ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊಟ್ಟಮೊದಲ ಬಾರಿಗೆ ನಡೆಯುತ್ತಿರುವ ಕಂಬಳ ಸ್ಪರ್ಧಗೆ ಅಭೂತಪೂರ್ವ ಬೆಂಬಲ ದೊರೆತ್ತಿದ್ದು, 200ಕ್ಕೂ ಅಧಿಕ ಕೋಣಗಳು ಈ ಉತ್ಸವದಲ್ಲಿ ಭಾಗಿಯಾಗಿರುವುದು ಕಾರ್ಯಕ್ರಮದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ಸಾರ್ವಜನಿಕರು ಕೋಣದ ಓಟ, ಕರಾವಳಿ ಶೈಲಿಯ ತಿಂಡಿ-ತಿನಿಸುಗಳನ್ನು ಸವಿದು ಸಂಭ್ರಮಿಸಿದ್ದಾರೆ.
ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸಿರುವ ಕೆಲವು ಕೋಣಗಳು ಪ್ರಶಸ್ತಿ ಗೆಲ್ಲುವ ಹಂತಕ್ಕೆ ತಲುಪಿದ್ದು, ಅದರಲ್ಲಿ ಕಾಂತಾರ ಸಿನಿಮಾದಲ್ಲಿ ನಟ ರಿಷಭ್ ಶೆಟ್ಟಿ ಓಡಿಸಿದ್ದ ಅಪ್ಪು-ಕಿಟ್ಟು ಎಂಬ ಕೋಣಗಳು ಕನೆಹಲಗೆ ವಿಭಾಗದಲ್ಲಿ ಪದಕ ಗೆದ್ದುಕೊಂಡಿರುವುದು ಮತ್ತಷ್ಟು ವಿಶೇಷವೆನ್ನಿಸಿದೆ.
ಉಡುಪಿ ಜಿಲ್ಲೆಯ ಬೈಂದೂರು ನಿವಾಸಿಯಾದ ಪರಮೇಶ್ವರ್​ ಭಟ್ ಅವರು ಅಪ್ಪು-ಕಿಟ್ಟು ಕೋಣಗಳ ಮಾಲೀಕರಾಗಿದ್ದು, ಕಾಂತಾರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಈ ಕೋಣಗಳನ್ನು ನೋಡಿ ನಗರವಾಸಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ:ಪಾರ್ಲಿಮೆಂಟ್ ಚುನಾವಣೆಗೂ ಮುನ್ನವೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತೆ: ಮುರುಗೇಶ್ ನಿರಾಣಿ
ಈ ಕುರಿತು ಮಾತನಾಡಿರುವ ಕೋಣಗಳ ಮಾಲೀಕ ಪರಮೇಶ್ವರ್ ಭಟ್​, ಅಪ್ಪು-ಕಿಟ್ಟು ಕೋಣಗಳಿಂದ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ನಾವು ಪದಕ ಗೆದ್ದಿರುವ ಬಗ್ಗೆ ಖುಷಿ ಇದೆ. ಆರೂವರೆ ಅಡಿ ನೀರು ಚಿಮ್ಮಿಸಿದೆ. ಈ ಕಾರಣಕ್ಕೆ ನಮ್ಮ ಕೋಣಗಳು ಪದಕ ಗೆದ್ದಿದ್ದೇವೆ. ಮತ್ತೊಮ್ಮೆ ಸಂಪ್ರಾದಾಯಕವಾಗಿ ಓಡಿಸಲಿದ್ದಾರೆ ಎಂದು ಹೇಳಿದ್ದಾರೆ.
ಕ್ರೀಡಾಪಟು ರಾಘವೇಂದ್ರ ಪೂಜಾರಿ ಮಾತನಾಡಿ, ನಮ್ಮ ಕಿಟ್ಟು – ಅಪ್ಪು ಎದುರಾಳಿ ಕೋಣಗಳಿಗೆ ಓಡುವುದರಲ್ಲಿ ಫೈಟ್ ಕೊಡುತ್ತವೆ. ಇದರಿಂದಲೇ ನಾವು ಗೆದ್ದಿದ್ದೇವೆ. ಇಷ್ಟು ದೊಡ್ಡ ಕಂಬಳದಲ್ಲಿ ಭಾಗವಹಿಸಿ ಪದಕ ಗೆದ್ದಿರುವುದು ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕಂಬಲ ಸ್ಪರ್ಧೆಯಲ್ಲಿ ಅಪ್ಪು ಮತ್ತು ಕಿಟ್ಟು ಪದಕಗಳನ್ನು ಗೆಲ್ಲುತ್ತಿದ್ದಂತೆ ಡಿಮ್ಯಾಂಡ್​ ಹೆಚ್ಚಾಗ ತೊಡಗಿದೆ. ಕಾಂತಾರ ಸಿನಿಮಾ ಕೋಣಗಳ‌ ಜೊತೆ ಫೋಟೋ ತೆಗೆದುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಮಂಗಳೂರು ಸೇರಿದಂತೆ ಬೆಂಗಳೂರಿಗರು ಬಂದು ಪೋಟೋ ತೆಗೆಸಿಕೊಳ್ಳುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 13 =
Remember me
