ಮಂಗಳೂರು:ಕರ್ಣಾಟಕ ಬ್ಯಾಂಕ್ 2024-25ನೇ ಹಣಕಾಸು ವರ್ಷದಲ್ಲಿ ಜೂನ್ ಅಂತ್ಯದ ಪ್ರಥಮ ತ್ರೖೆಮಾಸಿಕ ಅವಧಿಯಲ್ಲಿ 400.33 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 370.70 ಕೋಟಿ ರೂ. ಗಳಿಸಿತ್ತು. ಈ ಬಾರಿ ಶೇ.7.99ರ ಹೆಚ್ಚಳ ಸಾಧಿಸಿದೆ.
ಇದನ್ನೂ ಓದಿ:ಸಂಪಾದಕೀಯ: ಕಠಿಣ ಕ್ರಮ ಅಗತ್ಯ
ಬ್ಯಾಂಕಿನ ಮಂಗಳೂರು ಪ್ರಧಾನ ಕಚೇರಿಯಲ್ಲಿ ಬುಧವಾರ ವ್ಯವಸ್ಥಾಪಕ ನಿರ್ದೇಶಕ ಶ್ರೀಕೃಷ್ಣನ್ ಎಚ್. ಅಧ್ಯಕ್ಷತೆಯಲ್ಲಿ ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ಮೊದಲ ತ್ರೖೆಮಾಸಿಕದ ಹಣಕಾಸು ಫಲಿತಾಂಶಗಳನ್ನು ಅನುಮೋದಿಸಲಾಯಿತು. ಒಟ್ಟು 1,00164 ಕೋಟಿ ರೂ. ಠೇವಣಿ ಗಳಿಸಿದ್ದು, ಕಳೆದ ಅವಧಿಯಲ್ಲಿ 86,960 ಕೋಟಿ ರೂ. ಠೇವಣಿ ಹೊಂದಿತ್ತು. ಶೇ.15.18 ಪ್ರಗತಿ ಸಾಧಿಸಿದೆ. ಬ್ಯಾಂಕ್​ನ ಒಟ್ಟು ಮುಂಗಡ 75,455 ಕೋಟಿ ರೂ. ಆಗಿದ್ದು, ಕಳೆದ ಅವಧಿಯಲ್ಲಿ ಇದು 63,012 ಕೋಟಿ ರೂ. ಆಗಿದ್ದು, ಈ ಬಾರಿ ಶೇ.19.75 ಪ್ರಗತಿ ಕಂಡಿದೆ. ಬ್ಯಾಂಕ್​ನ ನಿರ್ವಹಣಾ ಲಾಭ 558.59 ಕೋಟಿ ರೂ. ಆಗಿದೆ. ಮತ್ತು ನಿವ್ವಳ ಬಡ್ಡಿ ಆದಾಯ 903.36 ಕೋಟಿ ರೂ. ಆಗಿದೆ. ಅನುತ್ಪಾದಕ ಸ್ವತ್ತುಗಳ ಪ್ರಮಾಣ ಶೇ.1.43ಕ್ಕೆ ಇಳಿಕೆಯಾಗಿದೆ. ಕಳೆದ ಬಾರಿ ಇದು ಶೇ.1.66 ರಷ್ಟಿತ್ತು. ಬ್ಯಾಂಕ್​ನ ಬಂಡವಾಳ ಅನುಪಾತ ಈ ಬಾರಿ ಶೇ.17.64 ಇದ್ದು, ಕಳೆದ ಬಾರಿ ಶೇ.17 ಆಗಿತ್ತು.
ಕರ್ಣಾಟಕ ಬ್ಯಾಂಕ್ 1.75 ಲಕ್ಷ ಕೋಟಿ ರೂ. ವ್ಯವಹಾರದ ವಹಿವಾಟಿನಲ್ಲಿ ಆರ್ಥಿಕ ಸಾಧನೆಯಲ್ಲಿ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದೆ. ಒಟ್ಟಾರೆಯಾಗಿ 1 ಲಕ್ಷ ಕೋಟಿ ರೂ. ತಲುಪಿದ್ದೇವೆ. ಠೇವಣಿ ಮತ್ತು ಒಟ್ಟು ಮುಂಗಡಗಳಲ್ಲಿ 75 ಲಕ್ಷ ಕೋಟಿ ರೂ.ಗಳು. ಈ ದೃಢವಾದ ಕಾರ್ಯಕ್ಷಮತೆಯು ನಮ್ಮ ಡಿಜಿಟಲ್ ಮತ್ತು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುವುದರ ಧ್ಯೋತಕವಾಗಿದೆ.
| ಶ್ರೀಕೃಷ್ಣನ್ ಎಚ್.ವ್ಯವಸ್ಥಾಪಕ ನಿರ್ದೇಶಕರು, ಕರ್ಣಾಟಕ ಬ್ಯಾಂಕ್
ಇದನ್ನೂ ಓದಿ:ಚಲಿಸುವ ಕಾರಿನ ಬಾನೆಟ್​ ಮೇಲೆ ಹುಚ್ಚುಸಾಹಸ! ಪೊಲೀಸರ ಬಲೆಗೆ ಸಿಕ್ಕಿಬಿದ್ದ ಕಾಲೇಜಿಗೆ ಹೋಗುವ ಸ್ಪೈಡರ್​ಮ್ಯಾನ್
ಆರ್ಥಿಕ ಮಾರುಕಟ್ಟೆಯ ಏರಿಳಿತದ ನಡುವೆಯೂ ಬ್ಯಾಂಕ್ ದೃಢ ಆರ್ಥಿಕ ಕಾರ್ಯಕ್ಷಮತೆ ಪ್ರದರ್ಶಿಸಿದೆ. ಡಿಜಿಟಲ್ ರೂಪಾಂತರ, ಗ್ರಾಹಕಸೇವೆ ವರ್ಧನೆ ಮತ್ತು ಹೊಸ ಉತ್ಪನ್ನಗಳ ಬಿಡುಗಡೆಯಂತಹ ಪ್ರಮುಖ ಕ್ಷೇತ್ರಗಳಲ್ಲಿನ ನಮ್ಮ ಕಾರ್ಯತಂತ್ರದ ಉಪಕ್ರಮಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಾರಂಭಿಸಿವೆ. ಈ ವರ್ಷದಲ್ಲಿ ನಾವು ‘ಭಾರತ್ ಕಾ ಕರ್ಣಾಟಕ ಬ್ಯಾಂಕ್’ ಬ್ರಾಂಡ್ ಅನ್ನು ಮತ್ತಷ್ಟು ಪುನರುಜ್ಜೀವನಗೊಳಿಸುತ್ತೇವೆ. ನಮ್ಮ ಡಿಜಿಟಲ್ ಕೊಡುಗೆಗಳು ಮತ್ತು ಉಪಸ್ಥಿತಿಯನ್ನು ಸುಧಾರಿಸುತ್ತೇವೆ.
| ಶೇಖರರಾವ್ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ಣಾಟಕ ಬ್ಯಾಂಕ್
ಈ ಮೂವರು ಇಲ್ಲದಿರುವುದೇ ಟೀಮ್ ಇಂಡಿಯಾಗೆ ದೊಡ್ಡ ಲಾಸ್​! ನಾವಂತು ಇದರ ಲಾಭ ಪಡಿತೀವಿ: ಜಯಸೂರ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 + 7 =
Remember me
