ವಿಜಯಪುರ: ಮುಗ್ಧ ಮಕ್ಕಳ ಕೋಗಿಲೆ ಕಂಠ.. ಮನ ತುಂಬಿದ ಮಹಿಳೆಯರ ಚಿತ್ರ ಗಾಯನ, ಜತೆಗೂಡಿದ ಹಿರಿಯರ ಭಾವಯಾನಕ್ಕೆ ವಿಜಯವಾಣಿ ಎಕ್ಸಪೋ ಕರೆ ನೀಡಿದ್ದ ಕರೋಕೆ ಚಲನಚಿತ್ರಗೀತೆಗಳ ಸ್ಪರ್ಧೆ ಉತ್ತಮ ಧ್ವನಿಯಾಗಿ ಮಾರ್ಧನಿಸಿತು.
ಮಂಗಳವಾರ ನಗರದ ಸಂಗನಬಸವ ಸಮುದಾಯ ಭವನದಲ್ಲಿ ಮಧ್ಯಾಹ್ನ ನಡೆದ ಚಿತ್ರಗೀತೆಗಳ ಕರೋಕೆ ಸ್ಪರ್ಧೆಯಲ್ಲಿ ಹಿರಿಯರು, ಮಹಿಳೆಯರು, ಯುವತಿಯರು ಹಾಗೂ ಮಕ್ಕಳ ಪಾಲ್ಗೊಂಡು ತಮ್ಮ ಧ್ವನಿಗೆ ಚಿತ್ರಗೀತೆಗಳ ಭಾವತುಂಬಿದರು.
ಯುವತಿ ಪ್ರೀತಿ ಹೊಸಮನಿ ಅವರ (ಅರಳುವ ಹೂವುಗಳೇ), ರಾಜಶೇಖರ ಹಿರೇಮಠ (ನಿನ್ನ ಕಂಗಳ ಬಿಸಿಯ ಹನಿಗಳು), ವಿಶ್ರಾಂತ ಪೊಲೀಸ ಅಧಿಕಾರಿ ಬಸವರಾಜ ಕೋಟೆಣ್ಣವರ(ಕೇಳಿ ಎಲ್ಲ ಕೇಳಿ ಶಿವನೆಂದು ಹಾಡಿದರೆ ಸಂತೋಷ), ಗೃಹಿಣಿ ನೇಹಾ ಕಮತಗಿ(ಕಂಬದ ಮ್ಯಾಲಿನ ಗೊಂಬೆಯೇ), ಗಂಗಾಧರ ಕುರ್ಲೆ(ನಲಿವಾ ಗುಲಾಬಿ ಹೂವೆ), ಶ್ರೀಧರ ಗುಡೂರ ಅವರು ಹಾಡಿದ ಮುದ್ದಿನ ಹುಡುಗಿ ಚೆಂದ ಚಿತ್ರಗೀತೆಗಳು ನೆರೆದವರ ಮನ ಮುದಗೊಳಿಸಿ, ತಲೆದೂಗಿ, ಭಾವದ ಗುಂಗಿನಲ್ಲಿ ತೇಲುವಂತೆ ಮಾಡಿ, ಸಿಳ್ಳೆ, ಚಪ್ಪಾಳೆಗಳ ಕರತಾಡನಕ್ಕೆ ಸಾಕ್ಷಿಯಾದವು.
ವಿಜಯವಾಣಿ ಕರೆಗೆ ಓಗೊಟ್ಟು, ಸ್ಥಳದಲ್ಲಿಯೇ ಕೆಲವರು ತಮ್ಮ ಹೆಸರನ್ನು ನೊಂದಾಯಿಸಿ, ಸ್ಪರ್ಧೆಯಲ್ಲಿ 40ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕುಮಾರಿ ಆರಾಧ್ಯ, ತನುಶ್ರೀ ಕಮತಗಿ, ಸ್ಪಂದನಾ ಬರಗಲ್ಲ ಅವರು ಹಠ ಹಿಡಿದು, ಹಾಡಿ ನಲಿದರು. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತಿಯ ಸ್ಥಾನ ಪಡೆದು ನೆರೆದಿದ್ದವರ ಚಿತ್ತಕ್ಕೆ ಭಾವತುಂಬಿ ನಲಿಯುವಂತೆ ಮಾಡಿದರು. ಚಂದ್ರಶೇಖರ ಜಾಧವ ಹಾಗೂ ವೀರೇಶ ತೇಲಿ ಅವರು ಸ್ಪರ್ಧೆಯ ನಿರ್ಣಾಯಕರಾಗಿ ಪಾಲ್ಗೊಂಡು, ಸ್ಪರ್ಧಾಳುಗಳ ಧ್ವನಿ, ಭಾವ ಹಾಗೂ ಸ್ವರಗಳ ಆಲಾಪಗಳಿಗೆ ಆಧ್ಯತೆ ನೀಡಿ, ಉತ್ತಮ ಗಾಯಕರನ್ನು ಆಯ್ಕೆ ಮಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + three =
Remember me
