ಬೆಂಗಳೂರು:ಕರೊನಾ ಉಪಕರಣ, ಪರಿಕರ ಖರೀದಿ ಹಗರಣದ ನ್ಯಾಯಾಂಗ ತನಿಖೆಗೆ ಸರ್ಕಾರ ನಿರಾಕರಿಸಿದ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ಅಸ್ತ್ರ ಪ್ರಯೋಗಿಸಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಗ್ನಿಪರೀಕ್ಷೆ ಎದುರಾಗಿದೆ. ಕಾಂಗ್ರೆಸ್ ಕೈಗೊಂಡಿರುವ ಈ ಹಠಾತ್ ನಿರ್ಣಯ ಬಿಜೆಪಿಯ ಅನೇಕ ಶಾಸಕರಲ್ಲಿ ಗಲಿಬಿಲಿ ಉಂಟು ಮಾಡಿದೆ. ಕಾಂಗ್ರೆಸ್ ಸದನದಲ್ಲಿ ಮಾಡಬಹುದಾದ ಆರೋಪಗಳ ಬಗ್ಗೆ ಆತ್ಮೀಯರು ಮತ್ತು ಅಧಿಕಾರಿಗಳ ಜತೆ ಚರ್ಚೆ ನಡೆಸಿರುವ ಯಡಿಯೂರಪ್ಪ, ಅವಿಶ್ವಾಸ ನಿರ್ಣಯ ಸೋಲಿಸುವ ಬಗ್ಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಸರ್ಕಾರದ ಹಾಗೂ ಮುಖ್ಯಮಂತ್ರಿ ಕುಟುಂಬದ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿದೆ. ಅವಿಶ್ವಾಸಕ್ಕೆ ಸೋಲು ಖಚಿತವೆಂಬುದು ಗೊತ್ತಿದ್ದರೂ ಸದನದ ಕಲಾಪದಲ್ಲಿ ದಾಖಲಾಗುವಂತೆ ಮಾಡುವುದು ಕಾಂಗ್ರೆಸ್​ನ ಕಾರ್ಯತಂತ್ರವಾಗಿದೆ. ಗುರುವಾರ ವಿಧಾನಸಭೆಯಲ್ಲಿ ಸಂತಾಪ ಸೂಚಕ ಕಲಾಪ ಮುಗಿಯುತ್ತಿದ್ದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವಿಶ್ವಾಸ ನಿರ್ಣಯ ಮಂಡಿಸಿ, ನಿಯಮ 167ರಡಿ ಒಂದು ನೋಟಿಸ್ ಕೊಟ್ಟಿದ್ದೇನೆ. ಯಡಿಯೂರಪ್ಪ ಮಂತ್ರಿಮಂಡಲದ ಮೇಲೆ ವಿಶ್ವಾಸವಿಲ್ಲ. ನಮಗೆ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ಕೊಡಿ ಎಂದು ಕೋರಿದರು.
ನಿರ್ಣಯವನ್ನು 23 ಶಾಸಕರು ಬೆಂಬಲಿಸಿದರೆ ಮಾತ್ರ ಚರ್ಚೆಗೆ ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ ಎಷ್ಟು ಜನರ ಬೆಂಬಲವಿದೆ ಎಂಬುದು ತಿಳಿಯಬೇಕಾಗಿದೆ. ಎದ್ದು ನಿಲ್ಲಿ ಎಂದು ಸ್ಪೀಕರ್ ಸೂಚಿಸಿದರು. ಕಾಂಗ್ರೆಸ್​ನ ಎಲ್ಲ ಸದಸ್ಯರು ಎದ್ದು ನಿಂತಿದ್ದರಿಂದ ಸ್ಪೀಕರ್ ಅವಿಶ್ವಾಸ ನಿರ್ಣಯ ಚರ್ಚೆಗೆ ಅವಕಾಶ ಕೊಡುತ್ತೇನೆ. ಯಾವಾಗ? ಎಷ್ಟು ಗಂಟೆ ಎಂಬುದನ್ನು ರ್ಚಚಿಸಿದ ತರುವಾಯ ನಿರ್ಧಾರ ಮಾಡುತ್ತೇನೆ ಎಂದು ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿ್ರುಸಿದ ಸಿದ್ದರಾಮಯ್ಯ, ನಾವು ಮಂಡಿಸಿದ್ದೇವೆ. ನೀವು ಸಮಯ ನಿಗದಿ ಮಾಡಿ, ಇವತ್ತೇ ಕೊಡಿ ಎಂದು ಆಗ್ರಹಿಸಿದರು. ಮಧ್ಯಪ್ರವೇಶಿಸಿದ ಸಚಿವ ಆರ್.ಅಶೋಕ್ ಚರ್ಚೆಗೆ ಅವಕಾಶ ನೀಡಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ನಿಮಗೆ ಇಲ್ಲೂ ಬಹುಮತ ಇಲ್ಲ, ಎಲ್ಲೂ ಇಲ್ಲ. ಸುಮ್ಮನೆ ರಾಜಕೀಯ ಗಿಮಿಕ್ ಮಾಡಬೇಡಿ. ನಿಮ್ಮ ಅನೇಕ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಪಕ್ಷ ಬಿಟ್ಟು ಬರಲು ತುದಿಗಾಲ ಮೇಲಿದ್ದಾರೆ ಎಂದು ಕಾಲೆಳೆದರು. ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಿಮ್ಮ ಪಕ್ಷದದವರೂ ನಮ್ಮ ಕಡೆ ಬರುತ್ತಿದ್ದಾರೆ. ನಿಮ್ಮ ಹಣೆಬರಹವೂ ನಮಗೆ ಗೊತ್ತಿದೆ ಎಂದು ಟಾಂಗ್ ಕೊಟ್ಟರು.
ತರುವಾಯ ಕಾಂಗ್ರೆಸ್​ನ ಡಿ.ಕೆ.ಶಿವಕುಮಾರ್, ನಮ್ಮ ಸಿಎಲ್​ಪಿ ನಾಯಕರು ಅವಿಶ್ವಾಸ ಮಂಡಿಸಿದ್ದಾರೆ. ಅದಕ್ಕೆ ಬೇಕಾದ ನಂಬರ್ ಕೇಳಿದ್ದೀರಿ, ಸಿಕ್ಕಿದೆ. ಸಚಿವರು ಚರ್ಚೆಗೆ ಅವಕಾಶ ಕೊಡಬೇಡಿ ಎನ್ನುತ್ತಾರೆ. ಅವಕಾಶ ಕೊಡುವವರು ನೀವು. ಕೊಡಬೇಡಿ ಎನ್ನಲು ಅವರ್ಯಾರು ಎಂದು ಪ್ರಶ್ನಿಸಿದರು. ಚರ್ಚೆಗೆ ಅವಕಾಶ ಕೊಡುವುದು ನನ್ನ ವಿವೇಚನೆಗೆ ಬಿಟ್ಟ ವಿಚಾರ, ನಾನು ತೀರ್ಮಾನ ಮಾಡುತ್ತೇನೆ ಎಂದು ಸ್ಪೀಕರ್ ಸಮಾಧಾನ ಮಾಡಿದರು.
ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ನಿರ್ಣಯ ಮಂಡನೆಯಾದ ಮೇಲೆ ಯಾವುದೇ ಸರ್ಕಾರಿ ವಿಷಯ ಪ್ರಸ್ತಾಪವಾಗಬಾರದು. ರಾಜ್ಯವ್ಯಾಪಿ ಜರೂರು ವಿಷಯ ಬಿಟ್ಟು ಬೇರೆ ವಿಷಯಗಳಿಗೆ ಅವಕಾಶ ಕೊಡುವಂತಿಲ್ಲ. ಅವಕಾಶ ಕೊಟ್ಟು ಸದನದ ಗೌರವಕ್ಕೆ ಧಕ್ಕೆತರಬೇಡಿ ಎಂದು ಕಾಂಗ್ರೆಸ್​ನ ಎಚ್.ಕೆ. ಪಾಟೀಲ್ ಮನವಿ ಮಾಡಿದರು. ಮಧ್ಯಪ್ರವೇಶಿಸಿ ಮಾತನಾಡಿದ ಬಿಜೆಪಿಯ ಕೆ.ಜಿ.ಬೋಪಯ್ಯ, ಅವಿಶ್ವಾಸ ನಿರ್ಣಯ ಮೇಲೆ ಈಗಲೇ ಚರ್ಚೆಗೆ ನೀಡಬೇಕೆಂದೇನೂ ಇಲ್ಲ. ನಾಳೆಯೂ ನೀಡಬಹುದು. ಮೂರು ದಿನಗಳವರೆಗೆ ನಿಯಮಗಳಲ್ಲಿ ಅವಕಾಶವಿದೆ ಎಂದರು.
ಇಂದು ಬಿಜೆಪಿ ಶಾಸಕಾಂಗ ಸಭೆ
ವಿಧಾನಮಂಡಲ ಅಧಿವೇಶನ ಕೇವಲ 2 ದಿನ ಉಳಿದಿರುವುದರಿಂದ ಪಕ್ಷದ ಶಾಸಕರ ಅಹವಾಲು ಆಲಿಸಲು ಸಿಎಂ ಯಡಿಯೂರಪ್ಪ ಶುಕ್ರವಾರ ಸಂಜೆ 6ಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ ಎಂಬ ಅಸಮಾಧಾನ ಶಾಸಕರಲ್ಲಿದೆ. ಮಂತ್ರಿಮಂಡಲ ಪುನಾರಚನೆ ಕೆಲ ಶಾಸಕರ ಒತ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾವಾರು ಶಾಸಕರ ಜತೆ ಚರ್ಚೆ ಮಾಡುವ ಉದ್ದೇಶವನ್ನು ಸಿಎಂ ಹೊಂದಿದ್ದರು. ಕರೊನಾ ಹಿನ್ನೆಲೆ ಸಾಧ್ಯವಾಗಿರಲಿಲ್ಲ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ವಿವರಿಸುವುದು ಸಭೆ ಉದ್ದೇಶ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 1 =
Remember me
