ಬೆಂಗಳೂರು:ಮುಂಬರುವ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ-2023ರ ಕುರಿತಂತೆ ಜಿಲ್ಲಾಮಟ್ಟದಲ್ಲಿ ನಡೆಯುತ್ತಿರುವ ಪೂರ್ವ ತಯಾರಿಗಳ ಪರಿಶೀಲನೆಗಾಗಿ ಭಾರತ ಚುನಾವಣಾ ಆಯೋಗದ ಮೂರು ತಂಡಗಳು ರಾಜ್ಯದ ವಿವಿಧ 5ಕ್ಕೂ ಹೆಚ್ಚು ಜಿಲ್ಲೆಗಳಿಗೆ ನೇರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
ಭಾರತ ಚುನಾವಣಾ ಆಯೋಗದ ಉಪ ಮುಖ್ಯ ಆಯುಕ್ತರಾದ ಅಜಯ್‌ ಬಾಡು ಅವರ ನೇತೃತ್ವದ ತಂಡ ಯಾದಗಿರಿ ಜಿಲ್ಲೆಗೆ ಬೇಟಿ ನೀಡಿ ಇವಿಎಮ್‌ ಮತ್ತು ವಿವಿಪ್ಯಾಟ್‌ ಗಳ ಪ್ರಾಥಮಿಕ ಹಂತದ ಪರಿಶೀಲನೆ ನಡೆಸಿದರು. ಮತದಾರರ ಜಾಗೃತಿಗಾಗಿ ಸ್ವೀಪ್‌ ಮೂಲಕ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ಕಲಬುರಗಿ ವಲಯದ ಜಿಲ್ಲಾಧಿಕಾರಿಗಳೊಂದಿಗೆ ಚುನಾವಣಾ ಪೂರ್ವ ತಯಾರಿ ಕುರಿತಂತೆ ಸಭೆ ನಡೆಸಿದರು. ಈ ತಂಡದ ಜೊತೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಮತ್ತು ಅಪರ ಮುಖ್ಯ ಚುನಾವಣಾಧಿಕಾರಿ ರಾಜೇಂದ್ರ ಚೋಳನ್‌ ಭಾಗವಹಿಸಿದ್ದರು.
ಭಾರತ ಚುನಾವಣಾ ಆಯೋಗದ ನಿರ್ದೇಶಕರಾದ ಶುಭ್ರ ಸಕ್ಸೇನಾ ಹಾಗೂ ಕಾರ್ಯದರ್ಶಿ ಬಿ.ಸಿ ಪಾತ್ರ ಅವರ ನೇತೃತ್ವದ ತಂಡ ಚಾಮರಾಜನಗರ ಜಿಲ್ಲೆಗೆ ಬೇಟಿ ನೀಡಿ ಇವಿಎಮ್‌ ಮತ್ತು ವಿವಿಪ್ಯಾಟ್​ಗಳ ಪ್ರಾಥಮಿಕ ಹಂತದ ಪರಿಶೀಲನೆ ನಡೆಸಿದರು. ಮತದಾರರ ಜಾಗೃತಿಗಾಗಿ ಸ್ವೀಪ್‌ ಮೂಲಕ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ಮೈಸೂರು ವಲಯದ ಜಿಲ್ಲಾಧಿಕಾರಿಗಳೊಂದಿಗೆ ಚುನಾವಣಾ ಪೂರ್ವ ತಯಾರಿ ಕುರಿತಂತೆ ಸಭೆ ನಡೆಸಿದರು. ಈ ತಂಡದ ಜೊತೆಗೆ ರಾಜ್ಯ ಅಪರ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್‌ ಕುಮಾರ್ ಭಾಗವಹಿಸಿದ್ದರು.‌
ಭಾರತ ಚುನಾವಣಾ ಆಯೋಗದ ಸ್ವೀಪ್‌ ನಿರ್ದೇಶಕರಾದ ಸಂತೋಷ್‌ ಅಜ್ಮೇರ ಅವರ ನೇತೃತ್ವದ ತಂಡ ಮತದಾರರ ಜಾಗೃತಿಯ ರಾಜ್ಯ ಸ್ವೀಪ್‌ ಕಾರ್ಯಕ್ರಮಗಳ ಪೂರ್ವತಯಾರಿ ಕುರಿತಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್‌ ನೂಡಲ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ಸ್ವೀಪ್‌ ನೂಡಲ್‌ ಅಧಿಕಾರಿ ಪಿ.ಎಸ್‌ ವಸ್ತ್ರದ್‌ ಅವರು ಉಪಸ್ಥಿತರಿದ್ದರು.
ಫೆಬ್ರವರಿ 7 ರಂದು ರಾಜ್ಯಕ್ಕೆ ಆಗಮಿಸಿದ ಈ ಮೂವರು ಹಿರಿಯ ಅಧಿಕಾರಿಗಳ ತಂಡಗಳಲ್ಲಿ ಒಂದು ತಂಡ ರಾಜ್ಯದ ಯಾದಗಿರಿ ಮತ್ತು ಕಲಬುರಗಿ ವಿಭಾಗ, ಮತ್ತೊಂದು ಚಾಮರಾಜನಗರ ಮತ್ತು ಮೈಸೂರು, ಮೂರನೇ ತಂಡ ಸ್ವೀಪ್‌ ನಿರ್ದೇಶಕರ ನೇತೃತ್ವದಲ್ಲಿ ಬೆಂಗಳೂರು ವಲಯ ಮತ್ತು ಜಿಲ್ಲಾ ನೂಡಲ್‌ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್‌ ನಡೆಸಿದರು. ಮೊದಲ ದಿನ ಮತಗಟ್ಟೆಗಳು ಸೇರಿದಂತೆ ವಿವಿಧ ರೀತಿಯ ಮೊದಲ ಹಂತದ ಪೂರ್ವತಯಾರಿ ಕಾರ್ಯಗಳನ್ನು ಖುದ್ದಾಗಿ ವೀಕ್ಷಿಸಿದ ತಂಡಗಳು ಎರಡನೆ ದಿನ ಆಯಾ ವಲಯ ಮಟ್ಟದ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಫೆಬ್ರವರಿ 9ಕ್ಕೆ ಬೆಂಗಳೂರು ನಗರಕ್ಕೆ ಆಗಮಿಸಿದ ಈ ಮೂರು ತಂಡಗಳ ಹಿರಿಯ ಅಧಿಕಾರಿಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿ ನೇತೃತ್ವದಲ್ಲಿ ಬೆಳಗಾವಿ ವಲಯದ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಜಿಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು, ಮಧ್ಯಾಹ್ನದ ನಂತರ ವಿಧಾನಸೌಧದಲ್ಲಿ ಬೆಂಗಳೂರು ವಲಯದ ಜಿಲ್ಲಾದಿಕಾರಿಗೊಂದಿಗೆ ಸಭೆ ನಡೆಸಿ ನಂತರ ನವದೆಹಲಿಗೆ ಪ್ರಯಾಣ ಬೆಳಸಿದರು.
ಭಾರತ ಚುನಾವಣಾ ಆಯೋಗದ ಈ ಮೂರು ತಂಡಗಳ ಈ ಮೂರು ದಿನಗಳ ರಾಜ್ಯ ಬೇಟಿಯಲ್ಲಿ ಮುಖ್ಯವಾಗಿ ನಡೆಸಿದ ಸಭೆಗಳಲ್ಲಿ ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಅತ್ಯಂತ ಕಡಿಮೆ ಮತದಾನ ನಡೆದಿರುವ ಮತಗಟ್ಟೆಗಳನ್ನು ಗುರುತಿಸುವುದು, ಕಡಿಮೆ ಮತದಾನಕ್ಕೆ ಕಾರಣಗಳನ್ನು ಕಂಡು ಹಿಡಿದು ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿಯುವುದು, ಮತದಾನದ ಜಾಗೃತಿ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸುವುದು. ಮತಗಟ್ಟೆಗಳನ್ನು ಗುರುತಿಸುವುದು ಮತ್ತು ಅವುಗಳಿಗೆ ಅಗತ್ಯವಿರುವು ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ಅಗತ್ಯವಿರುವ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸುವುದು, ಹೊಸ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಹೆಚ್ಚಿನ ಯುವಮತದಾರರನ್ನು ಸೆಳೆಯುವುದು ಸೇರಿದಂತೆ ಮತದಾರರ ಪಟ್ಟಿಯ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಲು ಚರ್ಚಿಸಲಾಯಿತು.
ಯುಕೆಯಲ್ಲಿ 2ನೇ ವಿಶ್ವಯುದ್ಧದ ಬಾಂಬ್​ ಸ್ಫೋಟ! ನಿಷ್ಕ್ರಿಯಗೊಳಿಸುವ ಪ್ರಯತ್ನ ವಿಫಲ

ಸ್ನೇಹಿತೆಯ ಪತಿಯನ್ನೇ ಬಲೆಗೆ ಬೀಳಿಸಿಕೊಂಡ್ರಾ? ವಿವಾದದ ಬಗ್ಗೆ ಹನ್ಸಿಕಾ ಕೊಟ್ಟ ಸ್ಪಷ್ಟನೆ ಹೀಗಿದೆ ನೋಡಿ….

ಲಕ್ಷಾಂತರ ಟೆಕ್ಕಿಗಳು ಲೇ ಆಫ್: ಅಗ್ರ ಸ್ಥಾನದಲ್ಲಿ ಗೂಗಲ್​, ಇನ್ನಷ್ಟು ಟೆಕ್ಕಿಗಳು ಸಂತ್ರಸ್ತರಾಗುವ ಭೀತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 6 =
Remember me
