ಬೆಂಗಳೂರು:ರಾಜ್ಯಾದ್ಯಂತ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬೆಳಗಿನ ಜಾವವೇ ಸಾಕಷ್ಟು ಮಂದಿ ತಮ್ಮ ಹಕ್ಕನ್ನು ಚಲಾಯಿಸಲು ತಮ್ಮ ತಮ್ಮ ಕ್ಷೇತ್ರದ ಮತಗಟ್ಟೆಗಳ ಬಳಿ ಜಮಾಯಿಸುತ್ತಿದ್ದಾರೆ. ರಾಜ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಮನೋಜ್​ ಕುಮಾರ್​ ಮೀನಾ ಅವರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಕುಟುಂಬ ಸಮೇತ ಆಗಮಿಸಿ ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರಿನ ಮತಗಟ್ಟೆ ನಂಬರ್​ 127ರಲ್ಲಿ ಮತದಾನ ಮಾಡಿದರು.
ಬಳಿಕ ಮಾತನಾಡಿದ ಅವರು ಇವತ್ತು ಬೆಳಗ್ಗೆ ಕುಟುಂಬದ ಜೊತೆ ಬಂದು ಮತಚಲಾಯಿಸಿದೆ. ನನ್ನ ಮಕ್ಕಳು ಮೊದಲ ಬಾರಿ ಮತ ಚಲಾಯಿಸುತ್ತಿದ್ದಾರೆ. ನಾವೇ ನಂ 127 ಮತಗಟ್ಟೆಯಲ್ಲಿ ಮೊದಲ ಮತದಾರರು. 224 ವಿಧಾನಸಭಾ ಕ್ಷೇತ್ರದಲ್ಲಿ 51 ಕೋಟಿ 31 ಲಕ್ಷ ಜನ ಮತ ಹಾಕುತ್ತಿದ್ದಾರೆ. ಸಖಿ ಬೂತ್ ರೀತಿಯಲ್ಲಿ ಈ ಬಾರಿ ವಿವಿಧ ಥೀಮ್ ಬೂತ್ ಮಾಡಿದ್ದೇವೆ. ಎಲ್ಲರನ್ನು ಮತದಾನ ಮಾಡುವಂತೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಥೀಮ್ ಬೂತ್ ಮಾಡಲಾಗಿದೆ. ಎಲ್ಲ ಬೂತ್​ಗಳಲ್ಲಿ ಮತದಾರರಿಗೆ ಎಲ್ಲ ವ್ಯವಸ್ಥೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ:ಗ್ರಾಮಪಂಚಾಯತಿಗೆ ಮತಗಟ್ಟೆ ಹೊರೆ?: ಸುತ್ತೋಲೆಗಳಿಂದ ಪಿಡಿಒಗಳು ಸುಸ್ತು
ಎಲ್ಲರೂ ಬಂದು ಮತದಾನ ಮಾಡಿ. ಬೆಂಗಳೂರಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯ ಜನ ಮತದಾನ ಮಾಡಲಿದ್ದಾರೆ. ಮಕ್ಕಳ ಮೊದಲ ವೋಟ್ ತುಂಬ ಖುಷಿಯಾಗ್ತಿದೆ ಎಂದು ತಿಳಿಸಿದರು.
ಕರ್ನಾಟಕ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ 113 ಸದಸ್ಯರ ಬಲವುಳ್ಳ ಸ್ಪಷ್ಟ ಬಹುಮತ ಬೇಕಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ಯಾರು ಕರ್ನಾಟಕದ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.(ದಿಗ್ವಿಜಯ ನ್ಯೂಸ್​)
ಬೇಡ ನಿರ್ಲಕ್ಷ್ಯ.. ಭವಿಷ್ಯವನ್ನೇ ಬದಲಿಸಬಹುದು ಒಂದು ಮತ!

ಭಗವದನುಭವ ಕಷ್ಟವಲ್ಲ ಬಹಳ ಸುಲಭ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − one =
Remember me
