| ರವಿ ಗೋಸಾವಿ ಬೆಳಗಾವಿ
ಆಫ್ರಿಕಾದ ಸುಡಾನ್​ನಲ್ಲಿ ನಡೆಯುತ್ತಿರುವ ಸೇನಾ ಸಂಘರ್ಷದಿಂದ ಪಾರಾಗಿ ‘ಆಪರೇಷನ್ ಕಾವೇರಿ’ ಮೂಲಕ ತಾಯ್ನಾಡಿಗೆ ಬರಲು ತುದಿಗಾಲಲ್ಲಿರುವ ನೂರಾರು ಭಾರತೀಯರಿಗೆ ಫೋರ್ಟ್ ಸುಡಾನ್ ತಲುಪುವುದಕ್ಕೂ ಜೀವ ಭಯ ಕಾಡುತ್ತಿದೆ. 10 ದಿನಗಳಿಂದ ನಿರಂತರ ಗುಂಡಿನ ಮೊರೆತ ಕೇಳಿಬಂದ ಸುಡಾನ್ ರಾಜಧಾನಿ ಖಾರ್ಟೂಮ್ ಸುತ್ತಲಿನ ಪ್ರದೇಶಗಳಲ್ಲಿ ನೆಲೆಸಿರುವ ಭಾರತೀಯರು ಭಯದಲ್ಲೇ ದಿನ ದೂಡುತ್ತಿದ್ದು, 72 ಗಂಟೆಗಳ ಕದನ ವಿರಾಮದ ಅವಧಿಯಲ್ಲೂ ತಿನ್ನಲು ಆಹಾರ ಸಿಗದೇ ಗಂಜಿ-ನೀರು ಕುಡಿದು ತಾಯ್ನಾಡಿಗೆ ಕಾಲಿಡುವ ಕನಸಿನಲ್ಲಿದ್ದಾರೆ. ‘ಹೊಟ್ಟೆ ತುಂಬ ಊಟ ಮಾಡಿ ಹನ್ನೆರಡು ದಿನಗಳಾಗಿವೆ.
ಇನ್ನೆರಡು ದಿನ ಗಂಜಿಗೆ ಆಗುವಷ್ಟು ಅಕ್ಕಿ ಇದೆ. ಹೊರಗಡೆ ಏನೂ ಸಿಗುತ್ತಿಲ್ಲ. ನಮ್ಮ ಉಸಿರು ಯಾವಾಗ ನಿಲ್ಲುತ್ತೋ ಎಂಬ ಭಯ ಕಾಡುತ್ತಿದೆ, ದಯವಿಟ್ಟು ನಮ್ಮನ್ನು ತಾಯ್ನಾಡಿಗೆ ಕರೆಯಿಸಿಕೊಳ್ಳಿ’ ಎಂದು ವ್ಯಾಟ್ಸ್ಯಾಪ್ ಮೂಲಕ ತಮ್ಮ ಪರಿಚಯಸ್ಥರಿಗೆ ಅಂಗಲಾಚುತ್ತಿದ್ದಾರೆ. ಸುಡಾನ್ ಫೋರ್ಟ್ ತಲುಪಲಾಗದೇ ಕಾರ್ಟೂಮ್ಲ್ಲಿನ ಕೆನಾನ್ ಸಕ್ಕರೆ ಕಾರ್ಖಾನೆಯಲ್ಲಿ ಸದ್ಯ ಕರ್ನಾಟಕದ ಬೀದರ, ಕಲಬುರಗಿ, ಬಾಗಲಕೋಟೆ ಹಾಗೂ ಬೆಳಗಾವಿಯ 180 ಜನ ಮತ್ತು ಮಹಾರಾಷ್ಟ್ರ, ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯಗಳ ಒಟ್ಟು 450 ಜನ ಅಂಗೈಯಲ್ಲಿ ಜೀವ ಹಿಡಿದು ಅಡಗಿ ಕುಳಿತಿದ್ದಾರೆ. ‘ನಮ್ಮನ್ನು ರಕ್ಷಿಸುವಂತೆ ಭಾರತೀಯ ರಾಯಬಾರಿ ಕಚೇರಿ ಸಂರ್ಪಸಿ ಆಪರೇಷನ್ ಕಾವೇರಿಗಾಗಿ ಹೆಸರು ನೋಂದಾಯಿಸಿದ್ದೇವೆ. ಪಾಸ್​ಫೋರ್ಟ್ ಸೇರಿ ಎಲ್ಲ ಮಾಹಿತಿ ಸಮೇತ ಅರ್ಜಿ ಸಲ್ಲಿಸಿದ್ದೇವೆ. ಅಧಿಕಾರಿಗಳೂ ಫೋರ್ಟ್ ಸುಡಾನ್​ವರೆಗೂ ಬರಲು ಹೇಳುತ್ತಿದ್ದಾರೆ. ಕೆನಾನ್ ಕಂಪನಿಯಿಂದ ಅಲ್ಲಿಗೆ ತಲುಪಲು ಕಾರಿನ ಮೂಲಕ ಹೊರಟರೂ ಆರು ಗಂಟೆ ಪ್ರಯಾಣ ಮಾಡಬೇಕಿದೆ. ಕಂಪನಿಯವರು ಕಳುಹಿಸುವ ವ್ಯವಸ್ಥೆ ಮಾಡುತ್ತಿಲ್ಲ. 1.80 ಲಕ್ಷ ರೂ.ವೆಚ್ಚ ಮಾಡಬೇಕಿದೆ. ಆದರೆ, ಅಷ್ಟು ಹಣ ನಮ್ಮಲ್ಲಿಲ್ಲ. ಮನೆಯಿಂದ ಹಣ ಜಮೆ ಮಾಡಿಸಿಕೊಂಡು ಅದರಿಂದ ಸುಡಾನ್ ಪೌಂಡ್ ನಗದು ಪಡೆಯಬೇಕು ಎಂದರೆ ಯಾವುದೇ ಬ್ಯಾಂಕೂ ತೆರೆಯುತ್ತಿಲ್ಲ’ ಎಂದು ಕಣ್ಣೀರಿಡುತ್ತಿದ್ದಾರೆ. ಈ ಗುರುವಾರ ವಿಜಯವಾಣಿ ಜತೆ ಮಾತನಾಡಿದ ಬೆಳಗಾವಿಯ ಮಮದಾಪುರದ ಮಹಾಂತೇಶ ಮನ್ನಿಕೇರಿ, ‘ನನಗೆ ಮಗ ಹುಟ್ಟಿ 6 ತಿಂಗಳಾಗಿದೆ. ಮಗನ ಮುಖ ನೋಡಿ, ತಾಯ್ನಾಡಿನಲ್ಲಿಯೇ ಜೀವ ಬಿಡುತ್ತೇನೆ ದಯವಿಟ್ಟು ನಮ್ಮನ್ನು ಕರೆಯಿಸಿಕೊಳ್ಳಲು ಸಹಾಯ ಮಾಡಿ’ ಎಂದು ಗೋಗರೆದಿದ್ದಾರೆ.
ರಾಯಭಾರ ಕಚೇರಿಗೆ ಕರೆ ಮಾಡಿದರೆ ಯಾರೂ ಸ್ಪಂದಿಸುತ್ತಿಲ್ಲ. ಇನ್ನೆರಡು ದಿನದಲ್ಲಿ ಕಾರ್ಯಾಚರಣೆ ಮುಗಿಸಿ ನಾವೂ ದೇಶಕ್ಕೆ ಹೋಗುತ್ತೇವೆ. ಅಷ್ಟರೊಳಗೆ ಬನ್ನಿ ಎನ್ನುತ್ತಿದ್ದಾರೆ. ಇಲ್ಲಿಂದ ಸುಡಾನ್ ಫೋರ್ಟ್​ವರೆಗೆ ಹೋಗಲು ಕಂಪನಿಯವರೂ ವ್ಯವಸ್ಥೆ ಮಾಡುತ್ತಿಲ್ಲ.
| ಪ್ರಕಾಶ ಮಾರಿಹಾಳ, ಜಯಪಾಲ ನೇಮನ್ನವರ, ಮುನಿರ ಸುತಾರ್ ಸುಡಾನ್​ನ ಕೆನಾನ್ ಕಂಪನಿ ನೌಕರರು
ಜೆಡಿಎಸ್ ಜನತಾ ಪ್ರಣಾಳಿಕೆ ಬಿಡುಗಡೆ: ರೈತರು, ಯುವಕರು, ಮಹಿಳೆಯರಿಗೆ ಬಂಪರ್ ಘೋಷಣೆ

ಕಾಂಗ್ರೆಸ್​ನಿಂದ 5ನೇ ಗ್ಯಾರಂಟಿ ಘೋಷಣೆ: ಎಲ್ಲ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

ಏಪ್ರಿಲ್​ 30ರಂದು ಬೆಂಗಳೂರು-ಮೈಸೂರು ಹೆದ್ದಾರಿ ಬಂದ್​: ಬದಲಿ ಮಾರ್ಗ ಹೀಗಿದೆ….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 3 =
Remember me
