ವಿಧಾನಸಭೆ: ರಾಜ್ಯದಲ್ಲಿ ಅತಿವೃಷ್ಟಿಯಿಂದ ಆದ ನಷ್ಟಕ್ಕೆ ಕೇಂದ್ರ ಸರ್ಕಾರದಿಂದ ಈವರೆಗೆ 1869 ಕೋಟಿ ರೂ. ಪರಿಹಾರ ಘೋಷಣೆಯಾಗಿದ್ದು, ಈವರೆಗೆ 1652 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ ಎಂಬ ಸತ್ಯವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಬಿಚ್ಚಿಟ್ಟರು. ಒಂದು ಲಕ್ಷ ಕೋಟಿಗೂ ಅಧಿಕ ಮೊತ್ತದ ನಷ್ಟವಾಗಿದೆ. ರಾಜ್ಯ ಸರ್ಕಾರ 38 ಸಾವಿರ ಕೋಟಿ ರೂ. ಎಂದು ಕೇಂದ್ರಕ್ಕೆ ವರದಿ ಸಲ್ಲಿಸಿತು. ಈಗ 1652 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ, ಇಷ್ಟು ಸಾಕೇ ಎಂದು ಪ್ರಶ್ನೆ ಹಾಕಿದರು. ನಿಮ್ಮ ಪಕ್ಷದ 25 ಸಂಸದರನ್ನು ಜನ ಗೆಲ್ಲಿಸಿದ್ದಾರೆ, ಒಂದು ಬಾರಿಯಾದರೂ ಅವರೆಲ್ಲ ಪ್ರಧಾನಿ ಬಳಿ ಹೋಗಿ ಹೆಚ್ಚಿನ ಪರಿಹಾರ ತರಲು ಏಕೆ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಸರ್ಕಾರ ನೀಡಿದ ಜಾಹಿರಾತಿನ ಪ್ರಕಾರ ನೆರೆ ಹಾನಿಯಲ್ಲಿ 2.47 ಲಕ್ಷ ಮನೆಗಳಿಗೆ ಹಾನಿಯಾಗಿದೆ. ಕೇಂದ್ರಕ್ಕೆ ನೀಡಿದ ಮನವಿಯಲ್ಲಿ ಬೇರೆ ಲೆಕ್ಕವಿದೆ. ಈಗ ಪರಿಹಾರ ನೀಡಿದ ಮನೆಗಳ ಸಂಖ್ಯೆ ಬೇರೆ ಇದೆ. ತೀರ್ಥ ಗ್ರಾಮದಲ್ಲಿ ಬಸವರಾಜ ಕಾಂಬ್ಳೆ ಎಂಬ 17 ವರ್ಷದ ಬಾಲಕ ನೀರಿನಲ್ಲಿ ಕೊಚ್ಚಿ ಹೋಗಿದ್ದರೆ ಆತನ ಕುಟುಂಬಕ್ಕೆ ಪರಿಹಾರ ನೀಡದ ಸರ್ಕಾರ ಡಿಎನ್​ಎ ಪರೀಕ್ಷೆ ಮಾಡಿಸಬೇಕೆಂದು ಹೇಳುತ್ತಿದ್ದೆಯಂತೆ. ಇದಕ್ಕಿಂತ ನಿರ್ಲಜ್ಜ ಸ್ಥಿತಿ ಇನ್ಯಾರಿಗೂ ಬರಲು ಸಾಧ್ಯವಿಲ್ಲ ಎಂದರು.
ರಾಜ್ಯಪಾಲರ ಭಾಷಣದಲ್ಲಿ ನಮ್ಮ ಸರ್ಕಾರದ ಐದು ವರ್ಷಗಳ ಅವಧಿಯ ಯೋಜನೆಗಳ ಸಾಧನೆ ಮತ್ತು ಒಂದೆರಡು ಹೊಸ ಘೊಷಣೆ ಹೊರತುಪಡಿಸಿದರೆ ಈಗಿನ ಸರ್ಕಾರದ ಮುನ್ನೋಟ ಕಾಣಲಿಕ್ಕೆ ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಅರಣ್ಯ ಹೆಚ್ಚಲು, ಹಾಲು ಉತ್ಪಾದನೆ ಹೆಚ್ಚಾಗಲು ನಮ್ಮ ಸರ್ಕಾರದ ಪ್ರೋತ್ಸಾಹ ಕಾರಣ. ಇದರ ಕ್ರೆಡಿಟ್ ನೀವು ಪಡೆದುಕೊಳ್ಳುತ್ತೀರಾ ಎಂದು ಪ್ರಶ್ನಿಸಿದರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ರಾಜ್ಯಪಾಲರು ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಅದೊಂದನ್ನು ಬಿಟ್ಟರೆ ಹೊಸದೇನು ಇಲ್ಲ ಎಂದರು.
ಹೀಗಾದರೆ ಅಭಿವೃದ್ಧಿ ಹೇಗೆ ಸಾಧ್ಯ?1ಜನವರಿ ಅಂತ್ಯಕ್ಕೆ ಆದಾಯ ಸಂಗ್ರಹದ ಮಟ್ಟ ಕೂಡ ಆಶಾದಾಯಕವಾಗಿಲ್ಲ. ಅಬಕಾರಿ ಹೊರತುಪಡಿಸಿ ಉಳಿದವುಗಳ ಸಾಧನೆ ಶೇ.70 ಮೀರಿಲ್ಲ.2ಡಿಸೆಂಬರ್ ಅಂತ್ಯಕ್ಕೆ ಜಿಎಸ್​ಟಿ ಪಾಲು ಸುಮಾರು 6,613 ಕೋಟಿ ರೂ. ಬಾಕಿಯಿದೆ. ಜನವರಿ, ಫೆಬ್ರವರಿ ಸೇರಿದರೆ ಇದು 13,000 ಕೋಟಿ ರೂ. ಮೀರುತ್ತದೆ. ಇತರ ಅನುದಾನದಲ್ಲಿ 4,432 ಕೋಟಿ ರೂ. ಅನುದಾನವನ್ನು ಕೇಂದ್ರ ಬಾಕಿ ಉಳಿಸಿಕೊಂಡಿದೆ.315ನೇ ಹಣಕಾಸು ಆಯೋಗದ ವರದಿ ಪ್ರಕಾರ ನಮ್ಮ ರಾಜ್ಯಕ್ಕೆ ಇನ್ನುಮುಂದೆ ಪ್ರತಿ ವರ್ಷ ಸುಮಾರು 10,000 ಕೋಟಿ ರೂ. ಅನುದಾನ ಕೊರತೆ ಬೀಳುತ್ತದೆ. ಅಂದರೆ ಐದು ವರ್ಷದಲ್ಲಿ 50 ಸಾವಿರ ಕೋಟಿ ರೂ. ಕೊರತೆ ಬೀಳುತ್ತದೆ.4ಕರ್ನಾಟಕದ ತೆರಿಗೆಯ ಪಾಲಲ್ಲಿ ರಾಜ್ಯಕ್ಕೆ ವಾಪಸಾಗುವುದು ಕೇವಲ ಶೇ.42 ಮಾತ್ರ. ದುರಂತವೆಂದರೆ ಗುಜರಾತ್ ರಾಜ್ಯಕ್ಕೆ 1 ರೂ.ಗೆ 2.35 ರೂ. ಹಂಚಿಕೆಯಾಗುತ್ತಿದೆ. ಕರ್ನಾಟಕದ ತೆರಿಗೆಯಿಂದ ಗುಜರಾತ್ ಉದ್ದಾರ ಮಾಡಬೇಕೇ? ಇದಕ್ಕಿಂತ ಘೊರ ಅನ್ಯಾಯ ಯಾವುದಿದೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − thirteen =
Remember me
