ಮಂಗಳೂರು:ವಿಶ್ವಾದ್ಯಂತ ಭಾರಿ ಸದ್ದು ಮಾಡಿದ್ದ ಕಾಂತಾರ ಸಿನಿಮಾದ ಎರಡನೇ ಭಾಗ ತೆರೆ ಕಾಣಲಿದೆಯಾ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದೀಗ ಚಿತ್ರತಂಡ ದೈವದ ಅನುಮತಿ ಕೋರಿದ್ದು, ಒಪ್ಪಿಗೆ ಸಿಕ್ಕಿದೆ. ಹೀಗಾಗಿ ಕಾಂತಾರ-2 ಜನರ ಮುಂದೆ ಬರುವುದು ಪಕ್ಕಾ ಆಗಿದೆ.
ಕಾಂತಾರ ಭಾಗ-2 ಚಿತ್ರಕ್ಕೆ ಅಣ್ಣಪ್ಪ ಪಂಜುರ್ಲಿ ಬಳಿ ಕಾಂತಾರ ಚಿತ್ರ ತಂಡ ಅನುಮತಿ ಕೇಳಿದೆ. ಮಂಗಳೂರಿನ ಬಂದಲೆಯಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ರಿಷಭ್​ ಶೆಟ್ಟಿ ಸೇರಿ ಇಡೀ ಚಿತ್ರ ತಂಡ ಅನುಮತಿ ಕೇಳಿದ್ದಾರೆ.ಈ ಸಂದರ್ಭ ಅಣ್ಣಪ್ಪ ಪಂಜುರ್ಲಿ ದೈವ ಕಾಂತಾರ ಚಿತ್ರಕ್ಕೆ ಅನುಮತಿಯನ್ನೂ ನೀಡಿದೆ. ಆದರೆ ಚಿತ್ರ ಮಾಡಲು ಶರತ್ತು ಒಂದನ್ನು ಹಾಕಲಾಗಿದೆ!
ಮಂಗಳೂರಿನ ಬಂದಲೆಯಲ್ಲಿ ಅಣ್ಣಪ್ಪ ಪಂಜುರ್ಲಿ ದೈವಕ್ಕೆ ಕಾಂತಾರ ಚಿತ್ರ ತಂಡ ಹರಕೆ ಕೋಲ ನೀಡಿದೆ. ಈ ಸಂದರ್ಭ ಕಾಂತಾರ-2 ಚಿತ್ರಕ್ಕೆ ಅನುಮತಿ ಚಿತ್ರತಂಡ ಅನುಮತಿಯನ್ನೂ ಕೇಳಿದೆ. ಈ ವೇಳೆ ಅಣ್ಣಪ್ಪ ಪಂಜುರ್ಲಿ ದೈವ ಚಿತ್ರತಂಡಕ್ಕೆ ಹಲವು ನಿಯಮಗಳನ್ನು ಹೇಳಿದೆ.
‘ಮೊದಲು ಚಿತ್ರಮಾಡುವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ. ಈ ಬಾರಿ ನೂರು ಬಾರಿ ಯೋಚನೆ ಮಾಡಿ ಚಿತ್ರ ಮಾಡಬೇಕು. ಹಳೆಯ ತಂಡವನ್ನೇ ಉಪಯೋಗಿಸಿ ಮುಂದುವರಿಯಿರಿ. ಶುದ್ಧಾಚಾರದೊಂದಿಗೆ ಚಿತ್ರವನ್ನು ಮುಂದುವರಿಸಿರಿ. ಮಾಡಿದ ಪ್ರಯತ್ನಕ್ಕೆ ಜಯ ಸಿಗುವಂತೆ ಮಾಡುತ್ತೇನೆ’ ಎಂದು ಕಾಂತಾರ ಚಿತ್ರತಂಡಕ್ಕೆ ಅಣ್ಣಪ್ಪ ಪಂಜುರ್ಲಿ ದೈವ ಅಭಯ ನೀಡಿದೆ.
ಅಣ್ಣಪ್ಪ ಪಂಜುರ್ಲಿ ಕೋಲದ ಸಂಧರ್ಭದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು, ನಟ ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ, ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಸೇರಿದಂತೆ ಕಾಂತಾರಾ ಕಲಾವಿದರು,ರಿಷಬ್ ಕುಟುಂಬಸ್ಥರು ಭಾಗಿ ಆಗಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × 5 =
Remember me
