ಥಿತಿಗತಿಯ ಮಾಹಿತಿ ನೀಡಿದ್ದಾರೆ. ಇಸ್ರೇಲ್​ನ ದಕ್ಷಿಣ ಭಾಗದಲ್ಲಿ ಮುಖಾಮುಖಿ ಯುದ್ಧ ನಡೆಯುತ್ತಿದೆ. ನಾವಿರುವುದು ಉತ್ತರ ಭಾಗದಲ್ಲಿ. ಈ ಭಾಗದಲ್ಲಿ ಇನ್ನೂ ನೇರ ಯುದ್ಧ ಆರಂಭಗೊಂಡಿಲ್ಲ. ಹೀಗಾಗಿ ಸದ್ಯ ಈ ಭಾಗದಲ್ಲಿರುವ ಎಲ್ಲರೂ ಸುರಕ್ಷಿತವಾಗಿದ್ದಾರೆ. ಆದರೆ, ರಾಕೆಟ್ ದಾಳಿ, ಬಾಂಬ್ ಸ್ಪೋಟದ ಸದ್ದುಗಳು, ಬೆಂಕಿಯ ಕೆನ್ನಾಲಿಗೆ ಎಲ್ಲವೂ ಕಾಣಿಸುತ್ತಿದೆ. ಕ್ಷಣಕ್ಷಣವೂ ನಮಗೆಲ್ಲ ಭೀತಿ ಆವರಿಸುತ್ತಲೇ ಇರುತ್ತದೆ. ಜೀವಭಯದಿಂದ ನಾವು ಇಸ್ರೇಲ್​ನಿಂದ ಹೇಡಿಗಳಂತೆ ಪಲಾಯನ ಮಾಡುವುದಿಲ್ಲ. ಈ ಹಿಂದೆ ಭಾರತಕ್ಕೆ ಇಸ್ರೇಲ್ ಸಹಾಯ ಮಾಡಿದೆ. ನಮಗೆ ಜೀವ ಕೊಟ್ಟಿದ್ದು ಭಾರತವಾದರೆ, ಜೀವನ ನೀಡಿದ್ದು ಇಸ್ರೇಲ್ ದೇಶ. ಹೀಗಾಗಿ ನಾವು ಯುದ್ಧ ಮಾಡದಿದ್ದರೂ ಈ ದೇಶಕ್ಕೆ ನೈತಿಕ ಬೆಂಬಲ ಕೊಡುತ್ತೇವೆ. ಯುದ್ಧದಲ್ಲಿ ಇಸ್ರೇಲ್ ಖಂಡಿತ ಗೆಲುವು ಸಾಧಿಸಲಿದೆ. ಆ ವಿಶ್ವಾಸ ನಮಗಿದೆ. ಮುಂದೆ ಏನು ಎಂಬುದು ಗೊತ್ತಿಲ್ಲ ಎಂದರು.
ಯುದ್ಧಪೀಡಿತ ಇಸ್ರೇಲ್​ನಲ್ಲಿ ಸಿಲುಕಿರುವ ಕನ್ನಡಿಗರಿಗಾಗಿ ಸಹಾಯವಾಣಿ ಆರಂಭಿಸಿದ ಸರ್ಕಾರ: ಇಲ್ಲಿದೆ ಮಾಹಿತಿ

‘ಇಂಡಿಯಾ’ಗೇ ಗುಡ್​​ಬೈ ಹೇಳಿ ‘ಡಿಜಿಟಲ್ ಯುದ್ಧ’ಕ್ಕಿಳಿದ ಇಸ್ರೇಲಿಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fifteen =
Remember me
