ತುಮಕೂರು:ಇತ್ತೀಚೆಗೆ ತೆರೆ ಕಂಡ ಕಾಂತಾರ ಸಿನಿಮಾ ರಾಜ್ಯ ಸೇರಿದಂತೆ ದೇಶದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಎಲ್ಲೆಲ್ಲೂ ಚಿತ್ರದ 20 ನಿಮಿಷದ ಕ್ಲೈಮ್ಯಾಕ್ಸ್​​ ಬಗ್ಗೆ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಆದರೆ ತುಮಕೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ಈ ಸಿನಿಮಾ ತಾಂತ್ರಿಕ ದೋಷದಿಂದ ಅರ್ಧಕ್ಕೆ ಬಂದ್​ ಆಗಿದ್ದು, ಟಿಕೆಟ್ ಹಣ ವಾಪಸ್ ನೀಡುವಂತೆ ಪ್ರೇಕ್ಷಕರು ಗಲಾಟೆ ಮಾಡಿದ ಘಟನೆ ನಡೆದಿದೆ.
ಚಿತ್ರಮಂದಿರದಲ್ಲಿ ಕಾಂತಾರ ಮ್ಯಾಟಿನಿ ಶೋ ವೇಳೆ ಒಟ್ಟು 650 ಸೀಟುಗಳು ಹೌಸ್ ಪುಲ್ ಆಗಿತ್ತು. ಇನ್ನೇನೂ ಕೊನೆಯ 20 ನಿಮಿಷ ಬಾಕಿ ಇರುವಾಗ ಸೌಂಡ್ ಪ್ರೊಸೆಸರ್ ಹಾಳಾಗಿ ಪ್ರದರ್ಶನ ನಿಂತಿದೆ. ಹಾಗಾಗಿ ಕ್ಲೈಮ್ಯಾಕ್ಸ್​​ನ ರೋಚಕ ದೃಶ್ಯವನ್ನು ಕಣ್ತುಂಬಿಕೊಳ್ಳಬೇಕೆಂದಿದ್ದ ಪ್ರೇಕ್ಷಕರ ಆಸೆಗೆ ಭಾರೀ ನಿರಾಸೆಯಾಗಿದೆ.
ಇದರಿಂದ ಸಂಜೆ 5 ಗಂಟೆಯ ಶೋಗೆ ಟಿಕೆಟ್ ಪಡೆದಿದ್ದವರಿಗೂ ಸಮಸ್ಯೆಯಾಗಿದೆ. ಹಾಗಾಗಿ ಸಂಜೆಯ ಶೋ ರದ್ದು ಮಾಡಲಾಗಿದೆ. ಈ ವೇಳೆ ತಮ್ಮ ಹಣ ವಾಪಸ್​​ ನೀಡುವಂತೆ ಪ್ರೇಕ್ಷಕರು ಚಿತ್ರಮಂದಿರದ ಎದುರು ಗಲಾಟೆ ಮಾಡಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಸಿದರು. ಕೂಡಲೇ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕೊನೆಗೆ ಚಿತ್ರಮಂದಿರದ ಸಿಬ್ಬಂದಿ ಎಲ್ಲಾ ಪ್ರೇಕ್ಷಕರಿಗೂ ಹಣ ಹಿಂದಿರುಗಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − seven =
Remember me
