ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಗುರುವಾರ ಬಂದ್​ಗೆ ಕರೆ ನೀಡಿವೆ. ಅದರ ಜತೆಗೆ ಸಾರಿಗೆ, ಕಾರ್ವಿುಕ ಕ್ಷೇತ್ರದ ಬಹುತೇಕ ಸಂಘಟನೆಗಳು ನೈತಿಕ ಬೆಂಬಲ ನೀಡುವುದಾಗಿ ತಿಳಿಸಿದ್ದು, ರಾಜ್ಯದೆಲ್ಲೆಡೆ ಬಂದ್ ಪರಿಣಾಮ ಕಡಿಮೆ ಇರಲಿದೆ.
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸೇರಿ ಹಲವು ಅಂಶಗಳಿರುವ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಕೆಲವು ಕನ್ನಡ ಪರ ಸಂಘಟನೆಗಳು 2019ರ ನ. 11ರಿಂದ ಪ್ರತಿಭಟನೆ ನಡೆಸುತ್ತಿವೆ. ಅದರ ಭಾಗವಾಗಿ ಗುರುವಾರ ರಾಜ್ಯ ಬಂದ್​ಗೆ ಕರೆ ನೀಡಲಾಗಿದೆ. ಬಂದ್​ಗೆ ಆಟೋ ಸಂಘಟನೆಗಳು, ದಲಿತ ಸಂಘಟನೆಗಳು, ಹಳದಿ ವಾಹನ ಸಂಘಟನೆಗಳು, ರೈತ ಸಂಘ ನೈತಿಕ ಬೆಂಬಲ ನೀಡಿವೆ.
ಓಲಾ, ಉಬರ್​ ಇರುವುದಿಲ್ಲ:ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘಟನೆಗಳು ಬಾಹ್ಯ ಬೆಂಬಲ ನೀಡಿರುವ ಕಾರಣ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇವೆಗಳು ಎಂದಿನಂತಿರಲಿದೆ. ಅದರ ಜತೆಗೆ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸೇವೆ ಪ್ರಯಾಣಿಕರ ಒತ್ತಡಕ್ಕನುಗುಣವಾಗಿ ನೀಡಲಾಗುತ್ತದೆ. ಉಳಿದಂತೆ ಒಲಾ, ಉಬರ್, ಆಟೋ ಸಂಘಟನೆಗಳು, ಬಹುತೇಕ ಪ್ರವಾಸಿ ವಾಹನ ಮಾಲೀಕರು ಬಂದ್​ಗೆ ಬೆಂಬಲ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಟ್ಯಾಕ್ಸಿ, ಆಟೋ ಸಂಚಾರ ವಿರಳವಾಗಿರಲಿದೆ.
ರೈತರಿಂದ ಬೆಂಬಲ:ಬಂದ್ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘ ಬೆಂಬಲ ನೀಡಿದೆ. ಅದರ ಜತೆಗೆ ಬೀದಿ ಬದಿ ವ್ಯಾಪಾರಿಗಳ ಸಂಘವೂ ಬೆಂಬಲಿಸಿದ್ದು, ತರಕಾರಿ, ಹಣ್ಣು ಸೇರಿ ಇನ್ನಿತರ ದಿನಬಳಕೆ ವಸ್ತುಗಳ ಪೂರೈಕೆ ಸಮರ್ಪಕವಾಗಿರುವುದಿಲ್ಲ.
ಕನ್ನಡ ಪರ ಸಂಘಟನೆಗಳಲ್ಲೇ ಗೊಂದಲ:ಬಂದ್​ಗೆ ಕನ್ನಡ ಪರ ಸಂಘಟನೆಗಳಾದ ಜಯ ಕರ್ನಾಟಕ, ಕರ್ನಾಟಕ ಸೇನೆ ಒಕ್ಕೂಟ, ಕರವೇ ಸ್ವಾಭಿಮಾನಿ ಬಣ, ದಲಿತಪರ ಸಂಘಟನೆ, ಅಂಬೇಡ್ಕರ್ ಸೇನೆ ಸೇರಿ ಇನ್ನಿತರ ಸಂಘಟನೆಗಳು ಬೆಂಬಲ ನೀಡಿದ್ದಾರೆ. ಆದರೆ, ಕರವೇ ಪ್ರವೀಣ್ ಶೆಟ್ಟಿ ಬಣ ಬಂದ್​ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಅದರ ಜತೆಗೆ ಇನ್ನಿತರ ಕೆಲ ಸಂಘಟನೆಗಳು ಬಂದ್ ವಿರೋಧಿಸುತ್ತಿವೆ. ಹೀಗಾಗಿ ಕನ್ನಡ ಪರ ಸಂಘಟನೆಗಳಲ್ಲೇ ಬಂದ್ ಕುರಿತು ಗೊಂದಲ ಏರ್ಪಟ್ಟಿದೆ.
ನಾಳೆ ಕರ್ನಾಟಕ ಬಂದ್: ಎಂದಿನಂತೆ ಸಾರಿಗೆ ಸಂಚಾರ ಇರಲಿದೆ ಎಂದು ಸ್ಪಷ್ಟಪಡಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + nineteen =
Remember me
