ಬೆಂಗಳೂರು:ಜಗತ್ತಿನಾದ್ಯಂತ ವಿಜಯ ಪತಾಕೆ ಹಾರಿಸಿದ್ದ ಕಾಂತಾರ, ಅನೇಕ ವಿಚಾರಗಳಿಗೆ ಆಗಾಗ ಸುದ್ದಿ ಆಗುತ್ತಲೇ ಇರುತ್ತದೆ. ಒಮ್ಮೆ ವರಾಹರೂಪಂ ಹಾಡಿನ ಬಗ್ಗೆ ಕಿರಿಕ್​ ಆದರೆ ಇನ್ನೊಮ್ಮೆ ಜಯಾ ಬಚ್ಚನ್​, ರಿಷಭ್​ ಶೆಟ್ರ ಪಂಚೆಯ ಬಗ್ಗೆ ಮಾತನಾಡುತ್ತಾರೆ. ಮತ್ತೊಮ್ಮೆ, ಅನುರಾಗ್​ ಕಶ್ಯಪ್​ರಂತಹ ಹೆಸರುವಾಸಿ ನಿರ್ದೇಶಕರು ಕಾಂತಾರದ ಕಾರಣ ಬಾಲಿವುಡ್​ ಸಾಯುತ್ತಿದೆ ಎನ್ನುತ್ತಾರೆ.
ಆದರೆ ಈಗ ನಡೆದಿರುವ ಸುದ್ದಿ ಬೇರೆಯದೇ ರೀತಿಯದ್ದು. ಕಾಂತಾರದಲ್ಲಿ ಮುರಳೀಧರ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಕಿಶೋರ್​ ಅವರ ಟ್ವಿಟರ್​ ಖಾತೆ ಸಸ್ಪೆಂಡ್​ ಆಗಿದೆ. ಈ ಬಗ್ಗೆ ಎಸ್​ ಶ್ಯಾಮ್​ ಪ್ರಸಾದ್​ ಎನ್ನುವವರು ಟ್ವೀಟ್​ ಮಾಡಿದ್ದಾರೆ. ಈಗ ಕೀಶೋರ್​ರ ಟ್ವಿಟರ್​ ಖಾತೆಗೆ ಹೋದರೆ, ಟ್ವಿಟರ್​ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಖಾತೆಯನ್ನು ನಿಷ್ಕ್ರಿಯ ಮಾಡಲಾಗಿದೆ ಎಂದು ಬರುತ್ತಿದೆ.
ಈ ಬಗ್ಗೆ ಎಸ್​ ಶ್ಯಾಮ್​ ಪ್ರಸಾದ್​ರ ಟ್ವೀಟ್​ಗೆ ಜನರು ತರಹೇವಾರಿಯಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಬ್ಬರು ‘ಟ್ವಿಟರ್​ಗೆ ಟೇಸ್ಟೇ ಇಲ್ಲ’ ಎಂದರೆ, ಇನ್ನೊಬ್ಬರು ‘ನಂದಿನಿ ಹಾಲಿನ ಬಗ್ಗೆ ಮಾತಾಡ್ತಾನೆ ಅಂತಲಾ’ ಎಂದು ಪ್ರಶ್ನಿಸಿದ್ದಾರೆ.
ಇನ್ನೊಬ್ಬರು ಕಿಶೋರ್​ ಖಾಸಗಿಕರಣದ ವಿರುದ್ಧ ಧ್ವನಿ ಎತ್ತುತ್ತಾರೆ ಎಂದು ಅವರ ಖಾತೆಯನ್ನು ಸಸ್ಪೆಂಡ್​ ಮಾಡಲಾಗಿದೆ ಎಂದಿದ್ದಾರೆ. ಒಟ್ಟಿನಲ್ಲಿ ಈ ಬಗ್ಗೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ ಎನ್ನಬಹುದು.
Twitter has suspended actor Kishore's account.pic.twitter.com/6H8wmhjfYN— S Shyam Prasad (@ShyamSPrasad)January 1, 2023
Twitter has suspended actor Kishore's account.pic.twitter.com/6H8wmhjfYN
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 8 =
Remember me
