ಬೆಂಗಳೂರು:ಶುಕ್ರವಾರ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಸಂಜೆ ನಾಲ್ಕು ಗಂಟೆಗೆ ನಡೆಯಲಿರುವ ಸಭೆಗೆ ನೂತನ ಸಚಿವರು ಹೊಸ ಖಾತೆಗಳೊಂದಿಗೆ ಆಗಮಿಸಲಿದ್ದಾರೆ.
ಇದನ್ನೂ ಓದಿ:ಪ್ರವಾಸೋದ್ಯಮ ಆಸಕ್ತಿಯಿದೆಯೆ? ಹಾಗಿದ್ದರೆ ಕೆಟಿಐಎಲ್‍ಗೆ ಇಂದೇ ಅರ್ಜಿ ಸಲ್ಲಿಸಿ…
ಏಳು ಸಚಿವರು ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಯಾರ್ಯಾರಿಗೆ ಯಾವ ಯಾವ ಖಾತೆ ಹಂಚಿಕೆ ಮಾಡಲಾಗುವುದು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯದ ಮಟ್ಟಿಗೆ ನಡೆಯುತ್ತಿರುವ ಚರ್ಚೆಯ ಪ್ರಕಾರ ಅರವಿಂದ ಲಿಂಬಾವಳಿಗೆ ಉನ್ನತ ಶಿಕ್ಷಣಸ ಸಚಿವಾಲಯ, ಉಮೇಶ್ ಕತ್ತಿಗೆ ಸಣ್ಣ ನೀರಾವರಿ ಅಥವಾ ತೋಟಗಾರಿಕೆ ಸಚಿವಾಲಯ, ಯೋಗೇಶ್ವರ್​ಗೆ ಪ್ರವಾಸೊದ್ಯಮ, ರೇಷ್ಮೆ ಸಚಿವಾಲಯ, ಎಂಟಿಬಿ ನಾಗರಾಜ್​ಗೆ ಅಬಕಾರಿ ಇಲಾಖೆ, ಮುರಗೇಶ್ ನಿರಾಣಿಗೆ ಇಂಧನ ಅಥವಾ ಸಣ್ಣ ಕೈಗಾರಿಕೆ, ಅಂಗಾರಗೆ ಒಳನಾಡು, ಬಂದರು, ಮೀನುಗಾರಿಕೆ ಹಾಗೂ ಆರ್,‌ಶಂಕರ್​ಗೆ ಕನ್ನಡ ಮತ್ತು ಸಂಸ್ಕೃತಿ, ಯುವಜನಸೇವಾ ಇಲಾಖೆಯ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಆರ್‌.ಶಂಕರ್ ಇದಕ್ಕೆ ಒಪ್ಪಲಿಲ್ಲ ಅಂದರೆ ಸಣ್ಣ ಕೈಗಾರಿಕೆ ಇಲಾಖೆಯ ಜವಾಬ್ದಾರಿಯನ್ನು ನೀಡುವ ಸಾಧ್ಯತೆಯಿದೆ.
ಇದನ್ನೂ ಓದಿ:ನಿನ್ನ ಜತೆ ಮಲಗಲ್ಲ- ಡಿವೋರ್ಸೂ ಕೊಡಲ್ಲ ಎಂದರೆ ಕಾನೂನಿನಲ್ಲಿ ಪತಿ ಏನು ಮಾಡಬಹುದು?
ಇಂದು ರಾತ್ರಿ ಸಚಿವರ ಜತೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಲಿದ್ದಾರೆ. ನಾಳೆ ಬೆಳಿಗ್ಗೆ ಸಚಿವರ ಖಾತೆಗಳ ಪಟ್ಟಿ ಪ್ರಕಟ ಮಾಡಲಾಗುವುದು ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)
ಗಂಡ ಊರಿನಲ್ಲಿ ಇಲ್ಲದಾಗ ನನ್ನ ಕರೆದು ಏನೇನೋ ಮಾಡಿದಳು- ಈಗ ದಿಕ್ಕೇ ತೋಚದಾಗಿದೆ, ಏನು ಮಾಡಲಿ?

ಎಣ್ಣೆ ಕುಡಿಯಲು ಹೋದವನು ವಾಪಾಸು ಬರಲೇ ಇಲ್ಲ; ಸ್ಕೆಚ್​ ಹಾಕಿ ಕೊಲೆ ಮಾಡಿಸಿದಳಾ ಪತ್ನಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
