ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್​ಗೆ ನಾನ್ಯಾಕೆ ಅಂಕ ಕೊಡಲಿ, ಜನರೇ ಕೊಡುತ್ತಾರೆ. ಬಜೆಟ್​ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲವೆಂದು ಮಾಜಿ ಮುಖ್ಯಮಂತ್ರಿ ಎಚ್​​.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಎಸ್​ವೈ ಅವರು ಪ್ರಧಾನಿ ನರೇಂದ್ರ ಮೋದಿ ಮಾರ್ಗದಲ್ಲೇ ಹೋಗುತ್ತೇನೆ ಎಂದು ಹೇಳಿದ್ದಾರೆ. ಮೋದಿ ಅವರು ಅರ್ಥಿಕವಾಗಿ ದೇಶಕ್ಕೆ ಯಾವ ರೀತಿ ಕೊಡುಗೆ ಕೊಡುತ್ತಿದ್ದಾರೋ, ಅದೇ ರೀತಿಯ ಮಾರ್ಗದಲ್ಲಿ ಹೋಗುತ್ತೇನೆ ಎಂದು ಹೇಳಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ತಿಳಿದಿದೆಯಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಬಿಎಸ್​ವೈ ಮಂಡಿಸಿದ ಬಜೆಟ್​ನಲ್ಲಿ ಮಿರ್ಚಿ ಮಂಡಕ್ಕಿ ಖಾರಾನೂ ಇಲ್ಲ, ಶಕ್ತಿನೂ ಇಲ್ಲ, ಹಣನೂ ಇಲ್ಲ: ಡಿಕೆಶಿ ವ್ಯಂಗ್ಯ
ನಮ್ಮ ರಾಜ್ಯ ತೆರಿಗೆ ಸಂಗ್ರಹದಲ್ಲಿ ಹಿಂದೆ ಏನು ಬಿದ್ದಿಲ್ಲ. ಕಳೆದ ಬಜೆಟ್‌ನಲ್ಲಿ ಇಟ್ಟುಕೊಂಡಿದ್ದ ತೆರಿಗೆ ಸಂಗ್ರಹದ ನಿರೀಕ್ಷೆಯ ಹತ್ರ ಹೋಗಿದ್ದೇವೆ. ಆದರೆ, ಬಜೆಟ್​ನಲ್ಲಿ ಯಾವುದು ಕೂಡ ಸ್ಪಷ್ಟತೆ ಇಲ್ಲ. ಕೆಲವು ನನ್ನ ಕಾರ್ಯಕ್ರಮಗಳೇ ಮುಂದುವರಿದಿವೆ. ಕೇಂದ್ರ ಸರ್ಕಾರ ನಮ್ಮ ಪಾಲು ಕೊಡುತ್ತಾರೋ, ಇಲ್ಲವೋ ಎನ್ನುವುದನ್ನು ಜನರಿಗೆ ಸ್ಪಷ್ಟ ಸಂದೇಶ ಕೊಡಲು ಸಾಧ್ಯವಾಗಿಲ್ಲ ಎಂದು ಬಜೆಟ್​ ಕುರಿತು ಎಚ್​ಡಿಕೆ ಅಸಮಾಧಾನ ಹೊರಹಾಕಿದರು.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 17 =
Remember me
