ಬೆಂಗಳೂರು:ಕೇಂದ್ರ ಚುನಾವಣಾ ಆಯೋಗ ಇಂದು (ಮಾ.29) ಸುದ್ದಿಗೋಷ್ಠಿ ನಡೆಸಿ, ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಿಸಿದ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿ, ಚುನಾವಣಾ ಪೂರ್ವ ತಯಾರಿ ಹಾಗೂ ನೀತಿ ಸಂಹಿತೆಯ ಎಚ್ಚರಿಕೆ ಸೇರಿದಂತೆ ಅನೇಕ ಮಾಹಿತಿಗಳನ್ನು ತಿಳಿಸಿದೆ.
ಬಹುನಿರೀಕ್ಷಿತ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನವು ಮೇ 10ರಂದು ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಏಪ್ರಿಲ್ 13ಕ್ಕೆ ಅಧಿಸೂಚನೆ ಪ್ರಕಟವಾಗಲಿದೆ.
ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ ಮನೋಜ್​ ಕುಮಾರ್​ ಮೀನಾ ಅವರು ಮಾತನಾಡಿ, ಈ ಕ್ಷಣದಿಂದ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ. ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಸಂಸತ್​ ಸ್ಥಾನದಿಂದ ರಾಹುಲ್​ ಗಾಂಧಿ ಅನರ್ಹ; ವಯನಾಡು​ ಲೋಕಸಭೆ ಕ್ಷೇತ್ರಕ್ಕೆ ಸದ್ಯಕ್ಕಿಲ್ಲ ಉಪಚುನಾವಣೆ
ರಾಜ್ಯದಲ್ಲಿ 2.63 ಕೋಟಿ ಪುರುಷ ಮತದಾರರು ಹಾಗೂ 2.60 ಮಹಿಳಾ ಮತದಾರರು ಇದ್ದಾರೆ. 6,77,247 ಲಕ್ಷ ಮತದಾರರನ್ನು ಹೊಂದಿರುವ ಬೆಂಗಳೂರು ದಕ್ಷಿಣ ಕ್ಷೇತ್ರ ಹೆಚ್ಚು ಮತದಾರರಿರುವ ವಿಧಾನಸಭಾ ಕ್ಷೇತ್ರವಾಗಿದೆ. 1,68,562 ಲಕ್ಷ ಮತದಾರರನ್ನು ಹೊಂದುವ ಮೂಲಕ‌ ಶೃಂಗೇರಿ ವಿಧಾಸಭಾ‌ ಕ್ಷೇತ್ರ ಕಡಿಮೆ ಮತದಾರರಿರುವ ವಿಧಾನಸಭಾ ಕ್ಷೇತ್ರ ಎನಿಸಿಕೊಂಡಿದೆ.
ಚುನಾವಣೆಗಾಗಿ ಹೊಸ ಯಂತ್ರ ಬರುತ್ತಿದ್ದು, ಇದೇ ಮೊದಲ ಬಾರಿ ಉಪಯೋಗಿಸಲಾಗುತ್ತಿದೆ. M3 ಇವಿಎಮ್ ಯಂತ್ರವನ್ನು ಬಳಸಲಿದ್ದೇವೆ. ಎಲ್ಲ ರಾಜಕೀಯ ಪಕ್ಷಗಳ ಜತೆ ಹೊಸ ಯಂತ್ರವನ್ನು ಪರಿಶೀಲಿಸುತ್ತೇವೆ ಎಂದು ಮನೋಜ್​ ಕುಮಾರ್​ ಮೀನಾ ಮಾಹಿತಿ ನೀಡಿದರು.
ರಾಜ್ಯದ ಗಡಿಯಲ್ಲಿ 171 ಇಂಟರ್ ಸ್ಟೇಟ್ ಚೆಕ್ ಪೋಸ್ಟ್​ಗಳನ್ನು ನಿರ್ಮಾಣ ಮಾಡಲಾಗಿದೆ. ಈವರೆಗೂ ನಮ್ಮ ಇಲಾಖೆಯಿಂದ 53 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಸೀಜ್‌ ಮಾಡಿದ್ದೇವೆ. ಪೊಲೀಸ್ ಇಲಾಖೆಯಿಂದ 34 ಕೋಟಿ ರೂ., ಅಬಕಾರಿ ಇಲಾಖೆಯಿಂದ 10 ಕೋಟಿ ರೂ. ಮತ್ತು ಆದಾಯ ತೆರಿಗೆ ಇಲಾಖೆಯಿಂದ 1 ಕೋಟಿ ರೂ. ಸೀಜ್ ಮಾಡಲಾಗಿದೆ.
ಚುನಾವಣೆ ‌ಸಂಧರ್ಭದಲ್ಲಿ ಯಾರ ಆಮಿಷಕ್ಕೂ ಜನರು ಒಳಗಾಗಬಾರದು. ಅಂತಹ ಆಮಿಷ ಒಡ್ಡಿದ್ದರೆ ಆ ಬಗ್ಗೆ ದೂರು ನೀಡಬೇಕು. ಬೇಕಾದರೆ, ಚುನಾವಣಾ ಆಯೋಗದ ವೆಬ್​​ಸೈಟ್ ಮೂಲಕವು ದೂರು ನೀಡಬಹುದು. ಈ ಬಾರಿ ಮತದಾನ ಪ್ರಮಾಣವನ್ನು ಜಾಸ್ತಿ ಮಾಡಬೇಕು ಮತ್ತು ಹಣ ಹಂಚಿಕೆಯನ್ನು ತಡೆಗಟ್ಟುವುದಕ್ಕೆ ಜನರು ಸಹಕಾರ ನೀಡಬೇಕೆಂದು ಮನೋಜ್​ ಕುಮಾರ್​ ಮೀನಾ ಅವರು ಮನವಿ ಮಾಡಿದರು.
ಇದನ್ನೂ ಓದಿ:ಒಂದೇ ಹಂತದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ: ಮೇ 10ಕ್ಕೆ ಮತದಾನ, ಮೇ 13ರಂದು ಫಲಿತಾಂಶ
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್​ಪಿಸಿಐ)ಗೆ ಮನವಿ ಮಾಡಿದ್ದು, ಆನ್​ಲೈನ್​ ವ್ಯವಹಾರದ ಬಗ್ಗೆ ಮಾಹಿತಿ ಕೇಳಿದ್ದೇವೆ. 10 ಸಾವಿರ ರೂ.ಗಿಂತ ಜಾಸ್ತಿ ಹಣದ ವ್ಯವಹಾರ ಮಾಡಿದರೆ ನಾವು ಪರಿಶೀಲಿಸುತ್ತೇವೆ. ಹಣದ ಅವ್ಯವಹಾರ ತಡೆಗಟ್ಟಲು ಆದಷ್ಟು ಪ್ರಯತ್ನ ಮಾಡ್ತೀವಿ ಎಂದು ಮನೋಜ್​ ಕುಮಾರ್​ ತಿಳಿಸಿದರು.(ದಿಗ್ವಿಜಯ ನ್ಯೂಸ್​)
ಮತ ಎಣಿಕೆಗೆ ಎರಡು ದಿನ ಬೇಕೆ? ಬಲ್ಲವರು ತಿಳಿಸಿ; ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಉಪೇಂದ್ರ ಪ್ರಶ್ನೆ

ಚುನಾವಣೆ ಎದುರಿಸಲು ಸಿದ್ಧ, ನೀತಿ ಸಂಹಿತೆ ಪಾಲನೆಗೆ ಬದ್ಧ: ಸಿಎಂ ಬೊಮ್ಮಾಯಿ‌ ಹೇಳಿಕೆ

ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 14 =
Remember me
