ಬೆಂಗಳೂರು:ಪ್ರತಿ ವರ್ಷವೂ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಸಮವಸ್ತ್ರ ನೀಡಲಾಗುತ್ತದೆ. ಇದರ ಜವಾಬ್ದಾರಿಯನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ವಹಿಸಲಾಗುತ್ತಿತ್ತು. ಆದರೆ ಈ ಬಾರಿ ಮಾತ್ರ ಮಹಾರಾಷ್ಟ್ರದ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್​ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ವಿಡಿಯೋ ಮಾಡಿ ಮಾತನಾಡಿರುವ ಕ.ರ.ವೇ. ಪ್ರವೀಣ್ ಶೆಟ್ಟಿ, “ಕರ್ನಾಟಕದ ಮೇಲೆ ಕಾಲು ಕೆರೆದು ಜಗಳ ಮಾಡುವ ಮಹಾರಾಷ್ಟ್ರದವರಿಗೆ ಗುತ್ತಿಗೆ ಯಾಕೆ ? ಸರ್ಕಾರಿ ಶಾಲೆಯ ಮಕ್ಕಳಿಗೆ ಶಿಕ್ಷಣ ಇಲಾಖೆ ಪ್ರತಿವರ್ಷ ಸಮವಸ್ತ್ರ ನೀಡುತ್ತಿತ್ತು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಇದನ್ನ ವಹಿಸುತ್ತಿತ್ತು.
ಆದರೆ ಈ ಬಾರೀ ನಮ್ಮ‌ ನೇಕಾರರಿಗೆ ಅನ್ಯಾಯ ಮಾಡಿದೆ. ಯಾರನ್ನ ಓಲೈಸಲು ಈ ರೀತಿ ಮಹಾರಾಷ್ಟ್ರದವರಿಗೆ ಗುತ್ತಿಗೆ ನೀಡಿದೆ? ಕೂಡಲೇ ಟೆಂಡರ್ ವಾಪಸ್ ಪಡೆಯದೇ ಇದ್ರೇ ಉಗ್ರ ಹೋರಾಟ ಮಾಡುತ್ತೇವೆ. ಯಾವ ಯಾವ ಅಧಿಕಾರಿಗಳು ಹಣ ತಿಂದು ಈ ರೀತಿ ಗುತ್ತಿಗೆ ನೀಡಿದ್ದಾರೆ.? ಬಟ್ಟೆ ತಯಾರಿಸುವ ಕನ್ನಡಿಗರು ಯಾರೂ ಇಲ್ವಾ? ಶಿಕ್ಷಣ ಇಲಾಖೆ ಕನ್ನಡಿಗ ನೇಕಾರರಿಗೆ ಅನ್ಯಾಯ ಮಾಡಿದೆ. ಕೂಡಲೇ ಈ ಬಗ್ಗೆ ಕ್ರಮ ಆಗಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮವಸ್ತ್ರಕ್ಕೆ ಮಹಾರಾಷ್ಟ್ರದ ಸಂಸ್ಥೆಗೆ ಗುತ್ತಿಗೆ ಕೊಟ್ಟಿತೆ ಶಿಕ್ಷಣ ಇಲಾಖೆ? ಕ.ರ.ವೇ. ಪ್ರವೀಣ್ ಶೆಟ್ಟಿ ಆಕ್ರೋಶ…#Uniform#Karnataka#KarnatakaRakshanaVedike#Karnataka#EducationMinistry#SocialMedia#Bangalore#maharashtra#vijayavanihttps://t.co/Sm7i9jJzm9pic.twitter.com/ln6AISWIUv
— Vijayavani Digital (@Vijayavani_Digi)July 6, 2023

ಟ್ವಿಟರ್​ಗೆ ಟಕ್ಕರ್​ ಕೊಡಲು ‘ಥ್ರೆಡ್ಸ್​’ ಬಿಡುಗಡೆ ಮಾಡಿದ ಫೇಸ್​ಬುಕ್ ಸಂಸ್ಥಾಪಕ!

ಒಂದು ಕೋಟಿ ಗ್ರಾಹಕರಿಂದ ಗೃಹಜ್ಯೋತಿ ನೋಂದಣಿ! ಬೆಸ್ಕಾಂ ವಿಭಾಗವೇ ಮುಂದು…

ನೀವು ಈ ನಿರ್ಣಯ ಮಾಡಿಲ್ಲ ಅಂದ್ರೆ ಇಲ್ಲೇ ಪಂಚೆ ಹಾಸಿ ಮಲಗುತ್ತೇವೆ: ರೇವಣ್ಣ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three − one =
Remember me
