ಬೆಂಗಳೂರು:ಉತ್ತಮ ಆಡಳಿತ, ಪಕ್ಷ- ಸರ್ಕಾರದ ವರ್ಚಸ್ಸು ವೃದ್ಧಿ, ಮುಂಬರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಕಡಿಮೆ ಅವಧಿಯಲ್ಲಿ ಜನರ ವಿಶ್ವಾಸ ಗಳಿಸುವ ಉದ್ದೇಶ ಈಡೇರಿಕೆಗಾಗಿ ‘ಟೀಂ ಬೊಮ್ಮಾಯಿ’ ಸನ್ನದ್ಧವಾಗಿದೆ. ಬಿ.ಎಸ್.ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ ಜವಾಬ್ದಾರಿ ನೊಗಹೊತ್ತ ಬಸವರಾಜ ಬೊಮ್ಮಾಯಿ 29 ಸದಸ್ಯರ ಸಂಪುಟ ರಚಿಸಿಕೊಂಡಿದ್ದಾರೆ. ಬುಧವಾರ ರಾಜಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ತಾವರ್​ಚಂದ್ ಗೆಹಲೋತ್ ನೂತನ ಸಚಿವರಿಗೆ ಗೋಪ್ಯತಾ ಪ್ರಮಾಣವಚನ ಬೋಧಿಸಿದರು.
ಬಿಎಸ್​ವೈ ಸಂಪುಟದಲ್ಲಿದ್ದ 7 ಮಂದಿಗೆ ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿ ಮುಂದುವರಿಯಲು ಅವಕಾಶ ನಿರಾಕರಿಸಲಾಗಿದ್ದು, ಆರು ಹೊಸ ಮುಖಗಳಿಗೆ ಮಣೆಹಾಕಲಾಗಿದೆ. ಹಿರಿಯರ ‘ಪ್ರಾಬಲ್ಯ’, ಹೊಸಬರ ‘ಸಹಯೋಗ’ದೊಂದಿಗೆ ಸಿಎಂ ಬೊಮ್ಮಾಯಿಯವರು ಸರ್ಕಾರ ನಡೆಸಬೇಕಾಗಿದೆ. ಪಕ್ಷದ ವರಿಷ್ಠರು ಸಹ ಎಚ್ಚರಿಕೆ ಹೆಜ್ಜೆ ಇರಿಸಿ ಹೆಚ್ಚಿನ ಪ್ರಯೋಗಕ್ಕೆ ಒಳಪಡಿಸದೇ ಮಧ್ಯಮ ಮಟ್ಟದ ಸರ್ಜರಿ ನಡೆಸಿರುವುದು ಕಾಣಿಸಿದೆ. ಒಟ್ಟಾರೆ ಹೊಸ ಸಚಿವ ಸಂಪುಟ ರಚನೆಯಾಗುವ ಮೂಲಕ ಕೆಲವು ದಿನಗಳಿಂದ ಇದ್ದ ರಾಜಕೀಯ ಮಸುಕು ಸರಿದಿದೆ. ಅತಿವೃಷ್ಟಿ ಮತ್ತು ಕರೊನಾ ಎದುರಿಸಲು 29 ಹುರಿಯಾಳುಗಳು ಬೊಮ್ಮಾಯಿ ಅವರಿಗೆ ಸಿಕ್ಕಂತಾಗಿದೆ. ಜತೆಗೆ ಅವರೇ ಹೇಳಿಕೊಂಡಂತೆ ಹೊಸ ಶಕ್ತಿ ಮತ್ತು ಅನುಭವದ ಸಮ್ಮಿಶ್ರ ಸಂಪುಟ ಇದಾಗಿರುತ್ತದೆ. ಉತ್ತಮ ಆಡಳಿತ, ಮುಂಬರುವ ಚುನಾವಣೆ ಎದುರಿಸಲು ಪೂರಕವಾಗಿ ಸಂಪುಟವಾಗಿದ್ದು, ಬರುವ ದಿನಗಳಲ್ಲಿ ರಾಜ್ಯದ ಜನರ ಸಮಸ್ಯೆ ಪರಿಹರಿಸಿ, ಜನರ ವಿಶ್ವಾಸ ಗಳಿಸಿ ಒಳ್ಳೆಯ ಆಡಳಿತ ಕೊಡಲಿದ್ದೇವೆ ಎಂದು ಅವರು ನಾಡಿನ ಜನರಿಗೆ ಭರವಸೆ ನೀಡಿದ್ದಾರೆ. ಜುಲೈ 27ರಂದು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದ ಬಸವರಾಜ ಬೊಮ್ಮಾಯಿ, 28ರಂದೇ ಪ್ರಮಾಣವಚನ ಸ್ವಿಕರಿಸಿದ್ದರು. ಬಳಿಕ ಸಂಪುಟ ರಚನೆ ಕಸರತ್ತಿಗೆ ತೊಡಗಿಕೊಂಡು ವರಿಷ್ಠರ ಸಮ್ಮುಖ ಪ್ರಸ್ತಾಪಗಳನ್ನು ಮಂಡಿಸಿದ್ದರು.
ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಬೊಮ್ಮಾಯಿ ಅವರೊಂದಿಗೆ ಕುಳಿತು ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಅಳೆದು ತೂಗಿ ಸೋಸಿ, ಲಾಭ ನಷ್ಟದ ಗುಣಾಕಾರ- ಭಾಗಾಕಾರ ಮಾಡಿ ಮಂಗಳವಾರ ಸಂಭಾವ್ಯ ಸಚಿವರ ಪಟ್ಟಿ ಸಿದ್ಧಪಡಿಸಿದ್ದರು. ಕೊನೆಯ ಕ್ಷಣದ ಬದಲಾವಣೆಯ ಎಚ್ಚರಿಕೆ ನೀಡಿಯೇ ಪಟ್ಟಿಯಲ್ಲಿದ್ದವರಿಗೆ ಸೂಚನೆ ನೀಡಬಹುದೆಂದು ಮುಖ್ಯಮಂತ್ರಿಗೆ ತಿಳಿಸಿದ್ದರು. ಅಂತಿಮವಾಗಿ ಬುಧವಾರ ಬೆಳಗ್ಗೆ ಪಟ್ಟಿ ಅಂತಿಮಗೊಂಡಿದ್ದು, ಅಂತಿಮ ಕ್ಷಣದಲ್ಲಿ ಕೆಲವು ಬದಲಾವಣೆಗಳಾಗಿದೆ. ಇದು ಸಚಿವಾಕಾಂಕ್ಷಿಗಳ ಬೇಸರ, ಅಸಮಾಧಾನಕ್ಕೂ ಕಾರಣವಾಗಿದೆ. ಆದರೆ ಈ ಅಸಮಾಧಾನ ದೊಡ್ಡ ಮಟ್ಟದಲ್ಲಿ ಹೆಪ್ಪುಗಟ್ಟಲು ಸೂಕ್ತ ವಾತಾವರಣ ಸೃಷ್ಟಿಯಾಗಿಲ್ಲ ಮತ್ತು ಅಸಮಾಧಾನಿಗಳಿಗೆ ನಾಯಕನಾಗಲು ಯಾರೂ ಮುಂದೆ ಬಂದಂತೆ ಕಾಣಿಸುತ್ತಿಲ್ಲ. ಪ್ರಮಾಣವಚನ ಕಾರ್ಯಕ್ರಮವು ಬಿ.ಎಸ್. ಯಡಿಯೂರಪ್ಪ ಸಮ್ಮುಖ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ನಡೆದ ಪರಿಣಾಮ ಊಹಾಪೋಹಗಳಿಗೂ ಅವಕಾಶ ಇಲ್ಲದಂತಾಯಿತು.
ಖಾತೆಗೆ ಮುನ್ನವೇ ಉಸ್ತುವಾರಿ
ಬೆಂಗಳೂರು: ನೂತನ ಸಚಿವರಿಗಿನ್ನು ಖಾತೆ ಹಂಚಿಕೆ ಆಗದಿದ್ದರೂ, ನೆರೆ ಹಾಗೂ ಕರೊನಾ ನಿರ್ವಹಣೆ ಕಾರಣಕ್ಕೆ ಎಲ್ಲ 29 ಸಚಿವರಿಗೆ ಜಿಲ್ಲಾ ಉಸ್ತುವಾರಿಗಳನ್ನು ಹಂಚಿಕೆ ಮಾಡಲಾಗಿದೆ.
ಸಿಎಂ ಎಂದಿದ್ದವರಿಗಿಲ್ಲ ಸ್ಥಾನ
ತಾವು ಮುಂದಿನ ಸಿಎಂ ಎಂದು ನಂಬಿ ಕೊಂಡಿದ್ದ, ಬಿಂಬಿಸಿಕೊಂಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಮತ್ತು ನಾಯಕತ್ವ ಬದಲಾವಣೆಯಲ್ಲಿ ಕೈಯಾಡಿಸಿದೆನೆಂದು ಮೆರೆಯುತ್ತಿದ್ದ ಸಿ.ಪಿ.ಯೋಗೇಶ್ವರ್​ಗೆ ಪಕ್ಷದ ವರಿಷ್ಠರು ಶಾಕ್ ನೀಡಿದ್ದಾರೆ. ಬೊಮ್ಮಾಯಿ ಸಂಪುಟದಲ್ಲಿ ಅವರಿಗೆ ಅವಕಾಶ ನಿರಾಕರಿಸುವ ಮೂಲಕ ಉಳಿದ ವರಿಗೂ ಸಂದೇಶ ರವಾನಿಸಿದ್ದಾರೆ. ಬಿಎಸ್​ವೈ ವಿರುದ್ಧ ಗುರುತರ ಆರೋಪ ಮಾಡುತ್ತ ಮುಜುಗರ ತರುತ್ತಿದ್ದವರನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಿಲ್ಲ.
ಜಾತಿವಾರು ಪ್ರಾತಿನಿಧ್ಯ
ಯಾರಿಗೆ ಕೊಕ್
1. ಜಗದೀಶ ಶೆಟ್ಟರ್ 2.ಸುರೇಶ್ ಕುಮಾರ್ 3.ಅರವಿಂದ ಲಿಂಬಾವಳಿ 4.ಲಕ್ಷ್ಮಣ ಸವದಿ 5.ಸಿ.ಪಿ.ಯೋಗೇಶ್ವರ್ 6.ಶ್ರೀಮಂತ ಪಾಟೀಲ್ 7.ಆರ್.ಶಂಕರ್
ಆರು ಹೊಸ ಮುಖ
ಸಂಪುಟ ಸೇರಿದ 29 ಸಚಿವರಲ್ಲಿ ಹಾಲಪ್ಪ ಆಚಾರ್, ಸುನೀಲ್​ಕುಮಾರ್, ಆರಗ ಜ್ಞಾನೇಂದ್ರ, ಬಿ.ಸಿ.ನಾಗೇಶ್, ಶಂಕರಪಾಟೀಲ್ ಮುನೇನಕೊಪ್ಪ, ಮುನಿರತ್ನ ಹೊಸಬರು.
ಡಿಸಿಎಂ ಹುದ್ದೆ ಇಲ್ಲ
ಸಾಂವಿಧಾನಿಕವಲ್ಲದ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಜಾತಿ ಲೆಕ್ಕಾಚಾರಕ್ಕೆ ಪ್ರಾಮುಖ್ಯತೆ ಕೊಡುವ ಪ್ರಯೋಗ ನಿರೀಕ್ಷಿತ ಮಟ್ಟದಲ್ಲಿ ಫಲ ಕೊಡದಿರುವುದರಿಂದ ಸದ್ಯಕ್ಕೆ ಡಿಸಿಎಂ ಹುದ್ದೆ ರಚನೆ ಪ್ರಸ್ತಾಪ ಕೈಬಿಡಲಾಗಿದೆ. ದೆಹಲಿಯಲ್ಲಿ ನಡೆದ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಸಲಹೆಯನ್ನು ವರಿಷ್ಠರು ಪರಿಗಣಿಸಿದ್ದಾರೆ. ಒಂದು ವೇಳೆ ಅಗತ್ಯವೆನಿಸಿದರೆ ಮುಂದೆ ಅದನ್ನು ಸೃಷ್ಟಿಸಬಹುದು; ಈಗ ಬೇಡ ಎಂದು ಒಮ್ಮತದ ತೀರ್ವನವಾಗಿದೆ. ಈ ನಡುವೆ ಡಿಸಿಎಂ ಹುದ್ದೆಯ ನಿರೀಕ್ಷೆಯಲ್ಲಿದ್ದ ಶ್ರೀರಾಮುಲು, ಆರ್. ಅಶೋಕ್​ಗೆ ನಿರಾಸೆಯಾಗಿದೆ ಮತ್ತು ಬಿಎಸ್​ವೈ ಸಂಪುಟದಲ್ಲಿ ಡಿಸಿಎಂ ಆಗಿದ್ದ ಅಶ್ವತ್ಥನಾರಾಯಣ, ಗೋವಿಂದ ಕಾರಜೋಳರು ಇನ್ನು ಮುಂದೆ ಸಂಪುಟ ದರ್ಜೆ ಸಚಿವರಾಗಷ್ಟೇ ಇರುತ್ತಾರೆ. ಲಕ್ಷ್ಮಣ ಸವದಿ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡರೂ ವಿಧಾನ ಪರಿಷತ್ ಸದಸ್ಯರಾಗುವ ಅವಕಾಶ ನೀಡಿ, ಮಹತ್ವದ ಸಾರಿಗೆ ಖಾತೆ ಕೊಟ್ಟು ನಾಯಕತ್ವ ಬೆಳೆಸುವ ಉದ್ದೇಶದಿಂದ ದೆಹಲಿ ನಾಯಕರು ಮಾಡಿದ ಪ್ರಯೋಗ ವಿಫಲಗೊಂಡಿರುವುದೂ ಸಹ ಈ ಸಂಪುಟ ರಚನೆಯಿಂದ ಸ್ಪಷ್ಟಗೊಂಡಿದೆ.
ಸಂಪುಟದ ಶಿಕ್ಷಣ ಮಟ್ಟವೆಷ್ಟು?
ಸಿಎಂ ಸೇರಿದಂತೆ ನಾಲ್ವರು ಇಂಜಿನಿಯರ್, ಇಬ್ಬರು ಡಾಕ್ಟರ್, ಒಬ್ಬರು ಸ್ನಾತಕೋತ್ತರ ಪದವೀಧರರು ಸೇರಿ 12 ಪದವೀಧರರು, ಒಬ್ಬರು ಡಿಪ್ಲೊಮಾ ಪದವಿ ಹೊಂದಿದವರು ಇದ್ದು, ಇತ್ತೀಚಿನ ವರ್ಷಗಳಲ್ಲಿ ‘ಅತ್ಯಂತ ಸುಶಿಕ್ಷಿತ ಸಂಪುಟ’ ಇದು ಎಂದು ಕರೆಸಿಕೊಂಡಿದೆ. ಹಾಗೆಯೇ ಸಂಪುಟ ಸದಸ್ಯರ ಸರಾಸರಿ ವಯಸ್ಸು 60.
ಸಮಾಧಾನ ತಾರದ ಬದಲಾವಣೆ
ರಾಜ್ಯ ಸಂಪುಟ ರಚನೆ ವೇಳೆ ಅಚ್ಚರಿ ನಿರೀಕ್ಷೆಯಲ್ಲಿದ್ದವರಿಗೆ ಬಿಜೆಪಿ ವರಿಷ್ಠರು ಖುಷಿ ತಂದಿಲ್ಲ. ಹಿರಿಯರು ಪ್ರಭಾವ ಬೀರಿ, ಗೋಗರೆದು, ಜಾತಿ ಕಾರ್ಡ್ ಪ್ರಯೋಗಿಸಿ ವರಿಷ್ಠರ ಮೇಲೆ ಒತ್ತಡ ಹೇರಿದ್ದರಿಂದಾಗಿ ಮತ್ತು ಜಾತಿ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನದಲ್ಲಿ ‘ಯಂಗ್ ಕ್ಯಾಬಿನೆಟ್’ ಅಸಾಧ್ಯವಾಗಿದೆ ಮತ್ತು ದೊಡ್ಡ ಬದಲಾವಣೆಗೂ ಅವಕಾಶ ಸಿಕ್ಕಿಲ್ಲವಾಗಿದೆ. ಒಂದಷ್ಟು ಕಳಂಕಿತರಿಗೂ ಅವಕಾಶ ಮುಂದುವರಿಸಿರುವುದು ಪಕ್ಷನಿಷ್ಠರಿಗೆ ಸಿಟ್ಟುತರಿಸಿದೆ. ಈ ವೇಳೆ ಜಗದೀಶ ಶೆಟ್ಟರ್ ಒಬ್ಬರೇ ‘ತ್ಯಾಗಿ’ಯೆನಿಸಿಕೊಂಡವರಾಗಿದ್ದಾರೆ.
ಮರು ಪ್ರಮಾಣವಚನ!
ಬುಧವಾರ ರಾಜಭವನದ ಗಾಜಿನಮನೆಯಲ್ಲಿ ನಡೆದ ಪ್ರಮಾಣವಚನ ವೇಳೆ ಶಿಷ್ಟಾಚಾರದಂತೆ ಗೋಪ್ಯತಾ ಪ್ರತಿಜ್ಞೆ ವಿಧಿ ನಡೆಸದೆ ತಡವರಿಸಿದ ಶಾಸಕ ಶಂಕರ್ ಪಾಟೀಲ್ ಮುನೇನಕೊಪ್ಪ ಸಂಜೆ ಪುನಃ ರಾಜಭವನಕ್ಕೆ ತೆರಳಿ ರಾಜ್ಯಪಾಲರ ಸಮ್ಮುಖ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯ ರಾಜಕೀಯ ಇತಿಹಾಸದಲ್ಲಿ ಇದು ಅಪರೂಪದ ಪ್ರಸಂಗವಾಗಿದೆ. ಈ ಮುನ್ನ ನಡೆಸಿದ್ದ ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದ ಮುನೇನಕೊಪ್ಪ ಮುಜುಗರಕ್ಕೆ ಒಳಗಾಗಿದ್ದರು. ಬಳಿಕ ಅಧಿಕಾರಿಗಳ ಸಲಹೆಯಂತೆ ಪುನಃ ರಾಜಭವನಕ್ಕೆ ತೆರಳಿ ಪ್ರಕ್ರಿಯೆ ಪೂರ್ಣಗೊಳಿಸಿದರು.
ಲಿಂಗಾಯತರಿಗೆ ಸಿಂಹಪಾಲು
ಬೊಮ್ಮಾಯಿ ಸಚಿವ ಸಂಪುಟದಲ್ಲಿ ವೀರಶೈವ-ಲಿಂಗಾಯತ ಸಮುದಾಯ ಹೆಚ್ಚಿನ ಸ್ಥಾನ ಪಡೆದಿದ್ದರೆ, ಒಕ್ಕಲಿಗರು ಆ ನಂತರದ ಸ್ಥಾನದಲ್ಲಿದ್ದಾರೆ. ಸಿಎಂ ಸೇರಿ 10 ಜನ ವೀರಶೈವ-ಲಿಂಗಾಯತರಿದ್ದಾರೆ. -ಠಿ;ವೀರಶೈವ-ಲಿಂಗಾಯತ: ಬಸವರಾಜ ಬೊಮ್ಮಾಯಿ (ಸಿಎಂ), ವಿ. ಸೋಮಣ್ಣ, ಉಮೇಶ್ ಕತ್ತಿ, ಜೆ.ಸಿ. ಮಾಧುಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ, ಹಾಲಪ್ಪ ಆಚಾರ್, ಶಂಕರ ಪಾಟೀಲ್ ಮುನೇನಕೊಪ್ಪ, ಬಿ.ಸಿ. ಪಾಟೀಲ್, ಸಿ.ಸಿ. ಪಾಟೀಲ್ -ಠಿ;ಒಕ್ಕಲಿಗರು: ಆರ್. ಅಶೋಕ್, ಡಾ. ಸಿ.ಎನ್. ಅಶ್ವತ್ಥನಾರಾಯಣ, ಎಸ್.ಟಿ. ಸೋಮಶೇಖರ್, ಡಾ. ಕೆ. ಸುಧಾಕರ್, ಕೆ. ಗೋಪಾಲಯ್ಯ, ಆರಗ ಜ್ಞಾನೇಂದ್ರ, ಕೆ.ಸಿ. ನಾರಾಯಣಗೌಡ -ಠಿ;ಬ್ರಾಹ್ಮಣರು: ಬಿ.ಸಿ. ನಾಗೇಶ್, ಅರಬೈಲ್ ಶಿವರಾಮ ಹೆಬ್ಬಾರ್ -ಠಿ;ಕುರುಬರು: ಕೆ.ಎಸ್. ಈಶ್ವರಪ್ಪ, ಬಿ.ಎ. ಬಸವರಾಜ್, ಎಂ.ಟಿ.ಬಿ. ನಾಗರಾಜ್ -ಠಿ;ಪರಿಶಿಷ್ಟ ಜಾತಿ: ಗೋವಿಂದ ಕಾರಜೋಳ, ಎಸ್. ಅಂಗಾರ, ಪ್ರಭು ಚವ್ಹಾಣ್ -ಠಿ;ಪರಿಶಿಷ್ಟ ಪಂಗಡ: ಬಿ. ಶ್ರೀರಾಮುಲು -ಠಿ;ಬಿಲ್ಲವ: ಕೋಟ ಶ್ರೀನಿವಾಸ ಪೂಜಾರಿ, ವಿ. ಸುನೀಲ್​ಕುಮಾರ್ -ಠಿ;ರಜಪೂತ: ಆನಂದ ಸಿಂಗ್ -ಠಿ;ಕಮ್ಮ ನಾಯ್ಡು: ಮುನಿರತ್ನ
ಜಿಲ್ಲಾ ಉಸ್ತುವಾರಿ
ಗೋವಿಂದ ಕಾರಜೋಳ: ಬೆಳಗಾವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 15 =
Remember me
