ಮಂಗಳೂರು:ಕಾಂತಾರ ಸಿನಿಮಾ ಬಿಡುಗಡೆಯಾಗಿ ತಿಂಗಳುಗಳೇ ಕಳೆದರೂ, ಭರ್ಜರಿ ಪ್ರದರ್ಶನದ ಕಾವು ಮಾತ್ರ ಇನ್ನೂ ಕಮ್ಮಿಯಾಗಿಲ್ಲ. ಈ ನಡುವೆ ನಿಧಾನವಾಗಿ ಕಾಂತಾರ ಸಿನಿಮಾಗೆ ವಿವಾದ ಗಾಳಿ ಬೀಸುತ್ತಿದೆ. ವರಾಹರೂಪಂ ಹಾಡಿಗೆ ಇತ್ತೀಚೆಗೆ ಕೋರ್ಟ್​ ತಡೆ ಒಡ್ಡಿತ್ತು. ಇದರ ಬೆನ್ನಲ್ಲೇ ಕಾಂತಾರ ಸಿನಿಮಾದ ಪ್ರದರ್ಶನವನ್ನು ಸ್ಥಗಿತಗೊಳಿಸಬೇಕೆಂದು ದಲಿತ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.
ಕಾಂತಾರ ಸಿನಿಮಾದಲ್ಲಿ ದಲಿತ ಸಮುದಾಯಕ್ಕೆ ಅವಹೇಳನ ಮಾಡಲಾಗಿದೆ. ಇದರಿಂದ ಸಮುದಾಯಕ್ಕೆ ಅಪಮಾನವಾದಂತಾಗಿದೆ. ಸಿನಿಮಾದಲ್ಲಿ ದಲಿತ ಸಮುದಾಯದ ಯುವಕರನ್ನು ಪೋಲಿ ಹುಡಗರ ರೀತಿಯಲ್ಲಿ ಚಿತ್ರಿಸಲಾಗಿದೆ. ಹೀಗಾಗಿ ಸಿನಿಮಾ ಪ್ರದರ್ಶನವನ್ನು ನಿಲ್ಲಿಸಬೇಕೆಂದು ಸಮತಾ ಸೈನಿಕದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಲ್ಲಿ ಆಗ್ರಹಿಸಿದ್ದಾರೆ.
ಕಾಂತಾರ ಸಿನಿಮಾದಲ್ಲಿ ಮಹಿಳೆಯರನ್ನು ತುಂಬಾ ಕೀಳಾಗಿ ತೋರಿಸಿದ್ದಾರೆ. ದೈವನರ್ತಕನ ತಾಯಿಯ ಬಾಯಲ್ಲಿ ಅತಿಯಾಗಿ ಕೆಟ್ಟ ಪದಗಳನ್ನು ಹೇಳಿಸಿದ್ದಾರೆ. ಮಹಿಳೆಯರನ್ನು ಹಾಗೂ ಯುವಕರನ್ನು ಅಪಮಾನ ಮಾಡುವಂತಹ ಸನ್ನಿವೇಷಗಳು ಈ ಚಿತ್ರದಲ್ಲಿವೆ. ದೈವಾರಾಧನೆಯಲ್ಲಿ ಮಾನವ ವಿರೋಧಿ ಹಿಂಸೆಗೆ ಅವಕಾಶವಿಲ್ಲ. ಅಂತೆಯೇ ಕೆಲವೊಂದು ದೃಶ್ಯಗಳ ಮೂಲಕ ದೈವನಿಂದನೆ ಆಗಿದೆ. ಹೀಗಿದ್ದರೂ ಸೆನ್ಸಾರ್ ಮಂಡಳಿ ಯು/ಡ ಪ್ರಮಾಣಪತ್ರ ನೀಡಿದ ಕ್ರಮ ಸರಿಯಲ್ಲ ಎಂದು ಆರೋಪಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 7 =
Remember me
