ಬೆಂಗಳೂರು:ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ಇಂದು ಇಡೀ ಕರ್ನಾಟಕ ಸ್ತಬ್ಧವಾಗಲಿದೆ. ರಾಜ್ಯಾದ್ಯಂತ ಬಂದ್​ ಬಿಸಿ ಆರಂಭವಾಗಿದ್ದು, ಬೆಳಗ್ಗೆಯಿಂದಲೇ ಅಂಗಡಿ-ಮಂಗಟ್ಟುಗಳನ್ನು ಮುಚ್ಚಲಾಗಿದೆ. ಈಗಾಗಲೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇಂದು ಪ್ರತಿಭಟನೆಯ ಕಾವು ತಟ್ಟಲಿದೆ. ಸಾವಿರಾರು ಸಂಘಟನೆಗಳು ಬಂದ್​ಗೆ ಸಂಪೂರ್ಣ ಬೆಂಬಲ ನೀಡರುವುದರಿಂದ ಇಡೀ ಕರ್ನಾಟಕ ಇಂದು ಸ್ತಬ್ಧವಾಗಲಿದೆ.
ಕಳೆದ ಮಂಗಳವಾರವಷ್ಟೇ ಬೆಂಗಳೂರು ಬಂದ್​ ಆಚರಿಸಲಾಯಿತು. ಯಶಸ್ವಿಯೂ ಆಯಿತು. ಇಂದು ಅಖಂಡ ಕರ್ನಾಟಕ ಬಂದ್​ ಆಚರಣೆ ಆರಂಭವಾಗಿದೆ. ಸಂಚಾರ ಸಹ ವಿರಳವಾಗಿದೆ. ಇಂದಿನ ಬಂದ್​ ಪರಿಣಾಮ ಹೆಚ್ಚಾಗಿರಲಿದೆ. ಬಂದ್​ ಹಿನ್ನೆಲೆಯ್ಲಲಿ ಇಂದು ರಾಜ್ಯದಲ್ಲಿ ಏನೆಲ್ಲ ಸೇವೆಗಳು ಇರುತ್ತವೆ ಮತ್ತು ಏನೆಲ್ಲ ಬಂದ್​ ಆಗಲಿವೆ ಎಂಬುದನ್ನು ನಾವೀಗ ತಿಳಿಯೋಣ.
ಇದನ್ನೂ ಓದಿ:ಹಠಾತ್ ಹೃದಯಾಘಾತ: ಚಿಕಿತ್ಸೆಗೆ ಸ್ಟೆಮಿ ಯೋಜನೆ; ಜಯದೇವ ಸಂಸ್ಥೆ ಸಹಯೋಗದಲ್ಲಿ ಅನುಷ್ಠಾನ
* ಆಸ್ಪತ್ರೆ* ಮೆಡಿಕಲ್ ಸ್ಟೋರ್‌* ಹಾಲಿನ ಬೂತ್‌* ಅಗತ್ಯ ವಸ್ತುಗಳು* ಮೆಟ್ರೋ* ಆಂಬ್ಯುಲೆನ್ಸ್*ಬಿಎಂಟಿಸಿ*ಕೆಎಸ್​ಆರ್​ಟಿಸಿ
ಏನಿರಲ್ಲ..?* ಆಟೋ, ಕ್ಯಾಬ್* ಗೂಡ್ಸ್ ವಾಹನಗಳು* ಖಾಸಗಿ ಬಸ್‌ಗಳು* ಥಿಯೇಟರ್‌* ಸೂಪರ್ ಮಾರ್ಕೆಟ್‌* ಪೆಟ್ರೋಲ್ ಬಂಕ್‌* ಶಾಲಾ -ಕಾಲೇಜ್‌* ಅಂಗಡಿಗಳು* ಬೀದಿ ಬದಿ ಅಂಗಡಿಗಳು* ಜ್ಯುವೆಲ್ಲರಿ ಶಾಪ್‌ಗಳು* ಕೈಗಾರಿಕೆಗಳು* ಹೋಟೆಲ್‌ಗಳು* ಮಾಲ್‌ಗಳು
ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್​​ ನೀರನ್ನು ಹರಿಸಬೇಕೆಂದು ಸೆ.12ರಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು ಪಾಲಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸೆ.18ರಂದು ಆದೇಶ ಹೊರಡಿಸಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್​ಗೆ ಕರ್ನಾಟಕ ಮೇಲ್ಮನವಿ ಸಲ್ಲಿಸಿತ್ತು. ಸೆ.21ರಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ CWMA ಆದೇಶವನ್ನು ಎತ್ತಿಹಿಡಿದಿತ್ತು. ಅದರಂತೆ ರಾಜ್ಯ ಸರ್ಕಾರ ನೀರು ಬಿಡುಗಡೆ ಸಹ ಮಾಡಿತು. ಅತ್ತ ಸಂಘಟನೆಗಳು ಬಂದ್​ ಸಹ ಆಚರಿಸಿದವು. ಇದರ ನಡುವೆ ಮತ್ತೆ 3000 ಸಾವಿರ ಕ್ಯೂಸೆಕ್​ ನೀರು ಹರಿಸಲು ಕಾವೇರಿ ನದಿ ನೀರು ಸಮಿತಿ ಶಿಫಾರಸು ಮಾಡಿರುವುದರಿಂದ ಇಂದಿನ ಕರ್ನಾಟಕ ಬಂದ್​ ತೀವ್ರತೆ ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಇದನ್ನೂ ಓದಿ:ಬಂದ್ ಸವಾಲು, ಎಲ್ಲೆಡೆ ಸರ್ಪಗಾವಲು: ಪ್ರತಿಭಟನೆ ತಡೆಯುವುದಿಲ್ಲ ಎಂದ ಸರ್ಕಾರ; ಬಲವಂತ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ
ಇಂದು ರಾಜ್ಯದೆಲ್ಲೆಡೆ ಭಾರೀ ಪ್ರತಿಭಟನೆಗಳು ನಡೆಯಲಿದೆ. ಅದರಲ್ಲಿ ರಸ್ತೆ ತಡೆಯೇ ಪ್ರಮುಖವಾಗಿರಲಿದ್ದು, ಎಲ್ಲ ಹೆದ್ದಾರಿಗಳನ್ನು ಬಂದ್​ ಮಾಡಲು ಕನ್ನಡ ಪರ ಸಂಘಟನೆಗಳು ಪ್ಲಾನ್​ ಮಾಡಿವೆ. ಹೀಗಾಗಿ ರಸ್ತೆಗಿಳಿಯುವ ಮುನ್ನ ವಾಹನ ಸವಾರರು ತುಂಬಾ ಎಚ್ಚರಿಕೆ ವಹಿಸುವುದು ಸೂಕ್ತ. ಇಲ್ಲವಾದಲ್ಲಿ ಪ್ರತಿಭಟನೆಯ ನಡುವೆ ಸಿಲುಕಿ ಪರದಾಡಬೇಕಾಗುತ್ತದೆ.



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 13 =
Remember me
