
ಬೆಂಗಳೂರು:ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಕಬ್ಬಿಣ ಅಂಶವಿರುವ ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿಯ ಎಸ್.ವಿ.ಸಂಕನೂರು ಮೇಲ್ಮನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.ಕಪ್ಪತಗುಡ್ಡದಲ್ಲಿನ ಮಹತ್ವತೆ ಬಗ್ಗೆ ವಿಜಯವಾಣಿ ಸರಣಿ ವರದಿ ಪ್ರಕಟಿಸಿದೆ. ಆದರೂ ಈ ಬಗ್ಗೆ ಕ್ರಮ ಆಗಿಲ್ಲ. ಕಪ್ಪತಗುಡ್ಡದಲ್ಲಿ ಮಣ್ಣನ್ನು ರಾತ್ರಿ ದರೋಡೆ ಮಾಡಲಾಗುತ್ತಿದೆ ಎಂದರು.ನಾನು ಸಹ ಅಲ್ಲಿಗೆ ಎರಡು ಬಾರಿ ಹೋಗಿದ್ದೇನೆ. ಆದರೆ, ಪ್ರಯೋಜನವಾಗಿಲ್ಲ. ಕಪ್ಪತಗುಡ್ಡದಲ್ಲಿ ಕಾಯುವವರು ಯಾರು? ಎಂದು ಪ್ರಶ್ನಿಸಿದರು.ಉತ್ತರ ನೀಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಈ ಬಗ್ಗೆ ಈಗಾಗಲೇ ಅರಣ್ಯ ಇಲಾಖೆಯಿಂದ ದೂರು ದಾಖಲು ಆಗಿದೆ. ನಮ್ಮ ಇಲಾಖೆಯಲ್ಲಿ ದೂರು ದಾಖಲಾಗಿಲ್ಲ. ಅರಣ್ಯ ಇಲಾಖೆಯವರು ಸೀಜ್ ಮಾಡಿರುವ ಮಣ್ಣನ್ನು ಪಾಪನಾಶಿ ಗ್ರಾಮದ ಬಳಿ ದಾಸ್ತಾನು ಮಾಡಲಾಗಿದೆ ಎಂದರು.ಅಲ್ಲಿ ಕಬ್ಬಿಣ ಅಂಶವಿರುವ ಮಣ್ಣು ಲೂಟಿ ಆಗದಂತೆ ಬಂದೋ ಬಸ್ತ್ ಮಾಡಲಾಗುವುದು. ಈ ಬಗ್ಗೆ ಅರಣ್ಯ ಇಲಾಖೆ ಜೊತೆಗೆ ಸಭೆ ನಡೆಸುತ್ತೇವೆ ಎಂದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × 4 =
Remember me
