ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಸೇರಿ 113ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ನಾಳೆ (ಫೆ.13) ಕರ್ನಾಟಕ ಬಂದ್​ಗೆ ಕರೆ ನೀಡಿವೆ.
ಓಲಾ, ಊಬರ್ ಸೇರಿದಂತೆ ಅನೇಕ ಖಾಸಗಿ ಸಾರಿಗೆ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಖಾಸಗಿ ಶಾಲಾ ಕಾಲೇಜು ಶಿಕ್ಷಣ ಸಂಸ್ಥೆಗಳ ಒಕ್ಕೂಟ ಸಹ ಈ ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿವೆ. ಆದರೆ ಬಂದ್​ಗೆ ಕೆಎಸ್​ಆರ್​ಟಿಸಿ ಬಿಎಂಟಿಸಿ ಬೆಂಬಲ ಘೋಷಿಸದ ಹಿನ್ನೆಲೆಯಲ್ಲಿ ಬಸ್​ಗಳ ಸಂಚಾರ ಎಂದಿನಂತೆ ಇರಲಿದೆ. ಮೆಟ್ರೋ ರೈಲುಗಳು ಕೂಡ ಎಂದಿನಂತೆ ಸಂಚರಿಸಲಿವೆ ಎಂದು ತಿಳಿದು ಬಂದಿದೆ.
ಸರೋಜಿನಿ ಮಹಿಷಿ ವರದಿ ನೀಡಿ ಹಲವು ವರ್ಷಗಳೇ ಕಳೆದರೂ ಅಧಿಕಾರಕ್ಕೆ ಬಂದ ಯಾವ ಸರ್ಕಾರಗಳು ಜಾರಿ ಮಾಡಿಲ್ಲ. ಹೀಗಾಗಿ ಕನ್ನಡಿಗರಿಗೆ ಉದ್ಯೋಗ ದೊರಕದ ಹಿನ್ನೆಲೆಯಲ್ಲಿ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಬಂದ್​ಗೆ ಕರೆ ನೀಡಲಾಗಿದೆ.
15 ದಿನಗಳ ಹಿಂದೆ ನಡೆದ ಸಭೆಯಲ್ಲಿ ವರದಿ ಜಾರಿಗೆ ಆಗ್ರಹಿಸಿ ಫೆ.13ರಂದು ನಡೆಯುವ ಬಂದ್​ಗೆ 500 ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದವು . ಆದರೆ ನಾಳೆ ನಡೆಯುವ ಬಂದ್​ಗೆ ಇನ್ನು ಹಲವು ಸಂಘಟನೆಗಳು ಅಧಿಕೃತ ಬೆಂಬಲ ಘೋಷಿಸಿಲ್ಲ.
ಪ್ರಮುಖ ಕನ್ನಡಪರ ಸಂಘಟನೆಗಳಾದ ಟಿ.ಎ. ನಾರಾಯಣಗೌಡ ಹಾಗೂ ಪ್ರವೀಣ್​ ಶೆಟ್ಟಿ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಬಣಗಳು ಬಂದ್​ನಿಂದ ದೂರ ಉಳಿದಿವೆ. ವಾಟಾಳ್​ ನಾಗರಾಜ್​ ಕೂಡ ಬಂದ್​ಗೆ ಬೆಂಬಲ ಘೋಷಿಸಿಲ್ಲ.
ಶಾಲಾ-ಕಾಲೇಜುಗಳು ಕೂಡ ಎಂದಿನಂತೆ ಇರಲಿವೆ. ಆಟೋ-ಟ್ಯಾಕ್ಸಿ, ಓಲಾ, ಊಬರ್, ಲಾರಿಗಳ ಸಂಚಾರ ಇರಲಿದೆ. ಪೆಟ್ರೋಲ್ ಬಂಕ್ ಹಾಗೂ ಹೋಟೆಲ್​ ತೆರೆದಿರುತ್ತವೆ. ವ್ಯಾಪಾರ ಹಾಗೂ ವಹಿವಾಟಿಗೆ ತೊಂದರೆ ಇಲ್ಲ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಎಂದಿನಂತೆ ಇರುತ್ತದೆ.
ಬಂದ್​ ನಡೆಸಲು ಇಲ್ಲಿವರೆಗೂ ಯಾರು ಅನುಮತಿ ಪಡೆದಿಲ್ಲ. ಬಂದ್​ ಹೆಸರಿನಲ್ಲಿ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುವಂತಿಲ್ಲ. ಬಂದ್​ ವೇಳೆ ಸಾರ್ವಜನಿಕ ಆಸ್ತಿ ಹಾನಿಯಾದರೆ ಹೋರಾಟಗಾರರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ರಾವ್​ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 16 =
Remember me
