ಕೋಲಾರ:ಕಾರ್ಗಿಲ್​ ಅಂದಾಕ್ಷಣ ನಮ್ಮ ದೇಶದ ವೀರ ಯೋಧರು ಕಣ್ಮುಂದೆ ಬರ್ತಾರೆ. ಮೈ-ಮನಕ್ಕೆ ರಾಷ್ಟ್ರಪ್ರೇಮದ ಸಿಂಚನ ಬಡಿದೆಬ್ಬಿಸುತ್ತೆ, ಮನದಲ್ಲೇ ಒಮ್ಮೆ ಜೈಹಿಂದ್ ಅಂದುಬಿಡ್ತೀವಿ… ಅಷ್ಟರಮಟ್ಟಿಗೆ ಅಚ್ಚೊತ್ತಿದೆ ಕಾರ್ಗಿಲ್​ ಹೆಸರು.
ಹೌದು, 21 ವರ್ಷದ ಹಿಂದೆ ಅಂದರೆ 1999ರ ಜುಲೈ 26ರಂದು ಭಾರತೀಯರು ಕಾರ್ಗಿಲ್​ ಯುದ್ಧವನ್ನು ಗೆದ್ದು ಬೀಗಿದ ದಿನ. ಕಾರ್ಗಿಲ್​ ಜಿಲ್ಲೆಯಲ್ಲಿ ಎಲ್​ಒಸಿ(ಲೈನ್​ ಆಫ್​ ಕಂಟ್ರೋಲ್​) ಮೂಲಕ ಒಳ ನುಸುಳಿದ್ದ ಪಾಕಿಸ್ತಾನದ ಸೈನಿಕರು ಮತ್ತು ಉಗ್ರರನ್ನು ಸದೆಬಡಿದ ಭಾರತೀಯ ಸೈನ್ಯ ವಿಜಯದ ಪತಾಕೆ ಹಾರಿಸಿತ್ತು. ಈ ಹೋರಾಟದಲ್ಲಿ ಹುತಾತ್ಮರಾದ ಭಾರತೀಯ ವೀರಯೋಧರ ಸ್ಮಾರಕವೂ ಕಾರ್ಗಿಲ್​ನಲ್ಲಿಯೇ ಇದೆ. ಇಂತಹ ಭೂಮಿಯ ಮಣ್ಣನ್ನು ಲೆಫ್ಟಿನೆಂಟ್ ಕರ್ನಲ್ ಅಮರನಾಥ್ ಅವರು ಕರ್ನಾಟಕಕ್ಕೆ ತರುತ್ತಿದ್ದಾರೆ. ಯಾಕೆ ಗೊತ್ತಾ?
ಕೋಲಾರದಲ್ಲಿ ಯೋಧರ ಸ್ಮಾರಕ ನಿರ್ಮಾಣ ಆಗುತ್ತಿದೆ. ಈ ಜಿಲ್ಲೆಯ ಮಾಜಿ ಯೋಧರ ಬಹುದಿನಗಳ‌‌ ಕನಸು ಇಲ್ಲೊಂದು ಯೋಧರ ಸ್ಮಾರಕ‌ ಕಟ್ಟಬೇಕು. ಈ ಕಾರ್ಯಕ್ಕೆ ಕಾರ್ಗಿಲ್​ ಯುದ್ಧಭೂಮಿಯ ಮಣ್ಣು ಬೇಕು ಎಂಬುದು. ಅದರಂತೆ ನಗರದ ಪಿ.ಸಿ. ಬಡಾವಣೆಯ ಮಕ್ಕಳ ಉದ್ಯಾನವನದ ಬಳಿ ಸ್ಮಾರಕ ನಿರ್ಮಾಣವಾಗುತ್ತಿದೆ. ಈ ಕಾರ್ಯಕ್ಕೆ ಆ.15ರಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ಚಾಲನೆ ನೀಡಿದ್ದರು.
ಇನ್ನು ಕೋಲಾರದ ಮಾಜಿ ಸೈನಿಕರ ಆಸೆಯಂತೆ ಕಾರ್ಗಿಲ್ ಯುದ್ಧ ಭೂಮಿಯ ಮಣ್ಣನ್ನು ಲೆಫ್ಟಿನೆಂಟ್ ಕರ್ನಲ್ ಅಮರನಾಥ್ ತರುತ್ತಿದ್ದಾರೆ. ಅಲ್ಲಿನ ಮಣ್ಣನ್ನು ಒಂದು ಕವರ್​ನಲ್ಲಿ ತುಂಬಿಸಿಕೊಂಡಿರುವ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದೆ.
ಕೋಲಾರದಲ್ಲಿ ನಿರ್ಮಾಣವಾಗುತ್ತಿರುವ ಯೋಧರ ಸ್ಮಾರಕಕ್ಕೆ ಕಾರ್ಗಿಲ್​ ಯುದ್ಧಭೂಮಿಯಿಂದ ಲೆಫ್ಟಿನೆಂಟ್ ಕರ್ನಲ್ ಅಮರನಾಥ್ ಅವರು ಮಣ್ಣು ತರುತ್ತಿದ್ದಾರೆ. ಕೋಲಾರದ ಮಾಜಿ ಸೈನಿಕರ ಆಸೆಯಂತೆ ಅಲ್ಲಿನ ಮಣ್ಣನ್ನು ಒಂದು ಕವರ್​ನಲ್ಲಿ ತುಂಬಿಸಿಕೊಂಡಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.#Kargil#Soil#Kolar#Warriors#Memorialpic.twitter.com/Cup6h7op5V
— Vijayavani (@VVani4U)September 27, 2020

ಕಾರ್ಗಿಲ್​ ವಿಜಯೋತ್ಸವಕ್ಕೆ 21 ವರ್ಷ: ಊಟ-ನಿದ್ರೆ ಇಲ್ಲದೆ ಯುದ್ಧ ಮಾಡಿದ್ದೆವು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen − fourteen =
Remember me
