ಬೆಂಗಳೂರು: ಹದಿನಾಲ್ಕು ತಿಂಗಳ ಮೈತ್ರಿ ಸರ್ಕಾರದ ಅವಧಿಯಲ್ಲಿ ಬೇಕಾಬಿಟ್ಟಿಯಾಗಿ ಕಾಮಗಾರಿಗಳಿಗೆ ಮಂಜೂರಾತಿ ನೀಡಿರುವುದರಿಂದಲೇ ಶಾಸಕರ ಕ್ಷೇತ್ರಗಳ ಅನುದಾನ ತಡೆಹಿಡಿಯುವ ಪರಿಸ್ಥಿತಿ ಬಂದಿದೆ ಎಂದು ಸರ್ಕಾರ ಸಮಜಾಯಿಷಿ ನೀಡಿದೆ.
ಗುರುವಾರ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಸಲ್ಲಿಸುವ ಚರ್ಚೆ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಒಟ್ಟಾಗಿ ಸರ್ಕಾರದ ಮೇಲೆ ಮುಗಿಬಿದ್ದು, ತಮ್ಮ ಕ್ಷೇತ್ರಗಳ ಅನುದಾನ ತಡೆ ಹಿಡಿದದ್ದೇಕೆ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಶಾಸಕರ ದನಿಯನ್ನು ಇನ್ನಷ್ಟು ಎತ್ತರಿಸಿದರು. ಇದೆಲ್ಲವನ್ನೂ ಸಾವಧಾನದಿಂದ ಆಲಿಸುತ್ತಿದ್ದ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ, ಅಂಕಿ-ಅಂಶ ಸಹಿತ ಸ್ಪಷ್ಟನೆ ನೀಡಲು ಶುರು ಮಾಡಿದರು.ಸರ್ಕಾರ ಯಾವುದೇ ಶಾಸಕರ ಅನುದಾನ ಕಡಿತ ಮಾಡಿಲ್ಲ, ಕೆಲವನ್ನು ತಡೆ ಹಿಡಿಯಲಾಗಿದೆ. ಇದಕ್ಕೂ ಕಾರಣಗಳಿವೆ. 2018-19ನೇ ಸಾಲಿನಲ್ಲಿ ಇಲಾಖೆ ಅನುದಾನ 9450 ಕೋಟಿ ರೂ. ಆದರೆ, 59,112 ಕೋಟಿ ರೂ. ಮೊತ್ತದ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ಈ ರೀತಿ ಮಂಜೂರಾತಿ ಕೊಟ್ಟಿದ್ದು ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು. ಪರಿಸ್ಥಿತಿ ಹೀಗಿರುವಾಗ ನಾವು ಎಲ್ಲಿಂದ ಅನುದಾನ ಬಿಡುಗಡೆ ಮಾಡುವುದು ಎಂದು ಮೆದು ದನಿಯಲ್ಲೇ ಕಾರಜೋಳ ಪ್ರತಿಪಕ್ಷದ ಬಾಯಿ ಕಟ್ಟಿದರು. ಈ ರೀತಿ ಮಂಜೂರಾತಿ ನೀಡುವುದು ಯಾವ ಸೀಮೆಯ ಆರ್ಥಿಕ ಶಿಸ್ತು ಎಂದು ಸಿದ್ದರಾಮಯ್ಯರನ್ನು ಕುಟುಕಿದರು. ತಕ್ಷಣವೇ ಜಾಗೃತಗೊಂಡ ಸಿದ್ದರಾಮಯ್ಯ, ಇದು ರೇವಣ್ಣ ಮಾಡಿದ ತಪ್ಪು, ನಮ್ಮ ಕಾಲದಲ್ಲಿ ಹೀಗಾಗಿರಲಿಲ್ಲ ಎಂದು ಹೇಳಿ ಕುಳಿತುಬಿಟ್ಟರು.
ಮುಂದೆ ಸರಿಪಡಿಸೋಣ:ಆರ್ಥಿಕ ಮುಗ್ಗಟ್ಟಿನಿಂದ ಲೋಕೋಪಯೋಗಿ ಇಲಾಖೆಯ ಕೆಲವು ಕಾಮಗಾರಿಗಳನ್ನು ತಡೆಹಿಡಿಯಲಾಗಿದೆ. ಬರುವ ದಿನಗಳಲ್ಲಿ ಸರಿಪಡಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ ಭರವಸೆ ನೀಡಿದರು.
ವಿಷ ತೆಗೆದುಕೊಳ್ಳುವ ಸ್ಥಿತಿ:ಅನುದಾನ ಮೀಸಲಿಡದೆ ಹಣಕಾಸು ಇಲಾಖೆಯಿಂದಲೂ ಒಪ್ಪಿಗೆ ಪಡೆಯದೆ ಕಾಮಗಾರಿಗೆ ಮಂಜೂರಾತಿ ಕೊಡಲಾಗಿದ್ದು, ಗುತ್ತಿಗೆದಾರರು ಕೆಲಸ ಮಾಡಿ ಮುಗಿಸಿದ್ದಾರೆ. ಅನೇಕ ಗುತ್ತಿಗೆದಾರರು ವಿಷ ತೆಗೆದುಕೊಳ್ಳುವ ಸ್ಥಿತಿ ನಿರ್ವಣವಾಗಿದೆ ಎಂದು ಗೋವಿಂದ ಕಾರಜೋಳ ವಿವರಿಸಿದರು. ಇದು ನನ್ನ ಇಲಾಖೆಯಲ್ಲಿ ಮಾತ್ರವಲ್ಲ, ಬೇರೆ ಬೇರೆ ಇಲಾಖೆಯಲ್ಲೂ ಹೀಗೆ ಆಗಿದೆ. ಈ ರೀತಿ ಮಂಜೂರಾತಿ ನೀಡಿರುವ ಕಾಮಗಾರಿಗೆ ಹಣ ಹೊಂದಾಣಿಕೆ ಮಾಡುವುದೆಲ್ಲಿಂದ ಅಂತ ಯೋಚಿಸುತ್ತಿದ್ದೇವೆ ಎಂದರು.ರಾಜ್ಯಪಾಲರ ಭಾಷಣಕ್ಕೆ ಮಾ.2ರಂದು ಸಿಎಂ ಉತ್ತರ: ರಾಜ್ಯಪಾಲರ ಭಾಷಣ ಮೇಲಿನ ಚರ್ಚೆಗೆ ಮಾ.2ರಂದು ಸಿಎಂ ಬಿ.ಎಸ್.ಯಡಿಯೂರಪ್ಪ ಉತ್ತರ ನೀಡಲಿದ್ದಾರೆ. ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಗುರುವಾರ ನೀಡಬೇಕಾಗಿದ್ದ ಉತ್ತರವನ್ನು ಮಾ.2 ರಂದು ನೀಡಲು ತೀರ್ವನಿಸಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಈ ಮೊದಲು ಮಾ.2 ಮತ್ತು 3ರಂದು ಸಂವಿಧಾನದ ಮೇಲೆ ಚರ್ಚೆ ಎಂದು ನಿಗದಿಪಡಿಸಲಾಗಿತ್ತು. ಅದನ್ನು ಸ್ವಲ್ಪ ಮಾರ್ಪಡಿಸಿ 2 ರಂದು ಸಿಎಂ ಉತ್ತರ ನೀಡಲಿದ್ದಾರೆ. 3 ಮತ್ತು 4ರಂದು ಸಂವಿಧಾನದ ಮೇಲೆ ಚರ್ಚೆ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಮಂಜೂರಾತಿ ಬ್ರೇಕ್​ಅಪ್12018-19ರಲ್ಲಿ ರಸ್ತೆ ಕಾಮಗಾರಿಗೆ 1479 ಕೋಟಿ ರೂ. ಬಿಡುಗಡೆ ಮೀಸಲಿಟ್ಟಿದ್ದರೆ, 8482 ಕೋಟಿ ರೂ. ಕಾಮಗಾರಿಗೆ ಅನುಮತಿ ನೀಡಿದ್ದಾರೆ. ಇರುವ ಅನುದಾನಕ್ಕೆ 6 ಪಟ್ಟು ಹೆಚ್ಚು ಮೊತ್ತಕ್ಕೆ ಮಂಜೂರಾತಿ.2ಕಟ್ಟಡ ನಿರ್ವಣಕ್ಕೆ 425 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, 1700 ಕೋಟಿ ರೂ. ಮೊತ್ತದ ಕಾಮಗಾರಿಗೆ ಮಂಜೂರಾತಿ.3ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ 414 ಕೋಟಿ ರೂ. ಅನುದಾನ ನಿಗದಿಯಾಗಿದ್ದರೆ, 3490 ಕೋಟಿ ಮೊತ್ತಕ್ಕೆ ಮಂಜೂರಾತಿ. ಅಂದರೆ, ಅನುದಾನಕ್ಕಿಂತ 8 ಪಟ್ಟು ಅಧಿಕ ಅನುಮತಿ.4ಪೆಟ್ರೋಲ್ ಸೆಸ್​ನಿಂದ ಸಂಗ್ರಹಿಸುವ ಹಣ 500 ಕೋಟಿ ರೂ. ದಾಟಲ್ಲ. ಸಿಆರ್​ಎಫ್ ಅಡಿಯಲ್ಲಿ 5700 ಕೋಟಿ ಮೊತ್ತದ ಕಾಮಗಾರಿಗೆ ಒಪ್ಪಿಗೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 16 =
Remember me
