ಬೆಂಗಳೂರು:ಕಾಂತಾರ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದ್ದಂತೆ, ಇದೀಗ ತುಳು ಅವತರಣಿಕೆಯ ಟ್ರೈಲರ್ ಬಿಡುಗಡೆಯಾಗಿದೆ. ಇದೀಗ ತುಳು ಭಾಷೆಯಲ್ಲಿ ಟ್ರೈಲರ್ ನೋಡಿದ ಮಂದಿ, ಸಂಪೂರ್ಣ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಕಾಂತಾರ ಸಿನಿಮಾ ದೈವಗಳ ಕಥೆ ಹೊಂದಿತ್ತು. ಕರಾವಳಿ ಭಾಗದ ಹಿನ್ನೆಲೆಯಿಂದ ರೂಪುಗೊಂಡ ಈ ಸಿನಿಮಾ, ಬಿಡುಗಡೆಯಾದ ಆರಂಭದಿಂದಲೂ ತುಳು ಭಾಷೆಗೆ ಡಬ್​ ಆಗಬೇಕು ಎಂಬ ಆಗ್ರಹ ಆರಂಭವಾಗಿತ್ತು. ಅಂತೆಯೇ ಸಿನಿಮಾ ತಂಡ ಕೂಡ ತುಳು ಭಾಷೆಗೆ ಡಬ್ಬಿಂಗ್ ಆಗುತ್ತಿರುವ ಮಾಹಿತಿ ಹಂಚಿಕೊಂಡಿತ್ತು.
ಕನ್ನಡ ಭಾಷೆಯಲ್ಲಿ ಮಾತ್ರ ನಿರ್ಮಾಣವಾಗಿದ್ದ ಕಾಂತಾರ ಸಿನಿಮಾ, ನೋಡ ನೋಡುತ್ತಿದ್ದಂತೆಯೇ ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗೆ ಡಬ್​ ಆಗಿ, ಪ್ಯಾನ್ ಇಂಡಿಯಾ ಸಿನಿಮಾವಾಗಿ ದೊಡ್ಡ ಮಟ್ಟದ ಯಶಸ್ಸು ಸಂಪಾದಿಸಿತ್ತು. ಆದರೆ ತುಳು ಭಾಷೆಯಲ್ಲಿ ಮಾತ್ರ ತೆರೆ ಕಂಡಿರಲಿಲ್ಲ. ಇದೀಗ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದ್ದಂತೆ, ತುಳು ಭಾಷೆಯಲ್ಲೂ ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದೆ.
ಡಿಸೆಂಬರ್ 2 ರಂದು ದೇಶದಾದ್ಯಂತ ಕಾಂತಾರ ಸಿನಿಮಾ ತುಳು ಭಾಷೆಯಲ್ಲಿ ಬಿಡುಗಡೆಯಾಗುವುದಾಗಿ ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿದೆ. ಅಂತೆಯೇ ನವೆಂಬರ್ 25 ರಿಂದ ಹೊರದೇಶಗಳಲ್ಲಿ ಕಾಂತಾರ ತುಳು ಅವತರಣಿಕೆ ಬಿಡುಗಡೆಯಾಗುತ್ತಿದೆ.
ತುಳು ರಂಗಭೂಮಿಯ ಹಿರಿಯ, ಜನಪ್ರಿಯ ಕಲಾವಿದ ಡಾ.ದೇವದಾಸ್ ಕಾಪಿಕಾಡ್, ಅಚ್ಯುತ್ ಕುಮಾರ್ ಅವರ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ತುಳು ಸಿನಿಮಾ ನಟ ಅರ್ಜುನ್ ಕಾಪಿಕಾಡ್ ರಿಷಬ್ ಶೆಟ್ಟಿ ಪಾತ್ರಕ್ಕೆ ಧ್ವನಿಯಾಗಿದ್ದಾರೆ.
ತುಳುವನಾಡ ದಂತಕಥೆನ್ ನಮ್ಮ ತುಳು ಭಾಷೆಡೇ ತೂಪುನ ಪೊರ್ತು ಬೈದ್ಂಡ್. ಲೋಕೊರ್ಮೆ ಜನಕುಲೆನ ಉಡಲ್ ಗೆಂದಿನ "ಕಾಂತಾರ" ದ ತುಳು ಅವತರಣಿಕೆ ನಮ್ಮ ದೇಶೊಡು ಉಂದುವೇ ಬರ್ಪಿನ ಡಿಸೆಂಬರ್ 2, 2022 ದಾನಿ ನಿಕ್ಲೆನ ಮುಟ್ಟದ ಚಿತ್ರಮಂದಿರಲೆಡ್ ಬುಡುಗಡೆ ಆವೆರೆ ಉಂಡು. ಪಿದಯಿ ದೇಶೊಡು ನವೆಂಬರ್ 25 ತಾರೀಖ್ ದಾನಿ ಬುಡುಗಡೆ ಆವೆರೆ ಉಂಡು#KantaraInTulupic.twitter.com/3ehfJMEq1n
— Hombale Films (@hombalefilms)November 24, 2022

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 13 =
Remember me
