ಬೆಂಗಳೂರು:ತಮಿಳುನಾಡಿಗೆ ನೀರು ಹರಿಸಿರುವುದನ್ನು ಖಂಡಿಸಿ ಇಂದು ಅಖಂಡ ಕರ್ನಾಟಕ ಬಂದ್​ ಆಚರಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಿನಿಮಾ ಥಿಯೇಟರ್​​ಗಳು ಮುಚ್ಚಿವೆ. ಪ್ರೇಕ್ಷಕರಿಲ್ಲದೆ ಸಿನಿಮಾ ಚಿತ್ರಮಂದಿರಗಳು ಬಣ ಗುಡುತ್ತಿವೆ. ಸಿನಿಮಾ ರಿಲೀಸ್ ದಿನವೇ ಚಿತ್ರ ಪ್ರದರ್ಶನ ರದ್ದಾಗಿದ್ದು, ನಿನ್ನೆ ಬಿಡುಗಡೆಯಾದ ಸಿನಿಮಾಗಳು ಮತ್ತು ಇಂದು ರಿಲೀಸ್​ ಆಗಬೇಕಿದ್ದ ಸಿನಿಮಾಗಳಿಗೆ ಅಡ್ಡಿಯಾಗಿದೆ.
ಇಂದು ಬಂದ್ ಮುಗಿಯೋವರೆಗೂ ಯಾವುದೇ ಪ್ರದರ್ಶನ ಇರುವುದಿಲ್ಲ. ಇಂದು ಸಂಜೆಯವರೆಗೂ ಚಿತ್ರರಂಗ ಬಂದ್​ಗೆ ಸಹಕಾರ ನೀಡಿವೆ. ಸಂತೋಷ್, ನರ್ತಕಿ ಸೇರಿದಂತೆ ಬೆಂಗಳೂರು ಮತ್ತು ರಾಜ್ಯಾದ್ಯಂತ ಚಿತ್ರಮಂದಿರಳು ಮುಚ್ಚಿವೆ.
ಇದನ್ನೂ ಓದಿ:ಹಠಾತ್ ಹೃದಯಾಘಾತ: ಚಿಕಿತ್ಸೆಗೆ ಸ್ಟೆಮಿ ಯೋಜನೆ; ಜಯದೇವ ಸಂಸ್ಥೆ ಸಹಯೋಗದಲ್ಲಿ ಅನುಷ್ಠಾನ
ಕಾವೇರಿ ನೀರಿಗಾಗಿ ಇಂದು ಒಂದೇ ಸೂರಿನಡಿ ‘ಸ್ಯಾಂಡಲ್​ವುಡ್’ ಹೋರಾಟ ನಡೆಸುತ್ತಿವೆ. ಈ ಹಿನ್ನೆಲೆ ಇಂದು ಯಾವುದೇ ಸಿನಿಮಾ ಶೂಟಿಂಗ್, ಸಿನಿಮಾ ಪ್ರದರ್ಶನ ಹಾಗೂ ಔಟ್​ಡೋರ್ ಶೂಟಿಂಗ್ ಇರುವುದಿಲ್ಲ. ಸಂಜೆ 6 ಗಂಟೆಯವರೆಗೂ ಚಿತ್ರರಂಗದ ಎಲ್ಲ ಚಟುವಟಿಕೆಗಳಿಗೆ ತಾತ್ಕಾಲಿಕ ತಡೆ ನೀಡಿ ಕಾವೇರಿ ಹೋರಾಟಕ್ಕೆ ಬೆಂಬಲ ನೀಡಲಾಗುತ್ತಿದೆ.
ಶಿವರಾಜ್ ಕುಮಾರ್ ನೇತೃತ್ವದಲ್ಲಿ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆಗೆ ಸಿದ್ಧತೆ ನಡೆದಿದೆ. ‘ಕಾವೇರಿ ಜೀವಜಲ ನಮ್ಮದು’ ಎಂದು ಚಿತ್ರರಂಗದ ಘೋಷಣೆ ಇಂದು ಮೊಳಗಲಿದೆ. ಈಗಾಗಲೆ ಹೋರಾಟಕ್ಕೆ ಶಿವಣ್ಣ ಬೆಂಬಲ ಸೂಚಿಸಿದ್ದಾರೆ. 9 ಗಂಟೆಯ ನಂತರ ವಾಣಿಜ್ಯ ಮಂಡಳಿಗೆ ಶಿವಣ್ಣ ಭೇಟಿ ನೀಡಲಿದ್ದಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಹಾಗೂ ಹಲವರೊಂದಿಗೆ ಶಿವಣ್ಣ ಮೀಟಿಂಗ್ ಮಾಡಲಿದ್ದಾರೆ. ನಂತರ ಫಿಲ್ಮ್ ಚೇಂಬರ್​ನಲ್ಲಿ ಕಾವೇರಿ ನೀರಿಗಾಗಿ ಪ್ರತಿಭಟನೆ ಮಾಡಲಿದ್ದಾರೆ. ನಂತರ 10 ಗಂಟೆಗೆ ಟೌನ್ ಹಾಲ್ ಬಳಿ ಕಾವೇರಿ ಹೋರಾಟದಲ್ಲಿ ಶಿವಣ್ಣ ಭಾಗಿಯಾಗಲಿದ್ದಾರೆ. ಶಿವಣ್ಣನ ಜತೆ ಮತ್ತಷ್ಟು ನಟ-ನಟಿಯರು ಕಾವೇರಿ ಹೋರಾಟದಲ್ಲಿ ಕೈಜೋಡಿಸಲಿದ್ದಾರೆ.
ಪಾಕಿಸ್ತಾನದಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾ ಖಾನ್​ಗಳದ್ದಲ್ಲ: ಈ ಯುವ ನಟನ ಹೆಸರಲ್ಲಿದೆ ಆ ದಾಖಲೆ

ಏಷ್ಯಾಡ್​ನಲ್ಲಿ ಇಂದಿನಿಂದ ಅಥ್ಲೆಟಿಕ್ಸ್​; ಭಾರತದ ಪದಕ ಬೇಟೆ ವೇಗ ಪಡೆದುಕೊಳ್ಳುವ ನಿರೀಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − six =
Remember me
