ಬೆಂಗಳೂರು:ಮಹತ್ವದ ಬೆಳವಣಿಗೆ ಒಂದರಲ್ಲಿ ಇನ್ಫೋಸಿಸ್ ಗೆ ನೀಡಲಾಗಿದ್ದ 32 ಸಾವಿರ ಕೋಟಿ ರೂ. ಮೊತ್ತದ ಜಿಎಸ್​ಟಿ ನೋಟಿಸ್​ಅನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಈ ಮೊದಲು 2017ರಿಂದ 2022ರವರೆಗೆ ಐದು ವರ್ಷದಲ್ಲಿ ಬರೋಬ್ಬರಿ 32,403.46 ಕೋಟಿ ರೂ ಮೊತ್ತದ ಐಜಿಎಸ್​ಟಿ ಪಾವತಿಸಬೇಕು ಎಂದು ಜಿಎಸ್​ಟಿ ಅಧಿಕಾರಿಗಳು ಇನ್ಫೋಸಿಸ್​ಗೆ ನೋಟಿಸ್​ ಜಾರಿ ಮಾಡಿದ್ದರು.
ರಾಜ್ಯ ಸರ್ಕಾರ, ತಾನು ನೀಡಿರುವ ಜಿಎಸ್ ಟಿ ನೋಟಿಸನ್ನು ಹಿಂಪಡೆದಿದೆ ಎಂದು ಖುದ್ದು ಇನ್ಫೋಸಿಸ್ ಸಂಸ್ಥೆ ಪ್ರಕಟಿಸಿದೆ.32,000 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವ ಆರೋಪಗಳ ಬಗ್ಗೆ ಕೇಂದ್ರೀಯ ಜಿಎಸ್​ಟಿ ಗುಪ್ತಚರ ವಿಭಾಗದ ಮಹಾನಿರ್ದೇಶಕರಿಗೆ ನೀವು ವಿವರಣೆ ಕೊಡಬೇಕು ಎಂದು ತನಗೆ ಕಳುಹಿಸಿರುವ ಸೂಚನಾ ಪತ್ರದಲ್ಲಿ ರಾಜ್ಯ ಸರ್ಕಾರ ತಿಳಿಸಿದೆ ಎಂದು ಇನ್ಫೋಸಿಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಟಿವಿ, ಮೊಬೈಲ್​ ಬಳಕೆ ನಿರ್ಬಂಧಿಸಿದ್ದಕ್ಕೆ ಹೆತ್ತವರ ವಿರುದ್ಧವೇ FIR! ದೂರು ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲೇರಿದ ಪೋಷಕರು
ಜುಲೈ 31ರಂದು ನೀಡಲಾಗಿರುವ ನೋಟಿಸ್​ನಲ್ಲಿ  32,000 ಕೋಟಿ ರೂ.ಗಳ ಜಿಎಸ್​​ಟಿ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟಿಲ್ಲ. ಹಾಗಾಗಿ, ಕೂಡಲೇ ತೆರಿಗೆಯನ್ನು ಕಟ್ಟಬೇಕೆಂದು ಸೂಚಿಸಿತ್ತು. ಅಲ್ಲದೆ, ಈ ತೆರಿಗೆಯು ಇನ್ಫೋಸಿಸ್ ಕಂಪನಿಯು ವಿದೇಶಗಳಲ್ಲಿನ ತನ್ನ ಶಾಖೆಗಳಿಂದ ಅಲ್ಲಿನ ಕಂಪನಿಗಳಿಗೆ ನೀಡುತ್ತಿರುವ ಸಾಫ್ಟ್ ವೇರ್ ಸೇವೆಗಳ ಮೇಲೆ ವಿಧಿಸಲಾಗುವ ತೆರಿಗೆಯಾಗಿದೆ ಎಂದು ಉಲ್ಲೇಖಿಸಿತ್ತು.
ವಿದೇಶಗಳಲ್ಲಿ ನೀಡುವ ಸೇವೆಗಳ ಮೇಲಿನ ಜಿಎಸ್ ಟಿಯನ್ನು ಈಗಾಗಲೇ ಕೇಂದ್ರ ಸರ್ಕಾರವೇ ರದ್ದುಗೊಳಿಸಿದೆ. ಇತ್ತೀಚೆಗಷ್ಟೇ ಈ ಕುರಿತಂತೆ ಮಾರ್ಗಸೂಚಿಯನ್ನು ಕೇಂದ್ರೀಯ ತೆರಿಗೆ ಇಲಾಖೆ ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ. ಈ ಹೊಸ ನಿಯಮದ ಪ್ರಕಾರ, ಭಾರತದಿಂದ ವಿದೇಶದ ಕಂಪನಿಗಳಿಗೆ ನೀಡಲಾಗುವ ಸಾಫ್ಟ್ ವೇರ್ ಸೇವೆಗಳು ಮಾತ್ರ ತೆರಿಗೆ ವ್ಯಾಪ್ತಿಗೆ ಒಳಪಡಲಿವೆ ಎಂದು ರಾಜ್ಯ ಸರ್ಕಾರ ನೀಡಿದ್ದ ನೋಟಿಸ್​ಗೆ ಉತ್ತರಿಸಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
