ಬೆಂಗಳೂರು:ರಾಜ್ಯ ಮುಜರಾಯಿ ಇಲಾಖೆ ಆರಂಭಿಸಿರುವ ‘ಕರ್ನಾಟಕ – ಭಾರತ್ ಗೌರವ್ ಕಾಶಿ ರೈಲು ಯಾತ್ರೆ’ಯ ಮೂರನೇ ಸುತ್ತಿನ ಪ್ರವಾಸಕ್ಕೆ ಮಂಗಳವಾರ ಚಾಲನೆ ದೊರೆತಿದ್ದು, ಬೆಂಗಳೂರಿನಿಂದ ತೆರಳಿದ ಕಾಶಿಗೆ ತೆರಳಿದ ರೈಲಿನಲ್ಲಿ ಶೇ. 25 ಸೀಟುಗಳು ಖಾಲಿ ಉಳಿದಿದ್ದವು.
ಮೊದಲ ಹಾಗೂ ಎರಡನೇ ಸುತ್ತಿನ ಪ್ರವಾಸದಲ್ಲಿ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿತ್ತು. ಎರಡು ಬಾರಿಯೂ ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರನ್ನು ಹೊತ್ತು ಸಾಗಿದ್ದ ರೈಲು ಯಶಸ್ವಿಯಾಗಿ ಪ್ರವಾಸ ನಡೆಸಿದ್ದು, 1,200 ಮಂದಿ ಯಾತ್ರಾರ್ಥಿಗಳು ಕಾಶಿ ದರ್ಶನ ಮಾಡಿ ಬಂದಿದ್ದರು. ಆದರೆ ಮೂರನೇ ಸುತ್ತಿನಲ್ಲಿ ಪ್ರಚಾರದ ಕೊರತೆ, ಪರೀಕ್ಷೆ ಸಮಯ ಹಾಗೂ ತೀವ್ರ ಬಿಸಿಲು ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಪ್ರವಾಸ ಕೈಗೊಂಡಿಲ್ಲ. ಪರೀಕ್ಷೆ ನಂತರ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಇದನ್ನೂ ಓದಿ:ಮಹಿಳಾ ಆತ್ಮಾಹುತಿ ಬಾಂಬರ್​ ಬಂಧನ ವಿರೋಧಿಸಿ ಪಾಕ್​ನಲ್ಲಿ ಪ್ರತಿಭಟನೆ!
ಮುಜರಾಯಿ ಇಲಾಖೆಯ ಈ ಮಹಾತ್ವಾಕಾಂಕ್ಷಿ ಧಾರ್ಮಿಕ ಯಾತ್ರೆಗೆ ಕಳೆದ ನ. 11ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ‘ದಿವ್ಯ ಕಾಶಿ-ಭವ್ಯ ಕಾಶಿ’ಯ ಶೀರ್ಷಿಕೆಯಡಿ ಈಗಾಗಲೇ ಎರಡು ಸುತ್ತಿನ ಪ್ರವಾಸ ಪೂರ್ಣಗೊಳಿಸಲಾಗಿದೆ. ಉತ್ತರ ಭಾರತದಲ್ಲಿ ಡೆಸೆಂಬರ್ ಮತ್ತು ಜನವರಿ ತಿಂಗಳ ಆರಂಭದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದ್ದ ಕಾರಣ ಹಾಗೂ ಯಾತ್ರಾರ್ಥಿಗಳಲ್ಲಿ ಶೇ. 90 ಹಿರಿಯ ನಾಗರಿಕರು ಆಗಿರುವುದರಿಂದ ಆ ಚಳಿಯನ್ನು ತಡೆದುಕೊಳ್ಳುವುದು ಕಷ್ಟ ಎಂಬ ಕಾರಣಕ್ಕೆ ಎರಡು ತಿಂಗಳ ಕಾಲ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ವಿಶೇಷ ರೈಲು ವ್ಯವಸ್ಥೆ:ಕಾಶಿಯಾತ್ರೆ ಮಾಡುವವರಿಗಾಗಿಯೇ ಕರ್ನಾಟಕ ಸರ್ಕಾರ 14 ಭೋಗಿಗಳುಳ್ಳ ವಿಶೇಷ ರೈಲನ್ನು ವಿನ್ಯಾಸಗೊಳಿಸಿದ್ದು, ಇದರಲ್ಲಿ ಏಕಕಾಲದಲ್ಲಿ 600 ಮಂದಿ ಯಾತ್ರಾರ್ಥಿಗಳು ಪ್ರಯಾಣ ಮಾಡಬಹುದಾಗಿದೆ. ಇದು ಎಂಟು ದಿನಗಳ ಧಾರ್ಮಿಕ ಪ್ರವಾಸವಾಗಿದ್ದು, ವ್ಯಕ್ತಿಯೊಬ್ಬರಿಗೆ 20 ಸಾವಿರ ದರ ನಿಗದಿಪಡಿಸಲಾಗಿದೆ. ಇದರಲ್ಲಿ 5 ಸಾವಿರ ರೂ.ಗಳನ್ನು ಸರಕಾರವೇ ನೀಡುತ್ತದೆ. ಈಗಾಗಲೇ ಎರಡು ಹಂತದಲ್ಲಿ 1,200 ಮಂದಿ ಪ್ರವಾಸ ಮಾಡಿಬಂದಿದ್ದು, ಇದೀಗ ಮೂರನೇ ಸುತ್ತಿನ ಪ್ರವಾಸದಲ್ಲಿ ಯಾತ್ರಾರ್ಥಿಗಳ ಸಂಖ್ಯೆ ಇಳಿಕೆಯಾಗಿದೆ. ಹೀಗಾಗಿ 600 ಸೀಟುಗಳ ಪೈಕಿ 444 ಸೀಟುಗಳು ಮಾತ್ರವೇ ಭರ್ತಿಯಾಗಿದ್ದು, ಉಳಿದಂತೆ 156 ಸೀಟುಗಳು ಖಾಲಿಯಾಗಿಯೇ ತೆರಳಿದೆ ಎಂದು ಐಆರ್‌ಸಿಟಿಸಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಸೆಲ್ಫಿ ಪ್ರಕರಣ: ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಪೃಥ್ವಿ ಶಾಗೆ ಶಾಕ್​ ಕೊಡಲು ಸಜ್ಜಾದ ಸಪ್ನಾ ಗಿಲ್​
ತಿಂಗಳಿಗೆ ಎರಡು ಪ್ರವಾಸ:ಮುಂದಿನ ಪ್ರವಾಸ ಮಾರ್ಚ್ ತಿಂಗಳಲ್ಲಿ ಕೈಗೊಳ್ಳಲಿದ್ದು, ನಂತರದಲ್ಲಿ ಪ್ರತಿ ತಿಂಗಳು ಎರಡು ಬಾರಿ ಪ್ರವಾಸ ಕೈಗೊಳ್ಳುವ ಚಿಂತನೆಯಿದೆ. ಕಾಶಿ ಯಾತ್ರೆಗೆಂದೇ ಕರುನಾಡಿನ ಪ್ರತಿಷ್ಠಿತ ದೇವಾಲಯಗಳ ಚಿತ್ರಗಳನ್ನು ಒಳಗೊಂಡ ರೈಲನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಸೌಲಭ್ಯ ಬಳಸಿಕೊಂಡು ಜನರು ‘ದಿವ್ಯ ಕಾಶಿ-ಭವ್ಯ ಕಾಶಿ’ಯ ವೀಕ್ಷಣೆ ಮಾಡಬಹುದಾಗಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
Success Story | ಐಎಎಸ್ ಆಗಲು ‘ಪೃಥ್ವಿ’ ಸಿನಿಮಾ ಪ್ರೇರಣೆ!

4 ದಿನ ಜಿ-20 ಹಣಕಾಸು ಸಂಬಂಧಿತ ಸಭೆ ನಿಗದಿ: 72 ನಿಯೋಗ, 500ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು ಭಾಗಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
