ಬೆಂಗಳೂರು :ರಾಜ್ಯದಲ್ಲಿ ಒತ್ತುವರಿ, ವಿವಾದಿತ ವಕ್ಪ್ ಆಸ್ತಿಗಳ ಮಾರುಕಟ್ಟೆ ಮೌಲ್ಯ ಲೆಕ್ಕ ಹಾಕಲು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಪ್ ಇಲಾಖೆ ವಿಫಲವಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ವಿವಿಧ ರೀತಿಯ ಮಾರುಕಟ್ಟೆ ದರಗಳಿರುವ ಕಾರಣ ಆಸ್ತಿ ಲೆಕ್ಕಹಾಕಲು ಬರುವುದಿಲ್ಲವೆಂದು ಇಲಾಖೆ ಸಮಜಾಯಿಷಿ ನೀಡಿದೆ.
ವಕ್ಪ್ ಆಸ್ತಿ ಪ್ರಕರಣಗಳುನ್ಯಾಯಾಲಯದಲ್ಲಿ ಒಟ್ಟು 864 ವಕ್ಪ್ ಆಸ್ತಿ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಈ ಪೈಕಿ ಸವೋಚ್ಛ ನ್ಯಾಯಾಲಯದಲ್ಲಿ 4, ಉಚ್ಛ ನ್ಯಾಯಾಲಯದಲ್ಲಿ 352, ವಕ್ಪ್ ಟ್ರಿಬ್ಯುನಲ್ ನಲ್ಲಿ 300, ವಕ್ಪ್ ಕಾಯ್ದೆ 52ರಲ್ಲಿ 42, ಸೆಕ್ಷನ್ 54ರಲ್ಲಿ 118, ಕರ್ನಾಟಕ ಸಾರ್ವಜನಿಕ ಆವರಣ ಅಧಿನಿಯಮ 1947ರಲ್ಲಿ 47 ಪ್ರಕರಣಗಳಿವೆ ಎಂದು ಸಮಿತಿಗೆ ಇಲಾಖೆ ಮಾಹಿತಿ ನೀಡಿದೆ.
ವಿಧಾನ ಪರಿಷತ್​ನಲ್ಲಿ ಬುಧವಾರ ಮಂಡಿಸಲಾದ ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿ (2019-20 ಮತ್ತು 2020-21) 49ನೇ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಿದ್ದು, ಇಲಾಖೆಯ ನಿಲುವನ್ನು ಆಕ್ಷೇಪಿಸಿದೆ. ಆಕ್ಷೇಪಗಳಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಮಾರ್ಗಸೂಚಿ ಮತ್ತು ಮಾರುಕಟ್ಟೆ ದರದ ಪ್ರಕಾರ ಆಯಾ ಪ್ರದೇಶಕ್ಕೆ ಅನುಗುಣವಾಗಿ ಲೆಕ್ಕ ಹಾಕಿ ತಿಳಿಸಬಹುದಿತ್ತು ಎಂದು ಸಮಿತಿ ನೀಡಿದ ಸೂಚನೆಗೆ ಇಲಾಖೆ ಒಪ್ಪಿ, ಮಾಹಿತಿ ನೀಡುವುದಾಗಿ ತಿಳಿಸಿದೆ.
ಶಿಫಾರಸು:ಒತ್ತುವರಿ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ತೆಗೆದುಕೊಂಡು ಒತ್ತುವರಿ ಜಾಗ ತೆರವುಗೊಳಿಸಿ ಇಲಾಖೆ ವಶಕ್ಕೆ ಪಡೆಯಲು ಕ್ರಮಕೈಗೊಳ್ಳಬೇಕು. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ವಕ್ಪ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಾಯ್ದೆ ಪ್ರಕಾರ ವಿಚಾರಣೆಗೆ 2 ಟ್ರಿಬ್ಯುನಲ್ ರಚಿಸಿ 4 ವರ್ಷಗಳ ಬಳಿಕ ನಿಯಮಗಳನ್ನು ರೂಪಿಸಿರುವುದು ವರದಿಯಲ್ಲಿ ಪ್ರಸ್ತಾಪವಾಗಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
35 ಲಕ್ಷ ರೂ. ವರೆಗಿನ ಫ್ಲ್ಯಾಟ್ ಖರೀದಿ ಮುದ್ರಾಂಕ ಶುಲ್ಕ ಶೇ. 2-3ರಷ್ಟು ಇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 2 =
Remember me
