ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಜೆಟ್ ಎಲ್ಲ ದೃಷ್ಟಿಗಳಿಂದ ನೋಡಿದಾಗ ಸಾಮಾನ್ಯ ಬಜೆಟ್ ಆಗಿದೆ. ಕೈಗಾರಿಕೆ ಹಾಗೂ ಮೂಲಸೌಕರ್ಯ ಕ್ಷೇತ್ರಕ್ಕೆ ಆದ್ಯತೆಯನ್ನೇನೋ ನೀಡಿದ್ದಾರೆ, ಆದರೆ ಕರೊನಾ ಸಂಕಷ್ಟದ ಸಮಯದಲ್ಲಿ ಎಷ್ಟು ನೀಡಬೇಕಾಗಿತ್ತೋ ಅಷ್ಟು ಪ್ರಮಾಣದಲ್ಲಿ ನೀಡಿಲ್ಲ. ಯಾವುದೇ ಹೊಸ ತೆರಿಗೆ ಹಾಕಿಲ್ಲ. ರಿಯಲ್ ಎಸ್ಟೇಟ್ ಉದ್ಯಮ ಬೆಳೆಯುವುದಕ್ಕೆ ನೋಂದಣಿಯಲ್ಲಿ ಶೇ. 3ಕ್ಕೆ ಇಳಿಸಲಾಗಿದೆ. ಈ ಕ್ರಮದಿಂದಾಗಿ ಮೊದಲ ಬಾರಿ ಮನೆ ಖರೀದಿ ಮಾಡುವವರ ಜತೆಗೆ ಆ ವರ್ಗಕ್ಕೂ ಅನುಕೂಲವಾಗುತ್ತದೆ. ಬೆಂಗಳೂರಿನ ಹೆಸರಘಟ್ಟದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ (ಆರ್ ಆಂಡ್ ಡಿ) ಅನುಕೂಲವಾಗುವ ರೀತಿಯಲ್ಲಿ ಥೀಮ್ ಪಾರ್ಕ್ ಮಾಡುವುದಾಗಿ ಘೋಷಿಸಲಾಗಿದೆ. ಇದು ಉತ್ತಮ ನಿರ್ಧಾರ.
ಏಕೆಂದರೆ ಯಾವ ರಾಜ್ಯ ಆರ್ ಆಂಡ್ ಡಿ ಗೆ ಆದ್ಯತೆ ನೀಡುತ್ತದೆಯೋ ಅಂತಹ ರಾಜ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಸಹಕಾರಿಯಾಗುತ್ತದೆ. ಸಣ್ಣ ಸಣ್ಣ ಪುಡ್​ಪಾರ್ಕ್ ಗಳಿಗೆ ಶೇ.35ರಷ್ಟು ಹಣವನ್ನು ಸರ್ಕಾರ ನೀಡುತ್ತಿದೆ. ಇದರಿಂದ ಉದ್ಯಮದ ಬೆಳವಣಿಗೆಯ ಜತೆಗೆ ಕೃಷಿಗೂ ಪೂರಕವಾಗುತ್ತದೆ. ಉದ್ಯೋಗದ ಅವಕಾಶಗಳು ಸೃಷ್ಟಿಯಾಗುತ್ತವೆ. ಅದರಿಂದ ಜನಜೀವನದ ನೆಮ್ಮದಿಗೆ ಸಹಕಾರಿಯಾಗುತ್ತದೆ. ಕೈಗಾರಿಕೆಯ ಬೆಳವಣಿಗೆಗೆ ಪೂರಕವಾಗಿ ವಿಮಾನ ನಿಲ್ದಾಣಗಳು, ರೈಲ್ವೆ, ರಸ್ತೆಯಂತಹ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಮೆಟ್ರೋ ಹಾಗೂ ಬೆಂಗಳೂರು ಅಭಿವೃದ್ದಿಗೆ ನೀಡಿರುವ ಆದ್ಯತೆಯಿಂದ ಸಹ ನಗರದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಉತ್ತಮ ವಾತಾವರಣ ಸಿಕ್ಕಂತೆ ಆಗುತ್ತದೆ. ಕೈಗಾರಿಕೆ ಕ್ಲಸ್ಟರ್, ಟೆಕ್ಸ್​ಟೈಲ್ ಪಾರ್ಕ್ ಗಳ ಅಭಿವೃದ್ಧಿಯಿಂದಾಗಿ ಜಿಲ್ಲೆಗಳಲ್ಲಿ ಅಭಿವೃದಿ ಚಟುವಟಿಕೆಗಳಿಗೆ ಸಹಾಯಕವಾಗುತ್ತದೆ. ಕೈಗಾರಿಕಾ ಟೌನ್​ಶಿಪ್​ಗಳನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಕೈಗಾರಿಕೆಗೆ ಪ್ರತ್ಯೇಕ ಆಸ್ತಿ ತೆರಿಗೆ ನಿಗದಿ ಮಾಡುವುದಾಗಿ ಹೇಳಿರುವುದು ಸಹ ಸ್ವಾಗತಾರ್ಹ ಬೆಳವಣಿಗೆಯೇ ಆಗಿದೆ.
ಪರಿಸರ ಪ್ರವಾಸೋದ್ಯಮಕ್ಕೆ ಸರ್ಕಾರ ಈ ಬಜೆಟ್​ನಲ್ಲಿ ಆದ್ಯತೆ ನೀಡಿದೆ. ಇದಕ್ಕಾಗಿ 100 ಕೋಟಿ ರೂ.ಗಳ ಅನುದಾನ ಮೀಸಲಿಟ್ಟಿದೆ. ಬೆಂಗಳೂರಿನ ವಿಮಾನ ನಿಲ್ದಾಣ ಸಮೀಪದಲ್ಲಿ ಸಿಗ್ನೇಚರ್ ಪಾರ್ಕ್ ಮಾಡಲು ಮುಂದಾಗಿರುವುದು ಉತ್ತೇಜನ ಕ್ರಮವಾಗಿದೆ. ಅರ್ಕಾವತಿ, ಕಾವೇರಿ ನದಿ ಜೋಡಣೆ ಮಾಡಲು ಆದ್ಯತೆ ನೀಡಲಾಗಿದೆ. ಏರೋಸ್ಪೇಸ್ ನೀತಿಯನ್ನು ಪ್ರಕಟಿಸಿರುವುದು ಆತ್ಮನಿರ್ಭರ ಸಾಕಾರಕ್ಕೆ ಪೂರಕವಾಗಬಹುದು. ಎಂಎಸ್​ಎಂಇಗಳಿಗೂ ಮಹಿಳಾ ಉದ್ಯಮಿಗಳಿಗೆ ಕೊಟ್ಟಂತೆ ಕಡಿಮೆ ಬಡ್ಡಿದರದಲ್ಲಿ ಸಾಲ ವ್ಯವಸ್ಥೆ ಕಲ್ಪಿಸುವ ಅಗತ್ಯವಿತ್ತು. ಇದರಿಂದ ತುಂಬ ಅನುಕೂಲವಾಗುತ್ತಿತ್ತು. ಎಪಿಎಂಸಿ ಸೆಸ್ ಕಡಿಮೆ ಮಾಡುವತ್ತ ಸರ್ಕಾರ ಮನಸ್ಸು ಮಾಡಬೇಕಿತ್ತು. ವಿದ್ಯುತ್ ದರ ಕಡಿಮೆ ಮಾಡಲು ಆದ್ಯತೆ ನೀಡುವುದು ತೀರ ಅವಶ್ಯಕವಾಗಿತ್ತು. ಹೋಟೆಲ್, ಆತಿಥ್ಯ, ಸಾರಿಗೆ, ಶಿಕ್ಷಣ ಕ್ಷೇತ್ರಕ್ಕೆ ಇನ್ನಷ್ಟು ಆದ್ಯತೆಯನ್ನು ಸರ್ಕಾರ ನೀಡಬೇಕಾಗಿತ್ತು. ಸರ್ಕಾರ 71 ಸಾವಿರ ಕೋಟಿ ರೂ.ಗಳ ಸಾಲ ಮಾಡುತ್ತಿದ್ದು ಅದರ ಸದ್ಬಳಕೆಯಾಗುವಂತೆ ಮುಂದಿನ ದಿನಗಳಲ್ಲಿ ನೋಡಿಕೊಳ್ಳಬೇಕು.
|ಪೆರಿಕಲ್ ಸುಂದರ್ಅಧ್ಯಕ್ಷ, ಎಫ್​ಕೆಸಿಸಿಐ, ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − seven =
Remember me
