ಬೆಂಗಳೂರು:ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ‘ಜಂಟಿ ಕಾರ್ಯಾಚರಣೆ’ ನಡೆಸುವ ಮೂಲಕ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ‘ಕಾವು’ ಹೆಚ್ಚಿಸಲು ಸಜ್ಜಾಗಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾನುವಾರ ಬಿಡದಿಯ ಕೇತಗಾನಹಳ್ಳಿಗೆ ತೆರಳಿ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕಾರ್ಯ, ಕಾರಣಗಳಿಂದ ಖುದ್ದು ಭೇಟಿ ವಿಳಂಬವು ಸಂವಹನ ಕೊರತೆ, ತಪು್ಪ ಸಂದೇಶ ರವಾನೆಗೆ ತಡೆಯೊಡ್ಡಲೆಂದು ಉಭಯ ನಾಯಕರ ಮುಖಾಮುಖಿಯಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿ ವರಿಷ್ಠರ ಅಪೇಕ್ಷೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಅಭಿಲಾಷೆಯಂತೆ ಎಚ್​ಡಿಕೆ- ಬಿವೈವಿ ಚರ್ಚೆಯ ಕಾಲಕ್ಕೆ ಒಟ್ಟಾಗಿ ಸಾಗುವ ಬಗ್ಗೆ ಗಮನಹರಿಸಿದ್ದಾರೆ. ಒಕ್ಕಲಿಗ ಸಮುದಾಯದ ಆರ್. ಅಶೋಕ್ ಅವರನ್ನು ವಿಧಾನಸಭೆ ಪ್ರತಿಪಕ್ಷ ನಾಯಕರನ್ನಾಗಿ ಮಾಡುವ ಮೂಲಕ ಜೆಡಿಎಸ್​ಗೆ ಬಿಜೆಪಿ ಟಕ್ಕರ್ ಕೊಟ್ಟಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ. ಕ್ರಮೇಣ ಇದೇ ವಿಷಯ ಫೋಕಸ್ ಆಗಿ ಸೃಷ್ಟಿಯಾಗಬಹುದಾದ ಅಪನಂಬಿಕೆ, ಎದುರಾಳಿಗಳು ಲಾಭ ಪಡೆಯುವುದನ್ನು ತಪ್ಪಿಸುವ ಸಲುವಾಗಿಯೇ ಎಚ್​ಡಿಕೆ ಇದ್ದಲ್ಲಿಗೇ ಹೋಗಿ ವಿಜಯೇಂದ್ರ ಮಾತುಕತೆ ನಡೆಸಿದ್ದಾರೆಂದು ರ್ತಸಲಾಗುತ್ತಿದೆ.
ವಿಶೇಷ ಆಸಕ್ತಿ: ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವುದು ಬಿಜೆಪಿ ಗುರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ವಿಶೇಷ ಆಸಕ್ತಿ ವಹಿಸಿ, ಜೆಡಿಎಸ್ ಪಕ್ಷವನ್ನು ಎನ್​ಡಿಎ ತೆಕ್ಕೆಗೆ ಸೆಳೆದುಕೊಂಡಿದ್ದಾರೆ. ಮೋದಿಯವರ ವರ್ಚಸ್ಸು, ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ಲೋಕಸಭೆ ಚುನಾವಣೆಗೆ ಮೈತ್ರಿ ಸೀಮಿತವಾಗಿಲ್ಲ. ಕುಮಾರಸ್ವಾಮಿಯವರ ಜತೆಗೂಡಿ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು ಎಂದು ಎಚ್.ಡಿ. ದೇವೇಗೌಡ ಹಿತವಚನ ಬೋಧಿಸಿದ್ದಾರೆ. ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮೊದಲ ಭೇಟಿ ಸಂದರ್ಭದಲ್ಲಿ ದೇವೇಗೌಡರು ‘ಕಿವಿಮಾತು’ ಹೇಳಿ ಕಳುಹಿಸಿದ್ದಾರೆ. ಮೋದಿಯವರ ಜತೆಗಿನ ನಿಕಟತೆ ಬಗ್ಗೆ ಪರೋಕ್ಷ ಸುಳಿವು ನೀಡಿದ್ದಾರೆ.
ವಿಚಾರ ವಿನಿಮಯ:ಎಚ್​ಡಿಕೆ, ಬಿವೈವಿ ವಿಚಾರ ವಿನಿಮಯದ ವೇಳೆ ರಾಜಕೀಯ ವಿದ್ಯಮಾನ, ಪಂಚರಾಜ್ಯಗಳ ಚುನಾವಣೆ ಬೆಳವಣಿಗೆ, ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಪ್ರಸ್ತಾಪವಾಗಿವೆ. ವಿಷಯಾಧಾರಿತವಾಗಿ ಆಡಳಿತ ಕಾಂಗ್ರೆಸ್ ಪಕ್ಷವನ್ನು ಸದನದೊಳಗೆ ಕಟ್ಟಿಹಾಕುವ ಬಗ್ಗೆ ಉಭಯ ನಾಯಕರು ಜಂಟಿ ಸಮರಾಭ್ಯಾಸ ಮಾಡಿ, ಪಕ್ಷದ ಶಾಸಕರನ್ನು ಅಣಿಗೊಳಿಸಲು ಸನ್ನದ್ಧರಾಗಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನವೆಂದರೆ ಉತ್ತರಕರ್ನಾಟಕಕ್ಕೆ ಪ್ರಾತಿನಿಧ್ಯವೆಂದೇ ಬಿಂಬಿತವಾಗಿದೆ. ಈ ನಿಟ್ಟಿನಲ್ಲಿ ಮಿಕ್ಕೆಲ್ಲ ರಾಜಕೀಯ ಕಾರ್ಯಸೂಚಿಗಿಂತ ಅಭಿವೃದ್ಧಿ ಅಜೆಂಡಾಗಳು ಸದನದೊಳಗೆ ಜಂಟಿಯುದ್ಧದ ಭಾಗವಾಗಿಸುವ ವಿಷಯದಲ್ಲಿ ಉಭಯ ನಾಯಕರ ಮಧ್ಯೆ ಸಹಮತ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.
ಮೈತ್ರಿ ಪಡೆಯ ಪ್ರಮುಖ ಅಸ್ತ್ರಗಳು
* ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕಾದ ಬರ ಪರಿಹಾರ ನಿರ್ವಹಣೆಯಲ್ಲಿ ಕಾಲಾಯಾಪನೆ
* ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದತ್ತ ಕೈ ತೋರಿಸಿ ಹೊಣೆಯಿಂದ ನುಣುಚಿಕೊಳ್ಳುವ ಯತ್ನ
* ಕಾವೇರಿ ಜಲ ವಿವಾದ ವಿಷಯದಲ್ಲಿ ವಿಳಂಬ ನಿಲುವು, ಸಮರ್ಥ ವಾದ ಮಂಡನೆಯಲ್ಲಿ ವಿಫಲ
* ವರ್ಗಾವಣೆ ದಂಧೆ, ಹಿಡಿತ ತಪ್ಪಿದ ಆಡಳಿತ, ಯತೀಂದ್ರ ವಿಡಿಯೋ ಸಂಭಾಷಣೆಯ ಝುಲಕ್
* ಅರೆಬೆಂದ ಸ್ಥಿತಿಯಲ್ಲಿ ನಾಲ್ಕು ಗ್ಯಾರಂಟಿಗಳ ಅನುಷ್ಠಾನ, ಉಳಿದ ಅಭಿವೃದ್ಧಿ ಕಾರ್ಯಗಳು ಸ್ಥಗಿತ
* ಕಳಸಾ-ಬಂಡೂರಿ, ಯುಕೆಪಿ ಸೇರಿ ಉತ್ತರ ಕರ್ನಾಟಕದ ಬಗ್ಗೆ ವಿಶೇಷವಾಗಿ ಪ್ರಸ್ತಾಪಕ್ಕೆ ತಯಾರಿ
* ಜಾತಿ ಗಣತಿ ಕುರಿತ ಎಚ್.ಕಾಂತರಾಜು ವರದಿ ಬಗ್ಗೆ ಸರ್ಕಾರದ ನಿರ್ಧಾರದಂತೆ ಮುಂದಿನ ನಡೆ
ಎಚ್​ಡಿಕೆ ಹೇಳಿದ್ದೇನು?
* ವಿಜಯೇಂದ್ರ ಮತ್ತು ನಿಖಿಲ್ ಇಬ್ಬರೂ ಸಹೋದರರ ರೀತಿ ರಾಜ್ಯದಲ್ಲಿ ಓಡಾಡಲಿ ದ್ದಾರೆ. ಎರಡೂ ಪಕ್ಷಗಳು ಒಟ್ಟಾಗಿ ಹೋರಾಟ ನಡೆಸಲಿವೆ. ಆಡಳಿತ ಪಕ್ಷದ ತಪ್ಪುಗಳನ್ನು ದಾಖಲೆ ಸಮೇತ ಎತ್ತಿ ಹಿಡಿಯುತ್ತೇವೆ.
* ಮೈತ್ರಿ ಸರ್ಕಾರದಲ್ಲಿ ಒಳ್ಳೆಯ ಆಡಳಿತ ನೀಡಿದ್ದು, ಜನ ಈಗಲೇ ಅಂಥ ಸರ್ಕಾರ ಬಯಸುತ್ತಿದ್ದಾರೆ. 2028-29ರಲ್ಲಿ ಮತ್ತೆ ಅಂಥದ್ದೇ ಸರ್ಕಾರ ಕೊಡುವ ಪ್ರಯತ್ನ ಮಾಡುತ್ತೇವೆ.
* ದೇಶದ ಹಿತದೃಷ್ಟಿಯಿಂದ ಮುಂದಿನ ಅವಧಿಗೂ ನರೇಂದ್ರಮೋದಿ ಪ್ರಧಾನಿ ಆಗಬೇಕು ಎನ್ನುವ ನಿಟ್ಟಿನಲ್ಲಿ ರ್ಚಚಿಸಿದ್ದೇವೆ. ಕ್ಷೇತ್ರ ಹಂಚಿಕೆ ಕುರಿತು ವರಿಷ್ಠರು ರ್ಚಚಿಸುತ್ತಾರೆ.
ವಿಜಯೇಂದ್ರ ಹೇಳಿದ್ದು
* ಸೀಟು ಹಂಚಿಕೆ ಕುರಿತು ಬಿಜೆಪಿ ವರಿಷ್ಠರು ಮತ್ತು ಕುಮಾರಸ್ವಾಮಿ ದೆಹಲಿಯಲ್ಲಿ ರ್ಚಚಿಸಲಿದ್ದಾರೆ.
* ಉಭಯ ಪಕ್ಷಗಳ ಗೆಲುವಿನ ಕಾರ್ಯತಂತ್ರವನ್ನು ಮಾತುಕತೆ ನಡೆಸಿ ತೀರ್ಮಾನ ಮಾಡುತ್ತೇವೆ.
* ದೇಶ, ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ-ಜೆಡಿಎಸ್ ಒಂದಾಗಿ ಲೋಕಸಭೆ ಚುನಾವಣೆ ಎದುರಿಸಲಿವೆ
* ರೈತರು, ಬಡವರ, ದಲಿತರ ವಿರೋಧಿ, ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸಲು ಎರಡೂ ಪಕ್ಷಗಳು ಒಟ್ಟಾಗಿ ಸಾಗುತ್ತೇವೆ
ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ನಾವು ಭೇಟಿಯಾಗಿದ್ದೇವೆ. ದೇಶದ ಹಿತದೃಷ್ಟಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಬಗ್ಗೆ ರ್ಚಚಿಸಿದ್ದೇವೆ. ಲೋಕಸಭೆ ಚುನಾವಣೆಗೆ ಸೀಟುಗಳ ಹೊಂದಾಣಿಕೆಯ ಮಾತುಕತೆಯಾಗಿಲ್ಲ, ಬಿಜೆಪಿ ವರಿಷ್ಠರೊಂದಿಗೆ ಕುಳಿತು ರ್ಚಚಿಸುತ್ತೇವೆ.
| ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ
ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಳಗಾವಿ ಅಧಿವೇಶನದಲ್ಲಿ ಜಂಟಿ ಹೋರಾಟದ ಕುರಿತು ರ್ಚಚಿಸಲಾಗಿದೆ. ದೇಶದ ಹಿತಕ್ಕಾಗಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು, ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಉಭಯ ಪಕ್ಷಗಳು ಗೆಲುವು ಸಾಧಿಸುವ ಕುರಿತು ರ್ಚಚಿಸಿದ್ದೇವೆ.
| ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
ಶಾಸ್ತ್ರೀಯ ಭಾಷೆ ಕನ್ನಡವನ್ನು ಮತ್ತಷ್ಟು ಎತ್ತರಕ್ಕೇರಿಸಿ: ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
